ಕೋಚ್‌ ವಿರುದ್ಧ ಹೀನಾ ಕಿಡಿ

7

ಕೋಚ್‌ ವಿರುದ್ಧ ಹೀನಾ ಕಿಡಿ

Published:
Updated:
ಕೋಚ್‌ ವಿರುದ್ಧ ಹೀನಾ ಕಿಡಿ

ಮುಂಬೈ: ಭಾರತ ಪಿಸ್ತೂಲ್‌ ಶೂಟಿಂಗ್‌ ತಂಡದ  ಮುಖ್ಯ ಕೋಚ್‌ ಪಾವೆಲ್‌ ಸ್ಮಿರನೊವ್‌ ವಿರುದ್ಧ ಹಿರಿಯ ಶೂಟರ್‌ ಹೀನಾ ಸಿಧು ಟೀಕಾ ಪ್ರಹಾರ ನಡೆಸಿದ್ದಾರೆ.

ಅಜರ್‌ಬೈಜಾನ್‌ನ ಗಬಾಲದಲ್ಲಿ ಇತ್ತೀಚೆಗೆ ನಡೆದಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದ ಮಿಶ್ರ ಡಬಲ್ಸ್‌ನಲ್ಲಿ ಜಿತು ರಾಯ್‌ ಮತ್ತು ಹೀನಾ ಅವರಿದ್ದ ಭಾರತ ತಂಡ ಚಿನ್ನದ ಸಾಧನೆ ಮಾಡಿತ್ತು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೀನಾ ‘ ಕೋಚ್‌  ಪಾವೆಲ್‌ ಅವರಿಗೆ ಶೂಟಿಂಗ್‌ ಬಗ್ಗೆ ಏನೂ ಗೊತ್ತಿಲ್ಲ. ತಾಂತ್ರಿಕವಾಗಿ ಅವರು ತುಂಬಾ ಹಿಂದೆ ಉಳಿದಿದ್ದಾರೆ. ನಾವು ಅವರ ಬಳಿ  ಸಮಸ್ಯೆ ಹೇಳಿಕೊಂಡರೆ ಅದಕ್ಕೆ ಅವರು ಸೂಕ್ತ ಪರಿಹಾರ ಸೂಚಿಸುತ್ತಿರಲಿಲ್ಲ. ಇದು ನನ್ನ ಅಭಿಪ್ರಾಯವಲ್ಲ. ಈ ವಿಚಾರವಾಗಿ ಜಿತು ರಾಯ್‌ ಕೂಡ   ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದರು.

‘ತಾಂತ್ರಿಕವಾಗಿ ಪಾವೆಲ್‌ ಅವರಿಗೆ ಏನೂ ಗೊತ್ತಿಲ್ಲ ಎಂದು ಈ ಹಿಂದೆ ಅನೇಕ ಶೂಟರ್‌ಗಳು ದೂರಿದ್ದರು. ಅವರಿಗೆ ಶೂಟಿಂಗ್‌ ತಂತ್ರಗಳ ಬಗ್ಗೆ  ಗೊತ್ತಿರದಿದ್ದಾಗ ನಮಗೆ ಏನು ಹೇಳಿ ಕೊಡಲು ಸಾಧ್ಯ.  ಅಂತಹವರ ಬಳಿ ಮಾರ್ಗದರ್ಶನ  ಪಡೆದರೆ ನಾವು ಕಲಿ ಯುವುದಾದರೂ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry