ಫೈನಲ್‌ನಲ್ಲಿ ಸೆಣೆಸಲಿವೆ ಭಾರತ – ಪಾಕಿಸ್ತಾನ

7
ಬಾಂಗ್ಲಾ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಫೈನಲ್‌ನಲ್ಲಿ ಸೆಣೆಸಲಿವೆ ಭಾರತ – ಪಾಕಿಸ್ತಾನ

Published:
Updated:
ಫೈನಲ್‌ನಲ್ಲಿ ಸೆಣೆಸಲಿವೆ ಭಾರತ – ಪಾಕಿಸ್ತಾನ

ಬರ್ಮಿಂಗ್‌ಹ್ಯಾಮ್‌: ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ತಂಡ ಫೈನಲ್‌ ಪ್ರವೇಶಿಸಿದೆ.

ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌ ಆರಿಸಿಕೊಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 264ರನ್‌ ಗಳಿಸಿತು.

ಭಾರತ ತಂಡ 40.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 265 ರನ್‌ ಗಳಿಸಿ 9 ವಿಕೆಟ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿತು.

ರೋಹಿತ್‌ ಶರ್ಮಾ 129 ಬಾಲ್‌ಗಳಲ್ಲಿ 123 ರನ್‌ ಸಿಡಿಸಿದರು. ನಾಯಕ ವಿರಾಟ್‌ ಕೊಹ್ಲಿ 78 ಬಾಲ್‌ಗಳಲ್ಲಿ 96 ರನ್‌ ಗಳಿಸಿದರು. ಶಿಖರ್‌ ಧವನ್‌ 34 ಬಾಲ್‌ಗಳಲ್ಲಿ 46 ರನ್‌ ಕಲೆಹಾಕಿ ಮಷ್ರಫೆ ಮೊರ್ತಜಾಗೆ ವಿಕೆಟ್‌ ಒಪ್ಪಿಸಿದರು.

ಭಾನುವಾರ (ಜೂನ್‌ 18) ನಡೆಯುವ ಫೈನಲ್‌ ಪಂದ್ಯದಲ್ಲಿ ಭಾರತ – ಪಾಕಿಸ್ತಾನ ತಂಡಗಳು ಚಾಂಪಿಯನ್‌ ಪಟ್ಟಕ್ಕಾಗಿ ಸೆಣೆಸಲಿವೆ.ಪಂದ್ಯಶ್ರೇಷ್ಠ : ರೋಹಿತ್‌ ಶರ್ಮಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry