ವಿಷಾಹಾರ ನೀಡುತ್ತಿದ್ದಾರೆ: ನಾಗರಾಜ್‌

7

ವಿಷಾಹಾರ ನೀಡುತ್ತಿದ್ದಾರೆ: ನಾಗರಾಜ್‌

Published:
Updated:
ವಿಷಾಹಾರ ನೀಡುತ್ತಿದ್ದಾರೆ: ನಾಗರಾಜ್‌

ಬೆಂಗಳೂರು: ರೌಡಿ ನಾಗರಾಜ್‌ ಹಾಗೂ ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿ ಕಸ್ಟಡಿ ಅವಧಿ ಮುಗಿದಿದ್ದರಿಂದ ಕೆಂಗೇರಿ ಠಾಣೆಯ ಪೊಲೀಸರು, ಮೂವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಏಳು ದಿನಗಳವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ವಿಚಾರಣೆ ವೇಳೆ ರೌಡಿ ನಾಗರಾಜ್‌, ‘ಪೊಲೀಸರು ವಿಷಾಹಾರ ಕೊಡುತ್ತಿದ್ದಾರೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅವರಿಂದ ಮುಕ್ತಿ ಕೊಡಿಸಿ’ ಎಂದು   ಗೋಗರೆದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry