‘ಸ್ಟೂಡೆಂಟ್ಸ್‌’ ಹೇಳುವ ಕಾಲೇಜು ಜೀವನ!

7

‘ಸ್ಟೂಡೆಂಟ್ಸ್‌’ ಹೇಳುವ ಕಾಲೇಜು ಜೀವನ!

Published:
Updated:
‘ಸ್ಟೂಡೆಂಟ್ಸ್‌’ ಹೇಳುವ ಕಾಲೇಜು ಜೀವನ!

ಕಾಲೇಜು ಜೀವನ ಎನ್ನುವುದು ಯಾವುದೇ ವ್ಯಕ್ತಿಯ ಪಾಲಿಗೆ ನೆನಪಿನ ಪ್ಯಾಕೇಜು. ಈ ಮಾತನ್ನು ಪುನೀತ್ ರಾಜ್‌ಕುಮಾರ್‌ ಅವರು ಸಿನಿಮಾ ಹಾಡೊಂದರಲ್ಲಿ ಹೇಳಿಯಾಗಿದೆ. ಈಗ ಕಾಲೇಜು ಜೀವನವನ್ನೇ ಕಥಾವಸ್ತುವಾಗಿಸಿಕೊಂಡ ಸಿನಿಮಾವೊಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ಇದರ ನಿರ್ದೇಶಕರು ಸಂತೋಷ್ ಕುಮಾರ್.

ಈ ಸಿನಿಮಾದಲ್ಲಿನ ಬಹುತೇಕರು ಹೊಸ ಕಲಾವಿದರು. ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಕಾಣುವ, ಅನುಭವಿಸುವ ರ್‍ಯಾಗಿಂಗ್ ಪಿಡುಗು, ಮಾದಕ ವಸ್ತುಗಳ ಚಟ ಹಾಗೂ ಕಾಲೇಜು ಚಟುವಟಿಕೆಗಳಲ್ಲಿ ರಾಜಕೀಯದ ಹಸ್ತಕ್ಷೇಪವನ್ನು ಈ ಚಿತ್ರದಲ್ಲಿ ಹಾಸ್ಯಮಯವಾಗಿ ತೋರಿಸಿರುವುದಾಗಿ ಹೇಳುತ್ತಿದೆ ಚಿತ್ರತಂಡ.

ಎಡ್ವರ್ಡ್‌ ಷಾ ಅವರ ಸಂಗೀತ, ಜೆ.ಜೆ. ಶರ್ಮ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಚಿನ್ ಪುರೋಹಿತ್, ಸಚಿನ್ ಹೊಸಮನೆ, ಕಿರಣ್ ರಾಯಬಾಗಿ, ಭವ್ಯಾ, ಅಂಕಿತಾ ಮತ್ತು ಸುವರ್ಣಾ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಟಿ ರೇಖಾ ದಾಸ್ ಅವರು ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿತ್ತು. ಆ ಸಂದರ್ಭದಲ್ಲಿ ಚಿತ್ರತಂಡದ ಬಹುತೇಕರಲ್ಲಿ ಇದ್ದಿದ್ದು ದುಗುಡ, ಕುತೂಹಲ ಹಾಗೂ ಒಂದಿಷ್ಟು ಭರವಸೆ. ‘ಚಿತ್ರ ತೆರೆಕಾಣುವ ದಿನ ಹತ್ತಿರ ಬಂದಿದೆ. ಹೊಸ ರೀತಿಯಲ್ಲಿ ಚಿತ್ರ ಸಿದ್ಧಪಡಿಸಿದ್ದೇವೆ. ಚಿತ್ರ ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆಯೇ, ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲ ತೀವ್ರವಾಗುತ್ತಿದೆ’ ಎಂದು ತಂಡದ ಬಹುತೇಕರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry