ಬಹೂಪಯೋಗಿ ಸೆನ್ಸರ್‌ ಲೈಟ್‌ಗಳು

7

ಬಹೂಪಯೋಗಿ ಸೆನ್ಸರ್‌ ಲೈಟ್‌ಗಳು

Published:
Updated:
ಬಹೂಪಯೋಗಿ ಸೆನ್ಸರ್‌ ಲೈಟ್‌ಗಳು

ಮಧ್ಯರಾತ್ರಿ ಶೌಚಾಲಯಕ್ಕೆ ಹೋಗಬೇಕೆಂದರೆ ಅರೆಗಣ್ಣು ತೆರೆದು ಲೈಟ್‌ ಸ್ವಿಚ್‌ ಹುಡುಕಬೇಕು. ಇದೆಕ್ಕೆಲ್ಲಾ ಉತ್ತರವೆಂಬಂತೆ ಸೆನ್ಸರ್ ಲೈಟ್‌ಗಳು ಮಾರುಕಟ್ಟೆಗೆ ಬಂದಿವೆ. ಅದರೊಂದಿಗೆ ಇಂದಿನ ಅವಶ್ಯಕತೆಗೆ ತಕ್ಕಂತೆ ಸಾಕಷ್ಟು ಸುಧಾರಣೆಗಳಾಗಿ, ದೀಪಗಳೊಂದಿಗೆ ಕ್ಯಾಮೆರಾ, ಅಲಾರಂ, ಮೋಷನ್‌ ಸೆನ್ಸರ್‌ನಂಥ ಹಲವು ವ್ಯವಸ್ಥೆಗಳೂ ಅಭಿವೃದ್ಧಿಯಾಗಿವೆ.

ಈ ಸೆನ್ಸರ್‌ ಲೈಟ್‌ನೊಂದಿಗೆ ಮಿನಿ ಸರ್ವರ್‌ ಒಂದನ್ನು ಅಳವಡಿಸಲಾಗುತ್ತದೆ. ಇದು ಕೊಠಡಿಗೆ ವ್ಯಕ್ತಿಗಳು ಬರುತ್ತಿದ್ದಂತೆ ತರಂಗಗಳನ್ನು ಗ್ರಹಿಸಿ ದೀಪ ಹೊತ್ತಿಕೊಳ್ಳಲು ನೆರವಾಗುತ್ತವೆ.

ಹಲವು ವೇಳೆ ಮನೆಯಿಂದ ಹೊರಡುವಾಗ ಲೈಟ್‌ ಆನ್ ಮಾಡಿ ಮರೆತು ಹೋಗಿರುತ್ತೇವೆ, ಇಂಥ ಸಂದರ್ಭಗಳಿಗೆ ಸೆನ್ಸರ್ ಲೈಟ್‌ ಉಪಯೋಗಕ್ಕೆ ಬರುತ್ತದೆ. ದೀಪ ಬೆಳಗಿದ ಹಲವು ಗಂಟೆಗಳ ಬಳಿಕ ಯಾವುದೇ ಚಲನವಲನವಿಲ್ಲದಿದ್ದರೆ ತಾನಾಗಿಯೇ ಆಫ್‌ ಆಗುತ್ತವೆ.

ಮಕ್ಕಳ ಕೋಣೆಗೆ: ಸೆನ್ಸರ್ ದೀಪಗಳು ಮಕ್ಕಳ ಕೋಣೆಗೆ ಅವಶ್ಯಕವಾಗಿ ಬೇಕಾಗುತ್ತದೆ. ರಾತ್ರಿ ಶೌಚಾಲಯಕ್ಕೆ ಹೋಗಬೇಕೆಂದರೆ ನಿದ್ದೆಗಣ್ಣಿನಲ್ಲಿ ಎದ್ದು ಲೈಟ್‌ ಹಾಕಲು ಸ್ವಿಚ್ ಹುಡುಕುವ ಅವಶ್ಯಕತೆ ಇಲ್ಲ. ಹಾಸಿಗೆಯಿಂದ ಎದ್ದು ನಡೆದರೆ ಸಾಕು ದೀಪ ಹೊತ್ತಿಕೊಳ್ಳುತ್ತದೆ. ರಾತ್ರಿಯಲ್ಲಿ ಎದ್ದು ಭಯಪಡುವ ಮಕ್ಕಳಿದ್ದರೆ, ಅಂಥ ಮನೆಗಳಲ್ಲೂ ಈ ದೀಪಗಳು ಸೂಕ್ತ.

ಹೊರಗಿನ ಆವರಣಕ್ಕೆ– ಭದ್ರತೆ ಉದ್ದೇಶ: ಮನೆಯ ಹೊರ ಆವರಣದಲ್ಲಿ ಇಂಥ ಸೆನ್ಸರ್ ದೀಪಗಳನ್ನು  ಅಳವಡಿಸುವುದರಿಂದ ಭದ್ರತೆಯೂ ಸಿಗುತ್ತದೆ. ಯಾರೇ ಓಡಾಡಿದರೂ ದೀಪಗಳು ಹೊತ್ತಿಕೊಳ್ಳುವುದರಿಂದ ಅಪರಿಚಿತರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಗೊತ್ತಾಗಿ ಬಿಡುತ್ತದೆ.

ಈ ದೀಪಗಳ ಜೊತೆ ಅಲಾರಂ ಕೂಡ ಇದೆ. ಈ ಸೆನ್ಸರ್‌ ದೀಪಗಳೊಂದಿಗೆ ಲೇಸ್‌ ಬೀಮ್ ಇದ್ದು ಈ ಬೀಮ್‌ ಲೈಟ್‌ ದಾಟಿದ ಕೂಡಲೇ ಅಲಾರಂ ಹೊಡೆದುಕೊಳ್ಳುತ್ತದೆ.

ಸೆನ್ಸರ್‌ ಲೈಟ್‌ನಲ್ಲಿ ಹಲವು ವಿಧ

* FutureE* ectronics.com ಎಂಬ ವೆಬ್‌ ತಾಣದಲ್ಲಿ ಹಲವು ಬಗೆಯ ಸೆನ್ಸರ್ ದೀಪಗಳ ಮಾಹಿತಿ ಇದೆ.

* ಔಟ್‌ಪುಟ್‌ (ಅನಲಾಗ್, ಡಿಜಿಟಲ್, ಲೀನಿಯರ್), ಫೋಟೊ ಕರೆಂಟ್, ಪೀಕ್‌ ವೇವ್‌ ಲೆಂಥ್, ಇವುಗಳ ಸಮರ್ಪಕ ಮಾಹಿತಿ ತಿಳಿದುಕೊಂಡು ಖರೀದಿಸಿ.

* ಸೆನ್ಸರ್ ಲೈಟ್‌ನಲ್ಲಿ ಮನೆ ಸುತ್ತ ಹಾಕುವ ಲೈಟ್‌ ಸೆನ್ಸರ್, ಮೋಷನ್ ಲೈಟ್‌ ಸೆನ್ಸರ್, ಸೆಕ್ಯೂರಿಟಿ ಲೈಟ್ ಹೀಗೆ ಹಲವು ಬಗೆಯಿದ್ದು ಸೂಕ್ತ ಸ್ಥಳಕ್ಕೆ ಸೂಕ್ತ ಲೈಟ್‌ಗಳನ್ನು ಬಳಕೆ ಮಾಡಬಹುದು.

* ಸೆನ್ಸರ್ ಲೈಟ್‌ಗಳ ಜೊತೆ ಸಿ.ಸಿ ಕ್ಯಾಮೆರಾ ಕೂಡ ಇರುತ್ತದೆ. ಇದು ಮನೆಯ ಹೊರ ಆವರಣಕ್ಕೆ ಸೂಕ್ತ.

* ಕಿಟಕಿ ಇಲ್ಲದ ಸಣ್ಣ ಕೊಠಡಿಗಳು, ಯುಟಿಲಿಟಿ ಕೋಣೆ, ಕಪಾಟು, ಸಣ್ಣ ಶೌಚಾಲಯ ಇಂಥ ಸ್ಥಳಗಳಲ್ಲಿ ಸೆನ್ಸರ್‌ ದೀಪಗಳನ್ನು ಅಳವಡಿಸ ಬಹುದು. ಬಾಗಿಲುಗಳು ತೆರೆಯುತ್ತಿದ್ದಂತೆ ಈ ದೀಪಗಳು ಹೊತ್ತಿಕೊಳ್ಳುತ್ತವೆ.

* ಲೈಟ್‌ ಹಾಕಿದ ಕೂಡಲೇ ಒಂದೇ ಬಾರಿ  ಹೊತ್ತಿಕೊಳ್ಳುತ್ತವೆ. ಒಬ್ಬರು ಮಲಗಿರುವಾಗ ಮತ್ತೊಬ್ಬರು ಎದ್ದು ದೀಪ ಹೊತ್ತಿಸಿದರೆ ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ಟ್ರಿಗರ್‌ ಕಾನ್ಫಿಗರ್ ಮಾಡಲಾದ ಸೆನ್ಸರ್ ಲೈಟ್‌ಗಳಿವೆ. ಇವು ಒಮ್ಮೆಲೇ ಹೊತ್ತಿಕೊಳ್ಳದೆ, ನಿಧಾನವಾಗಿ ದೀಪದ ಹೊಳಪು ಹೆಚ್ಚುತ್ತಾ ಹೋಗುತ್ತದೆ. ಇದು ಮನೆಯಲ್ಲಿ ಇರುವ ನೈಸರ್ಗಿಕ ಬೆಳಕನ್ನು ಗ್ರಹಿಸಿ ಇನ್ನು ಎಷ್ಟು ಬೆಳಕನ್ನು ನೀಡಬೇಕು ಎಂದು ಅಂದಾಜಿಸುತ್ತದೆ.

* ಮನೆಯಲ್ಲಿ ಸಾಕು ಪ್ರಾಣಿಗಳಿದ್ದು, ಅವು ಮನೆಯಿಂದ ಹೊರ ಹೋಗಲು ಪ್ರಯತ್ನಿಸಿದರೆ ನಿಮಗೆ ಗೊತ್ತಾಗುತ್ತದೆ. ನೀವು ಕಚೇರಿಗೆ ಹೋದ ಸಂದರ್ಭದಲ್ಲಿ ಯಾರೂ ಮನೆಯಲ್ಲಿ ಇಲ್ಲವೆಂದಾಗ ಈ ಸೆನ್ಸರ್ ದೀಪ ಉಪಯೋಗಕ್ಕೆ ಬರುತ್ತದೆ. ಈ ದೀಪಗಳೊಂದಿಗೆ ಅಲಾರಂ ವ್ಯವಸ್ಥೆಯಿದ್ದು, ನಾಯಿ ಹೊರಹೋಗಲು ಯತ್ನಿಸುತ್ತಿದ್ದಂತೆ ಅಲಾರಂ ಬಡಿದುಕೊಳ್ಳುತ್ತದೆ. ಹಾಗೇ ಫೋನಿಗೆ ಸಂದೇಶ ಬರುವಂಥ ವ್ಯವಸ್ಥೆ ಇದೆ.

* ಮನೆಗೆ ಪೂರ್ತಿ ಆಟೊಮೇಷನ್ ವ್ಯವಸ್ಥೆಯನ್ನೂ ಅಳವಡಿಸಬಹುದು. ಇದು ಮನೆಯ ಪೂರ್ತಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಯಾವುದೇ ಕೊಠಡಿಯಲ್ಲಿ ನಡೆದಾಡಿದರೆ ಅಲ್ಲಿ ದೀಪ ಹೊತ್ತಿಕೊಳ್ಳುತ್ತದೆ. ಯಾವುದೇ ಓಡಾಟವಿಲ್ಲದೆ, ಸುಮ್ಮನೆ ಕೂತು ಪುಸ್ತಕ ಓದುವಾಗ ದೀಪ ಬೇಕು. ಅಂಥ ಸಂದರ್ಭದಲ್ಲೂ ಸೆನ್ಸರ್ ಸೆಟ್ಟಿಂಗ್‌ಗಳ ಮೂಲಕ ದೀಪ ಹೊತ್ತಿಕೊಳ್ಳುವಂತೆ ಮಾಡಬಹುದು.

* ಲಾನ್‌ಗಳಿಗೆ ಪಾತ್ ಸೆನ್ಸರ್ ದೀಪಗಳಿದ್ದು, ಗಿಡಗಳ ಬಳಿ, ಓಡಾಡುವ ದಾರಿಯಲ್ಲಿ ಅಳವಡಿಸಿಕೊಳ್ಳಬಹುದು. ರಾತ್ರಿ ಹೊತ್ತು ನಡೆದಾಡುವಾಗ, ಮಕ್ಕಳು ಆಟವಾಡುವಾಗ ಉಪಯೋಗಕ್ಕೆ ಬರುತ್ತದೆ.

* ಕಾರು ನಿಲ್ಲಿಸುವ ಗ್ಯಾರೆಜ್‌ಗಳಲ್ಲಿ ಇವು ಹೆಚ್ಚು ಉಪಯೋಗಕಾರಿ. ರಿವರ್ಸ್‌ ತೆಗೆದುಕೊಳ್ಳುವಾಗ ಉಪಯೋಗವಾಗುತ್ತದೆ. ಹಾಗೇ ಟ್ರಿಗರ್‌ ಐಪಿ ಕ್ಯಾಮೆರಾ ಎಂಬ ಸೆನ್ಸರ್‌ ದೀಪವಿದ್ದು ಇದನ್ನು ವಾಹನ ನಿಲುಗಡೆ ಸ್ಥಳದಲ್ಲಿ ಹಾಕಿಸಿಕೊಳ್ಳಬಹುದು. ಕ್ಯಾಮೆರಾದಲ್ಲಿ ದಾಖಲಾಗುವ ದೃಶ್ಯವನ್ನು ನೇರ ಫೋನಿನಲ್ಲಿ ನೋಡಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry