ಟಿಪಿಡಬ್ಲ್ಯುಎಸ್: ರೈಲು ಅಪಘಾತ ತಡೆಗೆ ಆಧುನಿಕ ವ್ಯವಸ್ಥೆ

7

ಟಿಪಿಡಬ್ಲ್ಯುಎಸ್: ರೈಲು ಅಪಘಾತ ತಡೆಗೆ ಆಧುನಿಕ ವ್ಯವಸ್ಥೆ

Published:
Updated:
ಟಿಪಿಡಬ್ಲ್ಯುಎಸ್: ರೈಲು ಅಪಘಾತ ತಡೆಗೆ ಆಧುನಿಕ ವ್ಯವಸ್ಥೆ

ನವದೆಹಲಿ: ರೈಲು ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಯೂರೋಪ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಬಳಸುತ್ತಿರುವ ರೈಲು ರಕ್ಷಣೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು (ಟ್ರೈನ್ ಪ್ರೊಟೆಕ್ಷನ್ ಅಂಡ್ ವಾರ್ನಿಂಗ್ ಸಿಸ್ಟಮ್‌– ಟಿಪಿಡಬ್ಲ್ಯುಎಸ್), ದೇಶದಲ್ಲೂ ಪರಿಚಯಿಸಲು ಭಾರತೀಯ ರೈಲ್ವೆ ಮುಂದಾಗಿದೆ.

‘ಇದು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು, ರೈಲು ಸುರಕ್ಷಿತ ವೇಗವನ್ನು ಮೀರುತ್ತಿದ್ದಂತೆ ಚಾಲನೆಯನ್ನು ತಾನೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.  

ಕಳೆದ ವರ್ಷ ದೇಶದಲ್ಲಿ ನಡೆದ ರೈಲು ಅಪಘಾತಗಳಲ್ಲಿ ಶೇ 87ರಷ್ಟು ಸಿಬ್ಬಂದಿಯ ನಿರ್ಲಕ್ಷದಿಂದಲೇ ಸಂಭವಿಸಿವೆ. ಹೀಗಾಗಿ  ಈ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಮೂಲಗಳು ಹೇಳಿವೆ.

***

* ₹2,000ಕೋಟಿ- ಟಿಪಿಡಬ್ಲ್ಯುಎಸ್ ಅಳವಡಿಕೆಗೆ  ಮುಂದಿನ ನಾಲ್ಕು ವರ್ಷಗಳಲ್ಲಿ ವೆಚ್ಚ ಮಾಡಲಿರುವ ಹಣ

* 1,244ಕಿ.ಮೀ - ಮೊದಲ ಹಂತದಲ್ಲಿ  ಟಿಪಿಡಬ್ಲ್ಯುಎಸ್ ಪಡೆಯಲಿರುವ ಮಾರ್ಗದ ಉದ್ದ

* 2,086ಕಿ.ಮೀ ಎರಡನೇ ಹಂತದಲ್ಲಿ ಟಿಪಿಡಬ್ಲ್ಯುಎಸ್ ಪಡೆಯಲಿರುವ ಮಾರ್ಗದ ಉದ್ದ

***

ಹೀಗೆ ಕೆಲಸ ಮಾಡುತ್ತದೆ

* ರೈಲು ಹಳಿಗಳ ಬದಿಗಳಲ್ಲಿ ಅಳವಡಿಸಿರುವ ಸಂವೇದಕಗಳು ರೈಲಿನಲ್ಲಿರುವ ರಿಸೀವರ್‌ (ಗ್ರಾಹಕ) ಜತೆ ಸದಾ ಸಂಪರ್ಕದಲ್ಲಿರುತ್ತವೆ

* ಈ ಸಂವೇದಕಗಳು ರೈಲಿನ ವೇಗವನ್ನು ಲೆಕ್ಕ ಹಾಕಿ, ವೇಗ ಅತಿಯಾಗಿದ್ದರೆ ಮಾತ್ರ ರೈಲಿನಲ್ಲಿರುವ ಗ್ರಾಹಕಕ್ಕೆ ಸಂದೇಶ ರವಾನಿಸುತ್ತವೆ

* ಆನಂತರ ಟಿಪಿಡಬ್ಲ್ಯುಎಸ್ ಸ್ವಯಂಚಾಲಿತವಾಗಿ ಬ್ರೇಕ್ ಹಾಕುತ್ತದೆ

***

2016–17ರಲ್ಲಿ ರೈಲು ಅಪಘಾತಗಳು

78 - ಹಳಿ ತಪ್ಪಿದ ಅವಘಡಗಳು

196 - ಮೃತಪಟ್ಟವರು

327 - ಗಾಯಗೊಂಡವರು

87% - ಸಿಬ್ಬಂದಿ ನಿರ್ಲಕ್ಷದಿಂದ ಸಂಭವಿಸಿದ ಅಪಘಾತಗಳ ಪ್ರಮಾಣ

***

ಯಾವಾಗ ವೇಗಕ್ಕೆ ಸ್ವಯಂಚಾಲಿತ ಬ್ರೇಕ್

ಯಾವುದೇ ಮಾರ್ಗದಲ್ಲಿ ನಿಗದಿಗಿಂತ ಹೆಚ್ಚಿನ ವೇಗವನ್ನು ರೈಲು ಮುಟ್ಟಿದ್ದರೆ

***ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಭಾರಿ ವೇಗದಲ್ಲಿದ್ದರೆ

***

ನಿಲ್ದಾಣಗಳನ್ನು ಪ್ರವೇಶಿಸುವಾಗ ನಿಗದಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದರೆ

***

ತಿರುವುಗಳಲ್ಲಿ ಅಪಾಯಕಾರಿ ವೇಗದಲ್ಲಿ ಇದ್ದರೆ

***ಸಿಗ್ನಲ್‌ಗಳನ್ನು ಉಲ್ಲಂಘಿಸಿದಾಗ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry