ಬಾಂಗ್ಲಾ ವಿರುದ್ಧ ಟಾಸ್‌ ಗೆದ್ದ ಭಾರತ: ಬೌಲಿಂಗ್‌ ಆಯ್ಕೆ

7

ಬಾಂಗ್ಲಾ ವಿರುದ್ಧ ಟಾಸ್‌ ಗೆದ್ದ ಭಾರತ: ಬೌಲಿಂಗ್‌ ಆಯ್ಕೆ

Published:
Updated:
ಬಾಂಗ್ಲಾ ವಿರುದ್ಧ ಟಾಸ್‌ ಗೆದ್ದ ಭಾರತ: ಬೌಲಿಂಗ್‌ ಆಯ್ಕೆ

ಬರ್ಮಿಂಗ್‌ಹ್ಯಾಮ್‌: ಭರವಸೆಯ ಅಲೆಯಲ್ಲಿ ತೇಲುತ್ತಿರುವ ಭಾರತ ಮತ್ತು ಇತಿಹಾಸ ನಿರ್ಮಿಸುವ ನಿರೀಕ್ಷೆಯಲ್ಲಿರುವ ಬಾಂಗ್ಲಾದೇಶ ತಂಡಗಳು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿವೆ.

ಬಾಂಗ್ಲಾದೇಶದ ವಿರುದ್ಧ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ.

ಉತ್ತಮ ಲಯದಲ್ಲಿರುವ ಬ್ಯಾಟ್ಸ್‌ಮನ್‌ಗಳು, ಪಂದ್ಯಕ್ಕೆ ಯಾವುದೇ ಸಂದರ್ಭದಲ್ಲಿ ತಿರುವು ನೀಡಬಲ್ಲ ಬೌಲರ್‌ಗಳು ಮತ್ತು ಎದುರಾಳಿಗಳ ಧೃತಿಗೆಡಿಸಬಲ್ಲ ಫೀಲ್ಡಿಂಗ್‌ ಭಾರತ ತಂಡದ ಭರವಸೆಯನ್ನು ಹೆಚ್ಚಿಸಿದೆ.‍

ಬುಧವಾರ ಪಾಕ್‌– ಇಂಗ್ಲೆಂಡ್‌ ತಂಡಗಳ ನಡುವೆ ನಡೆದ ಮೊದಲ ಸೆಮಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ, ಯುವರಾಜ್ ಸಿಂಗ್‌, ಎಂ.ಎಸ್‌.ಧೋನಿ (ವಿಕೆಟ್ ಕೀಪರ್‌), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್‌, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಮಹಮ್ಮದ್ ಶಮಿ, ದಿನೇಶ್ ಕಾರ್ತಿಕ್‌, ಅಜಿಂಕ್ಯ ರಹಾನೆ.

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ತಮೀಮ್ ಇಕ್ಬಾಲ್‌, ಇಮ್ರುಲ್‌ ಕೈಸ್‌, ಸೌಮ್ಯ ಸರ್ಕಾರ್‌, ಶಬ್ಬೀರ್ ರಹಮಾನ್‌, ಮಹಮ್ಮದುಲ್ಲಾ ರಿಯಾದ್‌, ಶಕೀಬ್ ಅಲ್ ಹಸನ್‌, ಮುಷ್ಫಿಕುರ್‌ ರಹೀಮ್‌ (ವಿಕೆಟ್ ಕೀಪರ್‌), ರುಬೆಲ್‌ ಹೊಸೈನ್‌, ಮುಸ್ತಫಿಜೂರ್‌ ರಹಮಾನ್‌, ಟಸ್ಕಿನ್ ಅಹಮ್ಮದ್‌, ಮೆಹದಿ ಹೊಸೈನ್‌ ಮಿಜಾಜ್‌, ಮೊಸಾಡೆಕ್‌ ಹೊಸೈನ್‌, ಸುನ್ಜಮುಲ್‌ ಇಸ್ಲಾಮ್‌, ಶಫೀವುಲ್‌ ಇಸ್ಲಾಮ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry