ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸರಣಿ: ರೋಹಿತ್‌ ಶರ್ಮಾ, ಬೂಮ್ರಾಗೆ ವಿಶ್ರಾಂತಿ; ರಿಷಬ್‌, ಕುಲದೀಪ್‌ಗೆ ಸ್ಥಾನ

7

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸರಣಿ: ರೋಹಿತ್‌ ಶರ್ಮಾ, ಬೂಮ್ರಾಗೆ ವಿಶ್ರಾಂತಿ; ರಿಷಬ್‌, ಕುಲದೀಪ್‌ಗೆ ಸ್ಥಾನ

Published:
Updated:
ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸರಣಿ: ರೋಹಿತ್‌ ಶರ್ಮಾ, ಬೂಮ್ರಾಗೆ ವಿಶ್ರಾಂತಿ; ರಿಷಬ್‌, ಕುಲದೀಪ್‌ಗೆ ಸ್ಥಾನ

ಬರ್ಮಿಂಗ್‌ಹ್ಯಾಮ್‌: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಬಳಿಕ ಜೂನ್‌ 23ರಿಂದ ಭಾರತ– ವೆಸ್ಟ್‌ ಇಂಡೀಸ್‌ ನಡುವೆ 5 ಏಕದಿನ ಹಾಗೂ 1 ಟಿ–20 ಪಂದ್ಯದ ಕ್ರಿಕೆಟ್‌ ಸರಣಿ ಆರಂಭವಾಗಲಿದೆ.

ಈ ಸರಣಿಗೆ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಹಾಗೂ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಇವರ ಸ್ಥಾನಕ್ಕೆ ಯುವ ಆಟಗಾರರಾದ ರಿಷಬ್‌ ಪಂತ್‌ ಹಾಗೂ ಚೀನಾಮನ್‌ ಕುಲದೀಪ್‌ ಯಾದವ್‌ಗೆ ಅವಕಾಶ ನೀಡಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿಯ ಅಧ್ಯಕ್ಷ ಎಂ.ಎಸ್‌.ಕೆ ಪ್ರಸಾದ್‌ ತಿಳಿಸಿದ್ದಾರೆ.

ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಶಿಖರ್‌ ಧವನ್‌ ಜತೆಗೆ ರಹಾನೆ ಅಥವಾ ರಿಷಬ್‌ ಪಂತ್‌ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತ ತಂಡ: ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌, ರಿಷಬ್‌ ಪಂತ್‌, ರಹಾನೆ, ಎಂ.ಎಸ್‌.ದೋನಿ, ಯುವರಾಜ್‌ ಸಿಂಗ್‌, ಕೇದಾರ್‌ ಜಾದವ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಆರ್‌.ಅಶ್ವಿನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry