‘ಕರೋಡ್‌ಪತಿ’ಗೆ ಮತ್ತೆ ಸಜ್ಜಾದ ಅಮಿತಾಭ್

7

‘ಕರೋಡ್‌ಪತಿ’ಗೆ ಮತ್ತೆ ಸಜ್ಜಾದ ಅಮಿತಾಭ್

Published:
Updated:
‘ಕರೋಡ್‌ಪತಿ’ಗೆ ಮತ್ತೆ ಸಜ್ಜಾದ ಅಮಿತಾಭ್

ಕೋಟ್ಯಂತರ ವೀಕ್ಷಕರ ಮೆಚ್ಚುಗೆ ಗಳಿಸಿದ್ದ ‘ಕೌನ್‌ ಬನೇಗಾ ಕರೋಡ್‌ಪತಿ’ ಎಂಟೇ ಆವೃತ್ತಿಗಳಿಗೆ ನಿಂತುಬಿಡುತ್ತದೆಯೇ ಎಂಬ ಪ್ರಶ್ನೆಗಳಿಗೆ  ಉತ್ತರ ಸಿಕ್ಕಿದೆ. ಒಂಬತ್ತನೇ ಆವೃತ್ತಿಯ ನೋಂದಣಿಗೆ ಸೋನಿ ವಾಹಿನಿ ದಿನಾಂಕ ಪ್ರಕಟಿಸಿದೆ. ಜೂನ್‌ 17ರಿಂದ ನೋಂದಣಿ ಶುರುವಾಗಲಿದೆ.

ಈ ಬಾರಿ ಮತ್ತೆ ‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್‌ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇತ್ತೀಚೆಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಖುದ್ದಾಗಿ ಅಮಿತಾಬ್‌ ಅವರೇ ಇದನ್ನು ಸ್ಪಷ್ಟಪಡಿಸಿದ್ದರು.

‘ಕೊನೆಗೂ ಸೋನಿ ವಾಹಿನಿ ಕೌನ್‌ ಬನೇಗಾ ಕರೋಡ್‌ಪತಿ’ ಒಂಬತ್ತನೇ ಆವೃತ್ತಿ ನಡೆಸಲು ಮನಸ್ಸು ಮಾಡಿದೆ’ ಎಂದು ಅವರು ಟ್ವೀಟ್‌ ಮಾಡಿದ್ದರು. ಅಲ್ಲದೆ, ‘ಕರೋಡ್‌ಪತಿ’ಯ ಚಿತ್ರೀಕರಣದ ದೃಶ್ಯಗಳನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಎಂಟನೇ ಆವೃತ್ತಿ  ಮುಗಿದ ನಂತರ ಮುಂದಿನ ಆವೃತ್ತಿ ಆರಂಭಿಸಲು ಬಹಳಷ್ಟು ಸಮಯವನ್ನೇ ತೆಗೆದುಕೊಂಡಿತು ಸೋನಿ ವಾಹಿನಿ.

ಒಂಬತ್ತನೇ ಆವೃತ್ತಿಗೆ ಹೋಸ್ಟ್‌ ಯಾರಾಗುತ್ತಾರೆ ಎಂಬ ಪ್ರಶ್ನೆಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮೋಹಕ ತಾರೆಯರಾದ ಮಾಧುರಿ ದೀಕ್ಷಿತ್‌ ಹಾಗೂ ಐಶ್ವರ್ಯಾ ರೈ ಬಚ್ಚನ್‌ ಅವರನ್ನು ಸೋನಿ ವಾಹಿನಿ ಕೇಳಿಕೊಂಡಿದೆ ಎಂಬ ಗಾಳಿಸುದ್ದಿ ಹಬ್ಬಿತ್ತು. ರಣಬೀರ್‌ ಕಪೂರ್‌ ಹೆಸರೂ ಕೇಳಿಬಂದಿತ್ತು. ಇದೀಗ ಎಲ್ಲಾ ಚರ್ಚೆ, ಗಾಳಿಸುದ್ದಿಗೆ ತೆರೆ ಬಿದ್ದಿದ್ದು, ಬಿಗ್‌ ಬಿ ಮತ್ತೆ  ಸ್ಪರ್ಧಿಗಳನ್ನು ಹಾಟ್‌ ಸೀಟ್‌ನಲ್ಲಿ ಕೂರಿಸಲಿದ್ದಾರೆ.

ಈ ಆವೃತ್ತಿಯ ಸಂಚಿಕೆಗಳು ಕಡಿಮೆ ಇರಲಿವೆ ಎಂದು ವಾಹಿನಿ ತಿಳಿಸಿದೆ. ‘ಕೌನ್‌ ಬನೇಗಾ ಕರೋಡ್‌ಪತಿ’ ಷೋ ನಂತರ ‘ಸೂಪರ್ ಡಾನ್ಸ್‌’ 2ನೇ ಆವೃತ್ತಿ ಹಾಗೂ ಎರಡು ವರ್ಷದ ನಂತರ ಆರಂಭವಾಗುತ್ತಿರುವ ‘ಎಂಟರ್‌ಟೈನ್‌ಮೆಂಟ್ ಕೆ ಲಿಯೆ ಕುಚ್ ಭಿ ಕರೇಗಾ’ ಕಾರ್ಯಕ್ರಮದ ಹೊಸ ಆವೃತ್ತಿ ಬರಲಿದೆ. ಹಾಗೇ ಕಪಿಲ್‌ ಶರ್ಮಾ ಷೋ ಖ್ಯಾತಿಯ ಸುನೀಲ್ ಗ್ರೋವರ್ (ಗುತ್ತಿ ಪಾತ್ರಧಾರಿ) ಅವರೊಂದಿಗೂ ಹೊಸ ಕಾಮಿಡಿ ಕಾರ್ಯಕ್ರಮ ಮಾಡುವ ಯೋಜನೆ ಇದೆ. ಹಾಗಾಗಿ ಈ ಬಾರಿ ‘ಕರೋಡ್‌ಪತಿ’ಯಲ್ಲಿ ಕಡಿಮೆ ಸಂಚಿಕೆಗಳು ಇರಲಿವೆ ಎಂದು ವಾಹಿನಿ ಮಾಹಿತಿ ನೀಡಿದೆ.

ನೋಂದಣಿ ಪ್ರಕ್ರಿಯೆ ಜೂ.17ರಿಂದ ಆರಂಭವಾಗಿದ್ದು, ಸ್ಪರ್ಧೆ ಆಗಸ್ಟ್‌ನಲ್ಲಿ ಪ್ರಸಾರವಾಗಲಿದೆ. 2000ರಲ್ಲಿ ಆರಂಭವಾದ ಈ ಕಾರ್ಯಕ್ರಮವನ್ನು ಇದುವರೆಗೆ ಅಮಿತಾಬ್‌ ಅವರೇ ನಿರೂಪಣೆ ಮಾಡುತ್ತಾ ಬಂದಿದ್ದಾರೆ.

2007ರಲ್ಲಿ ಒಂದು ಬಾರಿ ಶಾರೂಕ್‌ ಖಾನ್‌ ನಿರೂಪಕರಾಗಿದ್ದರೂ ಜನಮೆಚ್ಚುಗೆ ಪಡೆಯಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry