ಸೂರತ್‌ನ ನಿಷಿತಾ ಟಾಪರ್‌

7
ಏಮ್ಸ್‌ ಎಂಬಿಬಿಎಸ್‌ ಪ್ರವೇಶ ಪರೀಕ್ಷೆ

ಸೂರತ್‌ನ ನಿಷಿತಾ ಟಾಪರ್‌

Published:
Updated:
ಸೂರತ್‌ನ ನಿಷಿತಾ ಟಾಪರ್‌

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು  (ಎಐಐಎಂಎಸ್‌-ಏಮ್ಸ್‌) ಎಂಬಿಬಿಎಸ್‌  ಪ್ರವೇಶ ಪರೀಕ್ಷಾ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು,  ಗುಜರಾತ್‌ ರಾಜ್ಯದ ಸೂರತ್‌ನ  ನಿಷಿತಾ ಪುರೋಹಿತ್‌ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ದೇಶದಾದ್ಯಂತ ಮೇ 28ರಂದು ಆನ್‌ಲೈನ್‌ ಪರೀಕ್ಷೆ ಬರೆದಿದ್ದ 2,94,737 ಅಭ್ಯರ್ಥಿಗಳ ಪೈಕಿ 4,905 ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ 1828 ವಿದ್ಯಾರ್ಥಿನಿಯರು.

ದೆಹಲಿ, ಭೋಪಾಲ್‌, ಭುವನೇಶ್ವರ, ಜೋಧ್‌ಪುರ, ಪಟ್ನಾ, ರಾಯಪುರ ಮತ್ತು ರಿಷಿಕೇಶ ಏಮ್ಸ್‌ಗಳ ತಲಾ 100  (ಒಟ್ಟು 700) ಸೀಟುಗಳ ಭರ್ತಿಗೆ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಜುಲೈ 3ರಿಂದ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತು ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ ಎಂದು ಗೊತ್ತಾಗಿದೆ. 

ಮೊದಲ 10 ರ‍್ಯಾಂಕ್ ಗಳು ಕೋಟಾ ಕೇಂದ್ರಕ್ಕೆ: ಈ ವರ್ಷದ ಟಾಪರ್‌ ನಿಷಿತಾ ಪುರೋಹಿತ್‌ ಸೇರಿದಂತೆ 10 ಟಾಪರ್‌ಗಳು ರಾಜಸ್ತಾನದಲ್ಲಿನ ಕೋಟಾದ ಅಲೆನ್‌ ತರಬೇತಿ ಕೇಂದ್ರದಲ್ಲಿ ಕೋಚಿಂಗ್‌ ಪಡೆದವರಾಗಿದ್ದಾರೆ.

ಅರ್ಚಿತ್‌ ಗುಪ್ತಾ (2), ತಮೋಘ್ನ ಘೋಷ್‌ (3), ನಿಪುಣ್‌ ಚಂದ್ರ (4), ಹರ್ಷ ಅಗರ್‌ವಾಲ್‌ (5), ರಿಷವ್‌ ರಾಜ್‌ (6), ಹರ್ಷಿತ್ ಆನಂದ್‌ (7), ರಿಂಕು (8), ಅಭಿಷೇಕ್‌ ಡೋಗ್ರಾ (9), ಮನೀಷ್‌ ಮೂಲ್‌ಚಂದಾನಿ (10) ರ‍್ಯಾಂಕ್ ಪಡೆದಿದ್ದಾರೆ.

ದ್ವಿತೀಯ ಪಿಯು ಅಥವಾ 12ನೇ ತರಗತಿ (ವಿಜ್ಞಾನ–ಪಿಸಿಬಿ) ಪಾಸಾದ ವಿದ್ಯಾರ್ಥಿಗಳು ಏಮ್ಸ್‌–ಎಂಬಿಬಿಎಸ್‌ ಪ್ರವೇಶ ಪರೀಕ್ಷೆ ಬರೆಯಲು ಅರ್ಹರು. ಇಲ್ಲಿ ಪ್ರವೇಶ ಪಡೆದವರು ಒಂದು ವರ್ಷ ಇಂಟರ್ನ್‌ಶಿಪ್‌ ಸೇರಿದಂತೆ ಐದೂವರೆ ವರ್ಷ ವೈದ್ಯಕೀಯ ಪದವಿ ವ್ಯಾಸಂಗ ಮಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry