ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ

ಕೊಪ್ಪದ ಸಹಕಾರ ಸಾರಿಗೆ ನೌಕರರಿಂದ ಎಂ. ಶ್ರೀನಿವಾಸ್ ಭೇಟಿ
Last Updated 15 ಜೂನ್ 2017, 6:46 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸಹಕಾರ ಕಾಯ್ದೆ ಯಡಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆಯ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ  ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಈ.ಎಸ್.ಧರ್ಮಪ್ಪ ನೇತೃತ್ವದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಅವರಿಗೆ ಇತ್ತೀಚೆಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ಮನವಿಯಲ್ಲಿ ಮಲೆನಾಡಿನ ಭಾಗದಲ್ಲಿಸಾರಿಗೆ ಸೇವೆ ಒದಗಿಸುತ್ತಿರುವ ಸಂಸ್ಥೆಯನ್ನು ತಾಂತ್ರಿಕ ಹಾಗೂ ಕಾನೂನು ತೊಡಕಿನಿಂದಾಗಿ ಮುನ್ನಡೆಸಲು ಕಷ್ಟವಾಗಿದೆ. ಇದರಿಂದ 2000ಕ್ಕೂ ಹೆಚ್ಚು ಕಾರ್ಮಿಕರು ಜೀವನಕ್ಕೆ ತೊಂದರೆಯಾಗಲಿದ್ದು, ಸಂಸ್ಥೆಯ ಅಸ್ಥಿತ್ವವನ್ನು ಉಳಿಸಿಕೊಂಡು ಹೋಗಲು ಸರ್ಕಾರ ನೆರವಾಗಬೇಕು.

ಈ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 71 ಮತ್ತು 74 ರನ್ವಯ ಕೆಎಸ್‍ ಆರ್ ಟಿಸಿ  ಮಾರ್ಗಗಳಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಪರವಾಗೆ ನೀಡಬೇಕು. ಪ್ರವಾಸೋದ್ಯಮದ ಕಂಟ್ರಾಕ್ಟ್ ಕ್ಯಾರೇಜ್ ಪರವಾನಗಿ ಮಂಜೂರಾತಿಯಲ್ಲಿ ನಮ ಗೂ ಪ್ರಾತಿನಿಧ್ಯ ನೀಡಬೇಕು. ಕೆಎಸ್‍ಆರ್ ಟಿಸಿ ಮಾದರಿಯಲ್ಲಿ ದೈನಂದಿನ ಕಲೆಕ್ಷನ್ ಆಧಾರದ ಮೇಲೆ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಬೇಕು.

‘ಸಂಸ್ಥೆಯು ಪ್ರತೀವರ್ಷ ವಿದ್ಯಾರ್ಥಿ ಗಳು, ವಯೋವೃದ್ದರು, ಅಂಗವಿಕಲರು, ಸ್ವಾತಂತ್ರ್ಯ ಯೋಧರು ಸೇರಿದಂತೆ ವಾರ್ಷಿಕ 20 ಸಾವಿರಕ್ಕೂ ಅಧಿಕ ಜನರಿಗೆ ಉಚಿತ ಹಾಗೂ ರಿಯಾಯಿತಿ ದರದ ಪಾಸ್ ನೀಡುತ್ತಿದೆ. ಕೆಎಸ್‍ಆರ್ ಟಿಸಿ ಮಾದರಿಯಲ್ಲಿ ರಿಯಾ ಯಿತಿಯ ಆರ್ಥಿಕ ನಷ್ಟ ತುಂಬಿಕೊಡಲು ಸಹಾಯಧನ ನೀಡಬೇಕು. ದೈನಂದಿನ ನಿರ್ವಹಣೆಗೆ ಅಪೆಕ್ಸ್ ಬ್ಯಾಂಕ್, ನಬಾರ್ಡ್ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ಆರ್ಥಿಕ ನೆರವು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು.

ಸಹಕಾರ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಗಾಡ್ವಿನ್ ಜಯಪ್ರಕಾಶ್, ನಿರ್ದೇಶಕರಾದ ಬಿ.ಎನ್. ಮಹೇಶ್, ಜಿ.ಆರ್. ವಿಶ್ವನಾಥ್, ಎಸ್.ಸಿ. ತಮ್ಮಪ್ಪ ಗೌಡ ಇದ್ದರು.

*
ಶೀಘ್ರದಲ್ಲೇ ಮುಖ್ಯ ಮಂತ್ರಿ ಯೊಂದಿಗೆ ಮಾತುಕತೆ ನಡೆಸಿ ಸಹಕಾರ ಸಾರಿಗೆ ಸಂಸ್ಥೆಯ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು.
-ಎಂ.ಶ್ರೀನಿವಾಸ್,
ವಿಧಾನಪರಿಷತ್ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT