ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ಬೀದಿಗಳಲ್ಲಿ ಸಿಂಹದೊಂದಿಗೆ ಸಂಚಾರ: ಮಾಲಿಕನ ಬಂಧನ

Last Updated 16 ಜೂನ್ 2017, 6:55 IST
ಅಕ್ಷರ ಗಾತ್ರ

ಕರಾಚಿ: ನಗರದ ಪ್ರಮುಖ ಬೀದಿಗಳಲ್ಲಿ ಸ್ಥಳೀಯ ನಿವಾಸಿ ತಮ್ಮ ಟ್ರಕ್‌ನಲ್ಲಿ ಸಿಂಹದೊಂದಿಗೆ ಸಂಚರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕರಾಚಿ ಪಾಕಿಸ್ತಾನದ ಪ್ರಮುಖ ಬಂದರು ನಗರವಾಗಿದ್ದು, ಬೀದಿಗಳಲ್ಲಿ ಜನಸಂದಣಿ ಹೆಚ್ಚಿರುವ ಸಂದರ್ಭದಲ್ಲಿ ಟ್ರಕ್ಕಿನ ಹಿಂಭಾಗದಲ್ಲಿ ಸಿಂಹವನ್ನು ಕೂರಿಸಿಕೊಂಡು ವಾಹನ ಚಾಲನೆ ಮಾಡುವುದನ್ನು ನೋಡಿ ಸ್ಥಳೀಯರು ಆಂತಕ ವ್ಯಕ್ತಪಡಿಸಿದರು. ಜತೆಗೆ, ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದರು.

ಕರಾಚಿಯ ಕರಿಮಾಬಾದ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಕುರಿತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಪಾಕ್‌ನ ಅಂತರಿಕ ಸಚಿವ ಸೊಹೈಲ್‌ ಅನ್ವರ್‌ ಸಿಯಾಲ್‌ ಅವರು ಪೊಲೀಸರಿಗೆ ಸೂಚಿಸಿದ್ದಾರೆ.

ಸಿಂಹದ ಮಾಲಿಕ ‘ಸಕ್ಲೇನ್‌ ಜಾವೈದ್‌’ ಎಂಬುವರನ್ನು ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಜತೆಗೆ, ಮನೆಯಲ್ಲಿದ ದೊಡ್ಡ ಗಾತ್ರದ ಬೆಕ್ಕುಗಳನ್ನು ವಶಕ್ಕೆ ಪಡೆದಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿ ಮುಕಾದಾಸ್‌ ಹೈದರ್‌ ತಿಳಿಸಿದ್ದಾರೆ.

'ಸಿಂಹ ಅನಾರೋಗ್ಯದಿಂದ ಬಳಲುತ್ತಿದ ಕಾರಣ ಅದನ್ನು ವೈದ್ಯರ ಬಳಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದೆ’ ಎಂದು ಜಾವೈದ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಜತೆಗೆ, ‘ತಮಗೆ ಪ್ರಾಣಿ ಸಾಕಣೆ ಆಸಕ್ತಿಯಿದ್ದು ಸರ್ಕಾರದಿಂದ ಅನುಮತಿ ಪಡೆದ ಖಾಸಗಿ ಮೃಗಾಲಯವೊಂದನ್ನು ಸ್ಥಾಪಿಸಿರುವುದಾಗಿ' ತಿಳಿಸಿದ್ದಾರೆ.

'ಸಿಂಧ್‌ ಪ್ರಾಂತ್ಯದ ವನ್ಯಜೀವಿ ಇಲಾಖೆಯಿಂದ ಜಾವೈದ್‌ ಸಿಂಹ ಸಾಕಣೆಗೆ ಪರವಾನಗಿ ಪಡೆದು ‘ಖಾಸಗಿ ಮೃಗಾಲಯ’ ಸ್ಥಾಪಿಸಿದ್ದಾರೆ. ಆದರೆ, ಪರವಾನಗಿಯ ಅವಧಿ 2016ರ ಜೂನ್‌ ವೇಳೆ ಮುಕ್ತಯವಾಗಿದೆ. ಆದ್ದರಿಂದ ಜಾವೈದ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ದಾಖಲೆಗಳ ಕುರಿತು ವರದಿ ನೀಡುವಂತೆ ಸಿಂಧ್‌ ಪ್ರಾಂತ್ಯದ ವನ್ಯಜೀವಿ ಇಲಾಖೆಗೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT