ನಿರಂತರ ಮಳೆ: ಬೆಣ್ಣೆತೊರಾ ಹೊರ ಹರಿವು ಹೆಚ್ಚಳ

7

ನಿರಂತರ ಮಳೆ: ಬೆಣ್ಣೆತೊರಾ ಹೊರ ಹರಿವು ಹೆಚ್ಚಳ

Published:
Updated:
ನಿರಂತರ ಮಳೆ: ಬೆಣ್ಣೆತೊರಾ ಹೊರ ಹರಿವು ಹೆಚ್ಚಳ

ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಹೆಬ್ಬಾಳ ಸಮೀಪದ ಬೆಣ್ಣೆತೊರಾ ಜಲಾಶಯದಿಂದ ಶುಕ್ರವಾರ 1476 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಜಿಲ್ಲೆಯಾದ್ಯಂತ ಗುರುವಾರ ಐದು ತಾಸು ನಿರಂತರ ಮಳೆಯಾಗಿದ್ದು, ಜಲಾಶಯದ ಒಳಹರಿವು 2300 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಜಲಾಶಯದ ಗರಿಷ್ಠ ಎತ್ತರ 438.89 ಮೀ. ಇದ್ದು, ಸದ್ಯ 438.39 ಮೀ. ಭರ್ತಿಯಾಗಿದೆ.

ಹೆಚ್ಚಿನ ನೀರು ಹರಿಬಿಟ್ಟಿರುವುದರಿಂದ ನದಿ ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರು ನದಿಗೆ ಇಳಿಯದಂತೆ ಜಾಗೃತರಾಗಿರಬೇಕು ಎಂದು ಜಲಾಶಯದ ಅಧಿಕಾರಿಗಳು ಮೂರು ದಿನಳ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry