ಕೇಂದ್ರ ಯೋಜನೆಗೆ ರಾಜ್ಯದ 6 ಜಿಲ್ಲೆ

7
ಸಾಮೂಹಿಕ ಆರೋಗ್ಯ ತಪಾಸಣೆ; ಕ್ಯಾನ್ಸರ್‌ ಸೇರಿ 5 ರೋಗ ಪತ್ತೆ ಉದ್ದೇಶ

ಕೇಂದ್ರ ಯೋಜನೆಗೆ ರಾಜ್ಯದ 6 ಜಿಲ್ಲೆ

Published:
Updated:
ಕೇಂದ್ರ ಯೋಜನೆಗೆ ರಾಜ್ಯದ 6 ಜಿಲ್ಲೆ

ನವದೆಹಲಿ:  ಕ್ಯಾನ್ಸರ್‌ನಂತಹ ಮಾರಕ ರೋಗ ಪತ್ತೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿ ದೇಶದ ನೂರು ಜಿಲ್ಲೆಗಳಲ್ಲಿ ಸಾಮೂಹಿಕ ಆರೋಗ್ಯ ತಪಾಸಣೆ ಯೋಜನೆ ಜಾರಿಗೆ  ಭರದ ಸಿದ್ಧತೆ ನಡೆಸಿದ್ದು, ಈ ಯೋಜನೆಗೆ ಕರ್ನಾಟಕದ ಆರು ಜಿಲ್ಲೆಗಳು ಆಯ್ಕೆಯಾಗಿವೆ. 

ಮೊದಲ ಹಂತದಲ್ಲಿ ರಾಜ್ಯದ ಉಡುಪಿ, ಗದಗ, ಚಿಕ್ಕಮಗಳೂರು, ಹಾವೇರಿ, ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ  ಈ ಯೋಜನೆ ಜಾರಿಯಾಗಲಿದೆ. ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಈಗಾಗಲೇ  ತರಬೇತಿ ಕಾರ್ಯಕ್ರಮ ನಡೆಯುತ್ತಿದೆ.

ಆಯ್ಕೆಯಾದ ಜಿಲ್ಲೆಗಳಲ್ಲಿ ಜನರ ಮನೆಯ ಬಾಗಿಲಿಗೆ ತೆರಳುವ ಆರೋಗ್ಯ ಕಾರ್ಯಕರ್ತರು  ಸಕ್ಕರೆ ಕಾಯಿಲೆ, ರಕ್ತದೊತ್ತಡ, ಬಾಯಿ, ಸ್ತನ ಮತ್ತು ಗರ್ಭ ಕೊರಳು ಕ್ಯಾನ್ಸರ್‌ನಂತಹ ಐದು ಸೋಂಕು ತಗಲದ ರೋಗಗಳ  ತಪಾಸಣೆ ನಡೆಸಲಿದ್ದಾರೆ.

ದೇಶದಲ್ಲಿ ಈ ಐದು ರೋಗಗಳಿಂದ ಸಾವನ್ನಪ್ಪುವವರ ಸಂಖ್ಯೆ ಶೇ 52ರಷ್ಟಿದೆ.  ಮೊದಲ ಹಂತದಲ್ಲಿ 30 ವರ್ಷ ವಯೋಮಾನದ ಶೇ 38ರಷ್ಟು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಮತ್ತು ತಪಾಸಣೆ ನಡೆಸುವ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದಲ್ಲಿ ಬಾಯಿ, ಸ್ತನ ಹಾಗೂ ಗರ್ಭಕೊರಳು ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆ (ಶೇ 34)ಹೆಚ್ಚಾಗಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬಾಯಿ ಮತ್ತು ಸ್ತನ ಕ್ಯಾನ್ಸರ್‌ ತಪಾಸಣೆಯನ್ನು ಆರೋಗ್ಯ ಕಾರ್ಯಕರ್ತರು ಸ್ಥಳದಲ್ಲಿಯೇ ತಪಾಸಣೆ ನಡೆಸಿದರೆ, ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ವೈದ್ಯಾಧಿಕಾರಿ ಸಮ್ಮುಖದಲ್ಲಿ ಶುಶ್ರೂಷಕಿಯರು ಗರ್ಭಕೊರಳು ಕ್ಯಾನ್ಸರ್‌ ಪರೀಕ್ಷಿಸಲಿದ್ದಾರೆ. ಕಳೆದ ವರ್ಷ ಸಚಿವಾಲಯವು  ಈ ಯೋಜನೆಯನ್ನು ಗುಜರಾತ್‌ನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry