‘ಹೆಚ್ಚು ಬಸ್ ಕಲ್ಪಿಸಿ, ಚಾವಣಿ ಪಯಣ ತಪ್ಪಿಸಿ’

7

‘ಹೆಚ್ಚು ಬಸ್ ಕಲ್ಪಿಸಿ, ಚಾವಣಿ ಪಯಣ ತಪ್ಪಿಸಿ’

Published:
Updated:
‘ಹೆಚ್ಚು ಬಸ್ ಕಲ್ಪಿಸಿ, ಚಾವಣಿ ಪಯಣ ತಪ್ಪಿಸಿ’

ಹೊರ್ತಿ: ವಿಜಯಪುರದಿಂದ ಕನ್ನೂರ, ಇಂಚಗೇರಿ, ಜಿಗಜೇವಣಿಯ ಮಾರ್ಗ ದಲ್ಲಿ ಹೆಚ್ಚಿನ ಬಸ್‌ಗಳ ಸಂಚಾರ ಇಲ್ಲದೆ, ಪ್ರಯಾಣಿಕರು ಬಸ್‌ ಮೇಲೇ ಪ್ರಯಾಣಿಸ ಬೇಕಾದ ಸಂಕಷ್ಟ ಎದುರಾಗಿದೆ.ಹೆಚ್ಚಿನ ಬಸ್‌ ಸಂಚಾರ ಇಲ್ಲದಿರುವುದರಿಂದ ಪ್ರಯಾಣಕರು ಬಸ್‌ ಮೇಲೆ ಕುಳಿತೇ ಪ್ರಯಾಣಿಸುತ್ತಿದ್ದಾರೆ. ನಿರ್ವಾಹಕ ಕೂಡ ಬಸ್‌ ಮೇಲೆ ಹತ್ತಿ ಟಿಕೆಟ್‌ ನೀಡಬೇಕಾದ ಪರಿಸ್ಥಿತಿ ಇಲ್ಲಿದೆ.‘ಬಸ್ ಸೌಲಭ್ಯ ಕಲ್ಲಿಸಿ, ಬಸ್ ಮೇಲೆ ಪ್ರಯಾಸದ ಪಯಣ ತಪ್ಪಿಸಿ’ ಎಂದು ಇಂಚಗೇರಿ, ಜಿಗಜೇವಣಿ, ದೇವರ ನಿಂಬಗಿ ಗ್ರಾಮಗಳ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಈಶಾನ್ಯ ಸಾರಿಗೆ ನಿಯಂತ್ರಾಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.‘ವಿಜಯಪುರದಿಂದ ಸಂಜೆ 5.30ಕ್ಕೆ ಹೊರಡುವ ಹೊಳಿಸಂಖ ಬಸ್‌ನಲ್ಲಿ ಬಿಎಲ್‌ಡಿಇ ಬಸ್‌ ನಿಲ್ದಾಣದಲ್ಲಿ ತುಂಬಿ ಹೋಗುತ್ತದೆ. ಹೀಗಾಗಿ, ಪ್ರಯಾಣಿಕರು ಬಸ್ ಮೇಲೆ ಕುಳಿತು ಪ್ರಯಾಣಿಸುವ ಪರಿಸ್ಥಿತಿ ಇದೆ.

ಒಂದೊಮ್ಮೆ ಹೊಳಿಸಂಖ ಬಸ್ ನಿಲ್ದಾಣದಲ್ಲಿ ತುಂಬಿಯೇ ಇದ್ದರೆ, ವಾಟರ್ ಟ್ಯಾಂಕ್, ಸೋಲಾಪುರ ನಾಕಾ, ಬಿಎಲ್‌ಡಿಇ, ಬಂಜಾರಾ ಕ್ರಾಸ್ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವುದಿಲ್ಲ. ಈ ಬಸ್ ನಂಬಿದವರಿಗೆ, ಈ ಮಾರ್ಗಗಳ ಮೂಲಕ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಇದರಿಂದ ತೀವ್ರ ತೊಂದರೆ ಉಂಟಾಗಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.‘ಈ ಕೂಡಲೇ ಮಾರ್ಗದ ಮೂಲಕ ಪ್ರಯಾಣಿಕರಿಗೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಬಸ್ ಸೌಲಭ್ಯ ಹೆಚ್ಚಿಸಬೇಕು’ ಎಂದು ಪವನ ಕುಲಕರ್ಣಿ, ನಿಸಾರ ವಾಲಿಕಾರ, ಭಾವೂರಾಜ ಈಸರ ಗೊಂಡ, ಎಸ್.ಎಂ.ನದಾಫ್ ಹಾಗೂ ಇಂಚಗೇರಿ, ಜಿಗಜೇಣಿ, ದೇವನಿಂಬರಗಿ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಸ್ ಪುನಃ ಆರಂಭಿಸಿ: ಈ ಭಾಗದ ಇಂಚಗೇರಿ, ಜಿಜೇವಣಿ, ದೇವರ ನಿಂಬರಗಿಗಳಿಗೆ ಬಸ್‌ ಸೌಲಭ್ಯ ಇಲ್ಲದೆ ಪ್ರಯಾಣಿಕರು ಪರದಾಟುವಂತಾಗಿದೆ. ವಿಜಯಪುರದಿಂದ ಬೆಳಿಗ್ಗೆ 11.30ಕ್ಕೆ ವಿಜಯಪುರ -ಇಂಚಗೇರಿ-ಚಡಚಣ ಬಸ್‌ ಈ ಹಿಂದೆ ಸಂಚರಿಸು ತ್ತಿದ್ದು. ಅದನ್ನು ಮತ್ತೆ ಆರಂಭಿಸಬೇಕು. ಅಲ್ಲದೆ, ಸಂಜೆ 4.15ಕ್ಕೆ ಇನ್ನೊಂದು ಬಸ್‌ ಅನ್ನು ಈ ಮಾರ್ಗದ ಮೂಲಕ ಆರಂಭಿ ಸಬೇಕು ಎಂದು ಒತ್ತಾಯಿಸಿದ್ದಾರೆ.ಸಿಟಿ ಬಸ್ ಇಂಚಗೇರಿವರೆಗೆ ವಿಸ್ತರಿಸಿ: ವಿಜಯಪೂರ-ಕನ್ನೂರ ನಡುವೆ ಸಂಚರಿಸುವ ಸಿಟಿ ಬಸ್‌ಗಳನ್ನು  ಇಂಚ ಗೇರಿ ಗ್ರಾಮದವರೆಗೂ ವಿಸ್ತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ವಿಜಯಪುರ ಶಾಸಕರು ಹಾಗೂ ಸಾರಿಗೆ ನಿಯಂತ್ರಾಣಾಧಿಕಾರಿಯವರಲ್ಲಿ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry