ನಂಬಿಸಿ ಮೋಸ: ಪ್ರಿಯಕರನ ವಿರುದ್ಧ ಕಿರುತೆರೆ ನಟಿ ದೂರು

7

ನಂಬಿಸಿ ಮೋಸ: ಪ್ರಿಯಕರನ ವಿರುದ್ಧ ಕಿರುತೆರೆ ನಟಿ ದೂರು

Published:
Updated:
ನಂಬಿಸಿ ಮೋಸ: ಪ್ರಿಯಕರನ ವಿರುದ್ಧ ಕಿರುತೆರೆ ನಟಿ ದೂರು

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಕಿರುತರೆ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಖಾಸಗಿ ಕಂಪೆನಿಯೊಂದರ ಎಂಜಿನಿಯರ್ ಉಲ್ಲಾಸ್ ಪಟೇಲ್ ಎಂಬುವರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಜೂನ್ 9ರಂದು ದೂರು ಸಲ್ಲಿಸಿರುವ 27 ವರ್ಷದ ಸಂತ್ರಸ್ತೆ, ‘ವರ್ಷದ ಹಿಂದೆ ಫೇಸ್‌ಬುಕ್‌ ಮೂಲಕ ಉಲ್ಲಾಸ್‌ನ ಪರಿಚಯವಾಯಿತು. ಎಂಟು ತಿಂಗಳಿನಿಂದ ನಾವಿಬ್ಬರು ಪ್ರೀತಿ ಮಾಡುತ್ತಿದ್ದೆವು. ಇದೇ ಏಪ್ರಿಲ್‌ನಿಂದ ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿ ಮನೆ ಬಾಡಿಗೆ ಪಡೆದು, ಗಂಡ–ಹೆಂಡತಿಯಂತೆಯೇ ಇದ್ದೆವು’ ಎಂದು ಹೇಳಿದ್ದಾರೆ.‘ಉಲ್ಲಾಸ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಗಲೆಲ್ಲ ನಾನೇ ಹಣಕಾಸಿನ ನೆರವು ನೀಡುತ್ತಿದ್ದೆ. ನಾವು ಹೀಗಿರುವುದು ಒಳ್ಳೆಯದಲ್ಲ. ಮದುವೆ ಆಗಿಬಿಡೋಣ ಎಂದು ಇತ್ತೀಚೆಗೆ ಹೇಳಿದ್ದೆ. ಅದಕ್ಕೆ ಆತನೂ ಒಪ್ಪಿಕೊಂಡಿದ್ದ. ಕೆಲಸದ ನಿಮಿತ್ತ ಮೇ ತಿಂಗಳ ಕೊನೆ ವಾರದಲ್ಲಿ ಮೈಸೂರಿಗೆ ತೆರಳಿದ್ದ ನಾನು, ಜೂನ್ 3ರಂದು ಮನೆಗೆ ಮರಳಿದಾಗ ಉಲ್ಲಾಸ್ ಇರಲಿಲ್ಲ. ಫೋನ್ ಮಾಡಿದರೂ, ಸಂಪರ್ಕಕ್ಕೆ ಸಿಗಲಿಲ್ಲ.’

‘ಎರಡು ದಿನಗಳ ನಂತರ ಕರೆ ಸ್ವೀಕರಿಸಿದ ಆತ, ‘ನಮ್ಮ ಮದುವೆಗೆ ಪೋಷಕರು ಒಪ್ಪುತ್ತಿಲ್ಲ. ನನ್ನನ್ನು ಬಿಟ್ಟು ಬಿಡು’ ಎಂದು ಹೇಳಿದ. ನಂತರ ಆತನ ತಾಯಿ ಮಾತನಾಡಿ, ‘ನೀನು ಶೀಲವಂತೆಯಲ್ಲ. ಮಗನ ಸಹವಾಸಕ್ಕೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಬೆದರಿಸಿದರು. ತುಂಬ ಕೆಟ್ಟ ಭಾಷೆಯಲ್ಲಿ ನನ್ನನ್ನು ನಿಂದಿಸಿದರು.’‘ನಂತರ ಸ್ನೇಹಿತ ಪ್ರೀತಮ್ ಎಂಬಾತನ ಜತೆ ಮನೆಗೆ ಬಂದ ಉಲ್ಲಾಸ್, ನನ್ನ ಮೇಲೆ ಹಲ್ಲೆ ನಡೆಸಿದ. ಅಲ್ಲದೆ, ‘ನೀನು ನನಗೆ ಇಷ್ಟವಿಲ್ಲವೆಂದು ಹೇಳು’ ಎಂದು ಬಲವಂತವಾಗಿ ಹೇಳಿಸಿ, ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಹೋದ. ಈ ರೀತಿ ನನ್ನನ್ನು ವಂಚಿಸಿರುವ ಉಲ್ಲಾಸ್

ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ನಟಿ ದೂರಿನಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry