ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ ಮರೆತ ಉಪನ್ಯಾಸಕರು!

Last Updated 15 ಜೂನ್ 2017, 6:47 IST
ಅಕ್ಷರ ಗಾತ್ರ

ಜಯಪುರ(ಬಾಳೆಹೊನ್ನೂರು): ವಿದ್ಯಾರ್ಥಿ ನಿಯೊಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತರಿಸಿದ ಎಲ್ಲಾ ಪುಟಗಳನ್ನೂ  ಮೌಲ್ಯಮಾಪನ ಮಾಡದೆ ಎಡವಟ್ಟು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಅವರು ಕಳೆದ ಮಾರ್ಚ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ 62 ಅಂಕಗಳನ್ನು ಪಡೆದಿದ್ದರು. ಆದರೆ  90 ಕ್ಕೂ ಅಧಿಕ ಅಂಕಗಳ ನಿರೀಕ್ಷೆಯಲ್ಲಿದ್ದ ಅವರಿಗೆ ಕಡಿಮೆ ಅಂಕ ಬಂದ ಕಾರಣ ನಿರಾಸೆಯಾಗಿತ್ತು. ಇದನ್ನು ಗಮನಿಸಿ ಪರೀಕ್ಷಾ ಮಂಡಳಿಗೆ ಉತ್ತರ ಪತ್ರಿಕೆಯ ನಕಲನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು.

ಪರೀಕ್ಷಾ ಮಂಡಳಿ ಇತ್ತೀಚೆಗೆ ಅವರಿಗೆ ಉತ್ತರ ಪತ್ರಿಕೆಯ ನಕಲುಗ ಳನ್ನು ಕಳುಹಿಸಿತ್ತು.ಅದರಲ್ಲಿ ಪ್ರಶ್ನೆ 32,36 ಹಾಗೂ 37 ನ್ನು ಒಳಗೊಂಡ ಸುಮಾರು 5 ಪುಟಗಳನ್ನು ಮೌಲ್ಯ ಮಾಪನ ಮಾಡದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಕೊನೆಯ ಪುಟದ 33ನೇ ಪ್ರಶ್ನೆಗೆ 8 ಅಂಕ ನೀಡಲಾಗಿದೆ.

ಆದರೆ ಮುಖಪುಟದಲ್ಲಿ ಒಟ್ಟು ಅಂಕಗಳನ್ನು ಕೂಡುವ ವೇಳೆ 33 ನೇ ಪ್ರಶ್ನೆಗೆ 3 ಅಂಕಗಳನ್ನು ನೀಡುವ ಮೂಲಕ ವ್ಯತ್ಯಾಸ ಮಾಡಲಾಗಿದೆ. 95 ಅಂಕ ಪಡೆಯಬೇಕಾ ಗಿದ್ದ ವಿದ್ಯಾರ್ಥಿನಿ ಮೌಲ್ಯಮಾಪಕರ ಎಡ ವಟ್ಟಿನಿಂದಾಗಿ 62 ಅಂಕ ಪಡೆದಿದ್ದರು. ವಿದ್ಯಾರ್ಥಿನಿ ಕಾಲೇಜಿನ ಮೂಲಕ ಪಿಯುಸಿ ಮಂಡಳಿಗೆ ಮರು ಮೌಲ್ಯ ಮಾಪನ ನಡೆಸುವಂತೆ ಅರ್ಜಿಸಲ್ಲಿಸಿದ್ದಾರೆ.

ಸಿಂಚನಾ ಅವರಿಗೆ ಇಂಗ್ಲಿಷ್ ವಿಷಯದಲ್ಲೂ ಕಡಿಮೆ ಅಂಕ ಬಂದಿ ರುವುದು ಕೂಡ  ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಅದರ ನಕಲು ಪ್ರತಿ ನೀಡುವಂತೆ ಮಂಡಳಿಗೆ ಅರ್ಜಿ ಸಲ್ಲಿಸಿದ್ದರೂ ಇದೂವರೆಗೆ  ಮಂಡಳಿ ನಕಲು ಪ್ರತಿ ನೀಡದಿರುವ  ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT