ನ್ಯಾಯಾಲಯದಿಂದ ಅರ್ಜಿ ವಾಪಸ್ ಪಡೆಯಲಿರುವ ನಟಿ ಆವಂತಿಕಾ ಶೆಟ್ಟಿ

7

ನ್ಯಾಯಾಲಯದಿಂದ ಅರ್ಜಿ ವಾಪಸ್ ಪಡೆಯಲಿರುವ ನಟಿ ಆವಂತಿಕಾ ಶೆಟ್ಟಿ

Published:
Updated:
ನ್ಯಾಯಾಲಯದಿಂದ ಅರ್ಜಿ ವಾಪಸ್ ಪಡೆಯಲಿರುವ ನಟಿ ಆವಂತಿಕಾ ಶೆಟ್ಟಿ

ಬೆಂಗಳೂರು: ‘ರಾಜು ಕನ್ನಡ ಮೀಡಿಯಂ’ ಚಿತ್ರದ ಡಬ್ಬಿಂಗ್‌ ಅನ್ನು ಬೇರೊಬ್ಬರಿಂದ ಮಾಡಿಸದಂತೆ ನಿರ್ಮಾಪಕರಿಗೆ ಸೂಚಿಸುವಂತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ನಟಿ ಆವಂತಿಕಾ ಶೆಟ್ಟಿ ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಚಿತ್ರ ನಿರ್ಮಾಪಕ ಕೆ.ಎ. ಸುರೇಶ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಎಂದಿಗೂ ಹೊರಿಸಿಲ್ಲ’ ಎಂಬ ಸ್ಪಷ್ಟನೆ ನೀಡಿದರು.

‘ನಟನೆ ಸರಿಯಿಲ್ಲ ಎಂಬ ಕಾರಣ ನೀಡಿ ಚಿತ್ರತಂಡದಿಂದ ಹೊರಹೋಗುವಂತೆ ಸುರೇಶ್ ಅವರು ನನಗೆ ಸೂಚಿಸಿದ್ದಾರೆ. ಈ ರೀತಿ ಅನ್ಯಾಯ ಚಿತ್ರರಂಗದ ಬೇರೆ ಯಾವ ಹೆಣ್ಣುಮಗಳಿಗೂ ಆಗಬಾರದು ಎಂಬ ಕಾರಣಕ್ಕೆ ಈ ವಿಚಾರ ಹಂಚಿಕೊಳ್ಳುತ್ತಿದ್ದೇನೆ’ ಎಂದು ಆವಂತಿಕಾ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು. ಈ ವಿಚಾರ ವಿವಾದದ ಸ್ವರೂಪ ಪಡೆದಿತ್ತು. ಇದನ್ನು ಗಮನಿಸಿದ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ನಟಿ ಹಾಗೂ ನಿರ್ಮಾಪಕರನ್ನು ಕರೆದು ಗುರುವಾರ ಸಂಧಾನ ಸಭೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry