ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲು ಆಗ್ರಹ

7

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲು ಆಗ್ರಹ

Published:
Updated:
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲು ಆಗ್ರಹ

ಗಜೇಂದ್ರಗಡ: ಪಟ್ಟಣದ ಕ.ರ.ವೇ ಕಾರ್ಯಕರ್ತರು ಎಲ್ಲ ವರ್ಗದ ವಿದ್ಯಾರ್ಥಿ ಗಳಿಗೆ ಸರ್ಕಾರ ಉಚಿತ ಪಾಸ್, ಕರ್ನಾಟಕ ದರ್ಶನ ಪ್ರವಾಸದ ಅವಕಾಶ ನೀಡಬೇಕು ಎಂದು ಆಗ್ರಹಿಸಿ ತಹಶೀ ಲ್ದಾರ್ ಮೂಲಕ ಸಿ.ಎಂ.ಗೆ ಮನವಿ ಸಲ್ಲಿಸಿದರು.

ಕ.ರ.ವೇ. ತಾಲ್ಲೂಕು ಘಟಕದ ಅಧ್ಯಕ್ಷ ರಜಾಕ್ ಢಾಲಾಯತ್ ಮಾತ ನಾಡಿ ರಾಜ್ಯ ಸರ್ಕಾರ ಎಸ್.ಸಿ, ಎಸ್.ಟಿ ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರು ವುದು ಖಂಡನಾರ್ಹ. ಎಲ್ಲ ವರ್ಗದವ ರಲ್ಲಿ ಬಡ ಮಕ್ಕಳಿದ್ದು, ಕೇವಲ ಒಂದು ವರ್ಗಕ್ಕೆ ಜಾರಿ ಮಾಡುವುದು ಸರಿಯಲ್ಲ.

ಬರಗಾಲದಿಂದ ರೈತರು ಬೆಳೆ ಇಲ್ಲದೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರ ದಾಡುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಚಿಂತರಾಗುತ್ತಿದ್ದಾರೆ. ರಾಜ್ಯ ಸರ್ಕಾರ ಜಾತಿ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು ಮುಂದಾಗಿರುವುದು ಸಲ್ಲ.

ವಿದ್ಯಾರ್ಥಿಗಳ ನಡುವೆ ಈ ರೀತಿಯ ತಾರತಮ್ಯ ಮಾಡು ವುದು ಸರಿಯಲ್ಲ. ಕೂಡಲೆ ರಾಜ್ಯ ಸರ್ಕಾರ ಈ ಆದೇಶವನ್ನು ಎಲ್ಲ ವರ್ಗದ ವರ್ಗದ ವಿದ್ಯಾರ್ಥಿಗಳಿಗೆ ಅನ್ವಯಿಸ ಬೇಕು ಎಂದು ಆಗ್ರಹಿಸಿದರು.

ವಿರೇಶ ಶೀವಶಿಂಪಗೇರ್, ಹೂವಾಜಿ ಚಂದುಕರ, ಹುಸೇನ್ ಕವಲೂರ, ಮಾರುತಿ ಬಂಕದ, ನೀಲಪ್ಪ ಚಲವಾದಿ, ನಾಗರಾಜ ಬಂಕದ, ರಾಘು ಮಾದರ, ಮುಸ್ತಾಕ ಹುಟುಗೂರ, ಹನಮಂತ ಘೋರ್ಪಡೆ, ಬಿಮಪ್ಪ ಬಂಕದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry