ಹೆದ್ದಾರಿ ವಿಸ್ತರಣೆ ಕಾಮಗಾರಿ ಸ್ಥಗಿತ

7

ಹೆದ್ದಾರಿ ವಿಸ್ತರಣೆ ಕಾಮಗಾರಿ ಸ್ಥಗಿತ

Published:
Updated:
ಹೆದ್ದಾರಿ ವಿಸ್ತರಣೆ ಕಾಮಗಾರಿ ಸ್ಥಗಿತ

ಬಾದಾಮಿ: ಕೆಶಿಪ್‌ ಯೋಜನೆಯ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣಾ ಕಾಮಗಾರಿ ಪಟ್ಟದಕಲ್ಲು, ಕಾಟಾಪೂರ, ಮಂಗಳ ಗುಡ್ಡ ಮತ್ತು  ರಾಮತಾಳ ಮಧ್ಯೆ ಅಂದಾಜು 7 ಕಿ.ಮೀ. ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ (ಕೆಶಿಪ್‌ ) ಸವದತ್ತಿ, ರಾಮದುರ್ಗ, ಬಾದಾಮಿಯಿಂದ ಕಮತಗಿವರೆಗೆ (130 ಕಿ.ಮೀ) ರಸ್ತೆ ವಿಸ್ತರಣಾ ಕಾಮಗಾರಿಯಲ್ಲಿ ಬಾದಾಮಿ ರೈಲ್ವೆ ಸ್ಟೇಶನ್‌ ಬಳಿಯ ಕೋಣಮ್ಮ ದೇವಾಲಯದಿಂದ ಕಮತಗಿಯವರೆಗೆ ಅಶೋಕಾ ಕನ್ಸ್‌ಲ್ಟಿಂಗ್‌ ಎಂಬ ಖಾಸಗಿ ಗುತ್ತಿಗೆದಾರರು ಕೆಲಸ ಮುಗಿಸುವ ಹಂತದಲ್ಲಿ ಇದ್ದಾರೆ.

ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಅರಣ್ಯ ಇಲಾಖೆಯಿಂದ ಅನುಮತಿ ಪತ್ರ ಮತ್ತು ಕೆಲವು ರೈತರಿಗೆ ಪರಿಹಾರ ಹಣ ಬಾರದ ಕಾರಣ ರಸ್ತೆ ಕಾಮಗಾರಿ ಕೆಲವೆಡೆ ಸ್ಥಗಿತವಾಗಿದೆ ಎಂದು ತಿಳಿದುಬಂದಿದೆ.

ಪಟ್ಟದಕಲ್ಲು ಸರ್ಕಾರಿ ಆಸ್ಪತ್ರೆಯಿಂದ ಪಟ್ಟದಕಲ್ಲು ಸ್ಮಾರಕಗಳ ಮಲಪ್ರಭಾ ನದಿ ಡಂಡೆಯವರೆಗೆ, ಕಾಟಾಪುರ ಗ್ರಾಮದಿಂದ ಮಂಗಳಗುಡ್ಡ, ಚಿಮ್ಮಲಗಿ, ಗ್ರಾಮದ ಕೆಲವೆಡೆ ಮತ್ತು ಸಿದ್ದನಕೊಳ್ಳ ಸಮೀಪದ ರಾಮತಾಳ ಬೆಟ್ಟದ ಕಾಮ ಗಾರಿ ಸ್ಥಗಿತಗೊಂಡು 15 ದಿನಗಳಾಗಿವೆ.

ಕ್ಯಾಂಪಿನಲ್ಲಿ ಲಾರಿಗಳು ಜೆಸಿಬಿಗಳು ಕಾರ್ಯ ಸ್ಥಗಿತವಾಗಿ ನಿಂತಿವೆ. ಕೆಲವು ಗಾಡಿಗಳನ್ನು ಗುತ್ತಿಗೆದಾರರು ಬೇರೆ ಕಡೆಗೆ ಕಳಿಸಿದ್ದಾರೆ. ಅನುಮತಿ ದೊರೆಯದಿದ್ದರೆ ರಸ್ತೆ ಕಾಮಗಾರಿ ಹಾಗೆಯೇ ಬಿಟ್ಟು ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗುತ್ತಿಗೆದಾರರಿಗೆ ಕೆಶಿಪ್‌ ಸಹಕರಿಸುತ್ತಿಲ್ಲ ಎನ್ನಲಾಗಿದೆ.

ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸುವ ಮುನ್ನ ಸಂಬಂಧಿಸಿದ ಇಲಾಖೆಗಳ ಒಪ್ಪಿಗೆ ಪಡೆದು ಎಲ್ಲರಿಗೂ ಪರಿಹಾರ ಹಣ ವಿತರಿಸಿದ ಮೇಲೆ ಕಾಮಗಾರಿ ಆರಂಭಿಸಬೇಕಿತ್ತು ಎಂದು ಮಂಗಳಗುಡ್ಡ ಗ್ರಾಮದ ರೈತ ಅಶೋಕ ದೇಸಾಯಿ ಹೇಳಿದರು.

ಬಾಧಿತರಲ್ಲದವರಿಗೆ ಪರಿಹಾರ: ಯೋಜನೆಯಲ್ಲಿ ಮನೆ ಕಳೆದುಕೊಳ್ಳ ಲಾರದ ಜನಕ್ಕೂ  ಪರಿಹಾರ ಹಣ ಕೊಟ್ಟಿದ್ದಾರೆ. ಹೊಲ ಕಳೆದುಕೊಂಡ ರೈತರಿಗೆ ಪರಿಹಾರ ಹಣ ಬಂದಿಲ್ಲ. ಇಲಾಖೆಗಳ ಅನುಮತಿ ಬಂದ ನಂತರ ರಸ್ತೆ  ಕಾಮಗಾರಿ ಮುಗಿಸಲಾಗು ವುದು ಎಂದು ಕೆಶಿಪ್‌ ಸಹಾಯಕ ಎಂಜಿನಿಯರ್‌ ಎಸ್‌.ವಿ. ನಾಯಕ ಪತ್ರಿಕೆ ಸಂಪರ್ಕಿಸಿದಾಗ ತಿಳಿಸಿದರು.

ಅರ್ಧ ರಸ್ತೆ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ಅಡೆತಡೆ ಹಾಗೂ ಅಪಘಾತಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತುವರ್ಜಿ ವಹಿಸಬೇಕು ಎಂದು ಚಿತ್ರದುರ್ಗ ಪ್ರವಾಸಿ ರಾಮಚಂದ್ರಗೌಡ ಪಟ್ಟದಕಲ್ಲಿನಿಂದ ಐಹೊಳೆಗೆ ತೆರಳುವ ಮಾರ್ಗದಲ್ಲಿ ಸಿಕ್ಕಾಗ ಹೇಳಿದರು.

* * 

ಕೆಶಿಪ್‌ ಇಲಾಖೆ ಮೊದಲೇ ಸಂಬಂಧಿಸಿದ ಇಲಾಖೆ ಅನುಮತಿ ಪಡೆದು ಗುತ್ತಿಗೆ ನೀಡ ಬೇಕಿತ್ತು. ಅನುಮತಿ ಇಲ್ಲದೆ ಕಾರ್ಯ ಆರಂಭಿಸುವುದು ಸರಿಯಲ್ಲ                           ಸಿದ್ದಣ್ಣ ಮಾದರ

ಕಾಟಾಪುರ ಗ್ರಾಮಸ್ಥ

* * 

ನನ್ನ ಹೊಲ ಒಂದೆಡೆ 2 ಗುಂಟೆ ಇನ್ನೊಂ ದೆಡೆ 4 ಗುಂಟೆ ಹೋಗುತ್ತದೆ. ಕೆಶಿಫ್‌ ದಿಂದ ನನಗೆ ₹ 1.86 ಲಕ್ಷ ಪರಿಹಾರ ಹಣ ಬರಬೇಕು. ಇದುವರೆಗೂ ಒಂದು ಪೈಸೆ ಬಂದಿಲ್ಲ

ಅಶೋಕ ದೇಸಾಯಿ

ಮಂಗಳಗುಡ್ಡ ಗ್ರಾಮದ ರೈತ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry