ಝಾಕಿರ್ ನಾಯ್ಕ್‌ ಶಾಲೆ ಅಕ್ರಮ ಎಂದ ಮುಂಬೈ ಪಾಲಿಕೆ

7

ಝಾಕಿರ್ ನಾಯ್ಕ್‌ ಶಾಲೆ ಅಕ್ರಮ ಎಂದ ಮುಂಬೈ ಪಾಲಿಕೆ

Published:
Updated:
ಝಾಕಿರ್ ನಾಯ್ಕ್‌ ಶಾಲೆ ಅಕ್ರಮ ಎಂದ ಮುಂಬೈ ಪಾಲಿಕೆ

ಮುಂಬೈ: ವಿವಾದಿತ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್‌ ಒಡೆತನದಲ್ಲಿದ್ದ, ದಕ್ಷಿಣ ಮುಂಬೈನಲ್ಲಿರುವ ‘ಇಸ್ಲಾಮಿಕ್ ಇಂಟರ್‌ನ್ಯಾಷನಲ್ ಸ್ಕೂಲ್ (ಐಐಎಸ್‌)’ ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿದೆ ಎಂದು ಮುಂಬೈ ನಗರಪಾಲಿಕೆ ತಿಳಿಸಿದೆ.

ಈ ಕುರಿತು ಬೃಹನ್ಮುಂಬೈ ನಗರಪಾಲಿಕೆಯ ದಕ್ಷಿಣ ಮುಂಬೈ ವಿಭಾಗದ ಶೈಕ್ಷಣಿಕ ಪರೀಕ್ಷಾಧಿಕಾರಿ ಬಿ.ಬಿ. ಚವಾಣ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ‘2009ರ ಶಿಕ್ಷಣದ ಹಕ್ಕು ಕಾಯ್ದೆಯ ನಿಯಮಗಳ ಪ್ರಕಾರ, ಯಾವುದೇ ಶಾಲೆಯು ಸ್ಥಳಿಯಾಡಳಿತದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯದೆ ಕಾರ್ಯಾಚರಿಸುವಂತಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಐಐಸ್‌ಗೆ ಸೇರಿಸಬಾರದು’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, ಸಂಸ್ಥೆಯ ಆಡಳಿತ ಮಂಡಳಿಯವರಿಗೆ ತೊಂದರೆ ನೀಡಲು ಸಂಚು ಹೂಡಲಾಗಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಅಸೀಂ ಅಜ್ಮಿ  ಆರೋಪಿಸಿದ್ದಾರೆ. ಶಾಲೆಯನ್ನು ಇತ್ತೀಚೆಗೆ ಅಜ್ಮಿ ಅವರ ‘ನಿಯಾಜ್ ಅಲ್ಪಸಂಖ್ಯಾತ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್‌’ಗೆ ಹಸ್ತಾಂತರಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry