ನಾನು ಸಂಪೂರ್ಣ ‘ಫಿಟ್‌’ ಆಗಿದ್ದೇನೆ; ಆದರೆ, ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ: ಜಸ್‌ಪ್ರೀತ್ ಬೂಮ್ರಾ

7

ನಾನು ಸಂಪೂರ್ಣ ‘ಫಿಟ್‌’ ಆಗಿದ್ದೇನೆ; ಆದರೆ, ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ: ಜಸ್‌ಪ್ರೀತ್ ಬೂಮ್ರಾ

Published:
Updated:
ನಾನು ಸಂಪೂರ್ಣ ‘ಫಿಟ್‌’ ಆಗಿದ್ದೇನೆ; ಆದರೆ, ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ: ಜಸ್‌ಪ್ರೀತ್ ಬೂಮ್ರಾ

ಬರ್ಮಿಂಗ್‌ಹ್ಯಾಮ್‌: ಏಕದಿನ ಮತ್ತು ಟ್ವೆಂಟಿ–20 ಪಂದ್ಯ ಆಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ಪ್ರಕಟಿಸಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಮತ್ತು  ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್ ಮತ್ತು ಚೈನಾಮನ್ ಶೈಲಿಯ ಬೌಲರ್‌ ಕುಲದೀಪ್ ಯಾದವ್‌ ಅವರಿಗೆ 15 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌ ತಂಡವನ್ನು ಗುರುವಾರ ಪ್ರಕಟಿಸಿದರು.

ಐಪಿಎಲ್ ಹಾಗೂ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ನಿರಂತರ ಬೆವರು ಸುರಿಸಿದ ಬೂಮ್ರಾ ಅವರ ಮೇಲೆಯೂ ಹೆಚ್ಚು ಒತ್ತಡ ಹೇರದಿರಲು ಆಡಳಿತ ನಿರ್ಧರಿಸಿದೆ. ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 5 ಏಕದಿನ ಹಾಗೂ ಏಕೈಕ ಟಿ–20 ಪಂದ್ಯವನ್ನು ಆಡಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೂಮ್ರಾ, ‘ನಾನು ಸಂಪೂರ್ಣ ಫಿಟ್‌ ಆಗಿದ್ದೇನೆ. ಯಾವುದೇ ಫೀಟ್ನೆಸ್‌ ಸಮಸ್ಯೆಯನ್ನು ಎದುರಿಸುತ್ತಿಲ್ಲ. ಆದರೆ, ಆಯ್ಕೆ ಸಮಿತಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದೆ. ವೆಸ್ಟ್‌ ಇಂಡೀಸ್‌ ಸರಣಿಯಿಂದ ನನನ್ನು ಕೈ ಬಿಟ್ಟಿರುವುದಕ್ಕೆ ಯಾವುದೇ ಬೇಸರವಿಲ್ಲ’ ಎಂದು ತಿಳಿಸಿದ್ದಾರೆ.

ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಭಾರತ–ಪಾಕ್‌ ತಂಡ ಮುಖಾಮುಖಿಯಾಗಲಿವೆ. ಆದಕ್ಕೆ ಅಚ್ಚರಿ ಪಡುವ ಅಗತ್ಯವಿಲ್ಲ. ಯಾವ ದಿನ ಏನುಬೇಕಾದರೂ ಆಗಬಹುದು.

‘ನಾವು ಫೈನಲ್‌ ಪ್ರವೇಶಿಸಿದ್ದೇವೆ ಎಂದು ಸಂತೃಪ್ತರಾಗುವುದು ಸರಿಯಲ್ಲ, ಪ್ರತಿ ಪಂದ್ಯವೂ ಕಠಿಣವಾಗಿತ್ತು. ಎದುರಾಳಿ ತಂಡವನ್ನು ಗೌರವಿಸುವುದು ನಮ್ಮ ಕರ್ತವ್ಯ’ ಎಂದಿದ್ದಾರೆ.

ಸದ್ಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡುತ್ತಿರುವ ಬೂಮ್ರಾ, ಬೌಲಿಂಗ್‌ನಲ್ಲಿ ಉತ್ತಮ ಪ್ರರ್ದಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry