ಮ್ಯಾಚ್ ಫಿಕ್ಸಿಂಗ್ ಮೂಲಕ ಪಾಕಿಸ್ತಾನ ಫೈನಲ್ ತಲುಪಿದೆ: ಪಾಕ್ ಮಾಜಿ ಕ್ರಿಕೆಟಿಗ ಆರೋಪ?

7

ಮ್ಯಾಚ್ ಫಿಕ್ಸಿಂಗ್ ಮೂಲಕ ಪಾಕಿಸ್ತಾನ ಫೈನಲ್ ತಲುಪಿದೆ: ಪಾಕ್ ಮಾಜಿ ಕ್ರಿಕೆಟಿಗ ಆರೋಪ?

Published:
Updated:
ಮ್ಯಾಚ್ ಫಿಕ್ಸಿಂಗ್ ಮೂಲಕ ಪಾಕಿಸ್ತಾನ ಫೈನಲ್ ತಲುಪಿದೆ: ಪಾಕ್ ಮಾಜಿ ಕ್ರಿಕೆಟಿಗ ಆರೋಪ?

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌‍ನಲ್ಲಿ ಭಾರತ– ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಜನರು ಕಾತರದಿಂದ ಕಾಯುತ್ತಿರುವ ಹೊತ್ತಲ್ಲೇ, ಪಾಕ್ ಫೈನಲ್ ತಲುಪಲು ಮ್ಯಾಚ್ ಫಿಕ್ಸಿಂಗ್ ಮಾಡಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಆರೋಪಿಸಿದ್ದಾರೆ.

ಸಿಎನ್‍ಎನ್ ನ್ಯೂಸ್ 18 ವರದಿ ಪ್ರಕಾರ ಪಾಕ್ ಮಾಜಿ ಕ್ರಿಕೆಟಿಗ ಅಮೀರ್ ಸೊಹೈಲ್  ಪಾಕಿಸ್ತಾನ ಕ್ರಿಕೆಟ್ ಟೀಂ ಮೇಲೆ ಪರೋಕ್ಷವಾಗಿ ಈ ಆಪಾದನೆ ಮಾಡಿದ್ದಾರೆ.

ಚೆನ್ನಾಗಿ ಆಡಿದರೆ ಅವರನ್ನು ಅಭಿನಂದಿಸುತ್ತೇವೆ. ಕಳಪೆ ಪ್ರದರ್ಶನ ನೀಡಿದರೆ ಟೀಕಿಸುತ್ತೇವೆ. ಇಂಗ್ಲೆಂಡ್‍ನ್ನು ಪಾಕಿಸ್ತಾನ ಪರಾಭವಗೊಳಿಸಿದಾಗ ಪಾಕ್ ಕ್ರಿಕೆಟ್ ತಂಡ ಸಂತೋಷದಿಂದ ಕುಣಿದಾಡಿದ್ದು ಕಾಣಿಸಲಿಲ್ಲ. ಯಾಕೆಂದರೆ ಫೈನಲ್‍ಗೆ ತಲುಪುತ್ತೇವೆ ಎಂದು ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು.

ಇದಕ್ಕಿಂತ ಹೆಚ್ಚೇನೂ ಹೇಳಲಾರೆ, ಇನ್ನುಳಿದದ್ದು ಪಂದ್ಯವನ್ನು ವೀಕ್ಷಿಸಿದ ಜನರೇ ಹೇಳುತ್ತಾರೆ ಎಂದಿದ್ದಾರೆ ಸೊಹೈಲ್. ಜಾವೇದ್ ಮಿಯಾಂದಾದ್ ಜತೆಗೆ ಕುಳಿತುಕೊಂಡೇ ಸೊಹೈಲ್ ಪಾಕಿಸ್ತಾನದ ಸುದ್ದಿ ವಾಹಿನಿಗೆ ಈ ಸಂದರ್ಶನ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry