ಚಾಂಪಿಯನ್ಸ್‌ ಟ್ರೋಫಿ: ಭಾರತದ ಗೆಲುವಿಗೆ 265ರನ್‌ ಗುರಿ

7

ಚಾಂಪಿಯನ್ಸ್‌ ಟ್ರೋಫಿ: ಭಾರತದ ಗೆಲುವಿಗೆ 265ರನ್‌ ಗುರಿ

Published:
Updated:
ಚಾಂಪಿಯನ್ಸ್‌ ಟ್ರೋಫಿ: ಭಾರತದ ಗೆಲುವಿಗೆ 265ರನ್‌ ಗುರಿ

ಬರ್ಮಿಂಗ್‌ಹ್ಯಾಮ್‌: ಭಾರತ ವಿರುದ್ಧದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 264ರನ್‌ ಗಳಿಸಿದೆ.

ಬ್ಯಾಟಿಂಗ್‌ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ತಂಡದ ಮೊತ್ತ 1ರನ್‌ ಆಗಿದ್ದಾಗಲೇ ಆರಂಭಿಕ ಆಟಗಾರ ಸೌಮ್ಯ ಸರ್ಕಾರ್‌ (0), ಭುವೇಶ್ವರ್‌ ಬೌಲಿಂಗ್‌ನಲ್ಲಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಶಬ್ಬೀರ್ ರಹಮಾನ್‌(19) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಎರಡನೇ ವಿಕೆಟ್‌ ಪತನವಾದಾಗ ತಂಡದ ಮೊತ್ತ ಕೇವಲ 31.

ಈ ಹಂತದಲ್ಲಿ ವಿರಾಟ್‌ ಕೊಹ್ಲಿ ಪಡೆ ಬಾಂಗ್ಲಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ವಿಶ್ವಾಸದಲ್ಲಿತ್ತು. ಆದರೆ, ಇದಕ್ಕೆ ಅವಕಾಶ ಕೊಡದೆ ಆಡಿದ ತಮೀಮ್‌ ಇಕ್ಬಾಲ್‌(70) ಹಾಗೂ ಮುಷ್ಫಿಕುರ್‌ ರಹೀಮ್‌(61) ಜೋಡಿ ಮೂರನೇ ವಿಕೆಟ್‌ಗೆ 123ರನ್‌ ಜತೆಯಾಟವಾಡಿ ಭಾರತದ ಆಸೆಗೆ ಅಡ್ಡಿಯಾದರು.

ಇಕ್ಬಾಲ್‌, ರಹೀಮ್‌ ಔಟ್‌ ಆಗುತ್ತಿದ್ದಂತೆ ಬಾಂಗ್ಲಾ ಪಡೆಯ ಉಳಿದ ಆಟಗಾರರಿಂದ ದೊಡ್ಡ ಮೊತ್ತದ ಇನಿಂಗ್ಸ್ ಮೂಡಿಬರಲಿಲ್ಲ. ಕೊನೆಯಲ್ಲಿ ನಾಯಕ ಮಷ್ರಫೆ ಮೊರ್ತಜಾ ಅಬ್ಬರಿಸಿದ ಕಾರಣ ಬಾಂಗ್ಲಾ ಪಡೆ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ಮೊರ್ತಜಾ ಕೇವಲ 25 ಎಸೆತಗಳಲ್ಲಿ 30ರನ್‌ ಗಳಿಸಿ ಉತ್ತಮ ಆಟವಾಡಿ ತಮ್ಮ ತಂಡದ ಮೊತ್ತ 260ರ ಗಡಿದಾಟಲು ನೆರವಾದರು.

ಭಾರತ ಪರ ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ ಹಾಗೂ ಕೇದಾರ್ ಜಾಧವ್‌ತಲಾ 2 ವಿಕೆಟ್‌ ಕಬಳಿಸಿ ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry