ಚಿಕ್ಕಮಗಳೂರಿನಲ್ಲಿ ಭೂಸೇನಾ ನಿಗಮದ ಎಇ, ಕಲಬುರ್ಗಿಯಲ್ಲಿ ಜೆಸ್ಕಾಂ ಎಇಇ ಮನೆ ಮೇಲೆ ಎಸಿಬಿ ದಾಳಿ

7

ಚಿಕ್ಕಮಗಳೂರಿನಲ್ಲಿ ಭೂಸೇನಾ ನಿಗಮದ ಎಇ, ಕಲಬುರ್ಗಿಯಲ್ಲಿ ಜೆಸ್ಕಾಂ ಎಇಇ ಮನೆ ಮೇಲೆ ಎಸಿಬಿ ದಾಳಿ

Published:
Updated:
ಚಿಕ್ಕಮಗಳೂರಿನಲ್ಲಿ ಭೂಸೇನಾ ನಿಗಮದ ಎಇ, ಕಲಬುರ್ಗಿಯಲ್ಲಿ ಜೆಸ್ಕಾಂ ಎಇಇ ಮನೆ ಮೇಲೆ ಎಸಿಬಿ ದಾಳಿ

ಚಿಕ್ಕಮಗಳೂರು, ಕಲಬುರ್ಗಿ: ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಿಗ್ಗೆ ಚಿಕ್ಕಮಗಳೂರು ಮತ್ತು ಕಲಬುರ್ಗಿ ನಗರದಲ್ಲಿ ಭೂಸೇನಾ ನಿಗಮ ಮತ್ತು ಜೆಸ್ಕಾಂ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ಕೈಗೊಂಡಿದ್ದಾರೆ.

ಜೆಸ್ಕಾಂ ಎಇಇ ಮನೆ ಮೇಲೆ ದಾಳಿ

ಕಲಬುರ್ಗಿಯಲ್ಲಿ ಜೆಸ್ಕಾಂ ಎಇಇ ಸಹಾದೇವ ಮಾನಕೆರೆ ನಿವಾಸದ ಮೇಲೆ ಶುಕ್ರವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಎಸಿಬಿ ಎಸ್ಪಿ ಅನಿತಾ ಹದ್ದಣ್ಣನವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ಮಾಡಿದ್ದಾರೆ.

ಭೂಸೇನಾ ನಿಗಮದ ಎಇ ತಿಪ್ಪಾರೆಡ್ಡಿ ಮನೆ ಮೇಲೆ ದಾಳಿ

ಚಿಕ್ಕಮಗಳೂರಿನಲ್ಲಿ ಶುಕ್ರವಾರ ಎಸಿಬಿ ಅಧಿಕಾರಿಗಳು ಭೂಸೇನಾ ನಿಗಮದ ಸಹಾಯಕ ಎಂಜಿನಿಯರ್ ತಿಪ್ಪಾರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ನಗರದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿನ ತಿಪ್ಪಾರೆಡ್ಡಿ ಅವರ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry