ರಷ್ಯಾ ಸೇನೆಯ ವೈಮಾನಿಕ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಮುಖಂಡ ಬಾಗ್ದಾದಿ ಬಲಿ?

7

ರಷ್ಯಾ ಸೇನೆಯ ವೈಮಾನಿಕ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಮುಖಂಡ ಬಾಗ್ದಾದಿ ಬಲಿ?

Published:
Updated:
ರಷ್ಯಾ ಸೇನೆಯ ವೈಮಾನಿಕ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಮುಖಂಡ ಬಾಗ್ದಾದಿ ಬಲಿ?

ಮೊಸ್ಕೊ: ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‍ನ ಮುಖಂಡ ಅಬು ಬಕ್‍ರ್‍ ಅಲ್ ಬಾಗ್ದಾದಿ ವೈಮಾನಿಕ ದಾಳಿಗೆ ಬಲಿಯಾಗಿರುವ ಸಾಧ್ಯತೆ ಇದೆ ಎಂದು ರಷ್ಯಾ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೇ 28ರಂದು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಸೇನೆ ವೈಮಾನಿಕ ದಾಳಿ ನಡೆಸಿತ್ತು. ರಾಖ್ಖಾದಲ್ಲಿ ನಡೆದ ಈ ದಾಳಿಯಲ್ಲಿ ಬಾಗ್ದಾದಿ ಸೇರಿದಂತೆ 300 ಜನರು ಹತ್ಯೆಯಾಗಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದೆ. ಆದಾಗ್ಯೂ, ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಇದು ಅಧಿಕೃತ ಸುದ್ದಿ ಅಲ್ಲ ಎಂದು ರಷ್ಯಾ ಹೇಳಿದೆ.

ಮೇ 28ರಂದು 00:35 ಮತ್ತು 00:45 ನಡುವಿನ ಸಮಯದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖಂಡರು ಸಭೆ ನಡೆಸುತ್ತಿದ್ದಾಗ ರಷ್ಯಾ ಸಿರಿಯಾದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ಸಭೆಯಲ್ಲಿ ಬಾಗ್ದಾದಿ ಕೂಡಾ ಭಾಗವಹಿಸಿದ್ದು ವೈಮಾನಿಕ ದಾಳಿಯಲ್ಲಿ ಈ ಮುಖಂಡರೆಲ್ಲರೂ ಹತರಾಗಿರುವ ಸಾಧ್ಯತೆ ಇದೆಎಂದು ಸಚಿವಾಲಯ ಹೇಳಿದೆ.

ಏತನ್ಮಧ್ಯೆ, ಬಾಗ್ದಾದಿ ಹತ್ಯೆ ಬಗ್ಗೆ ಇಸ್ಲಾಮಿಕ್ ಸ್ಟೇಟ್ ಮತ್ತು ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡುತ್ತಿರುವ ಅಮೆರಿಕ ಸೈನ್ಯ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಬಾಗ್ದಾದಿ ಹತ್ಯೆ ಸುದ್ದಿಯನ್ನು ಸಿರಿಯಾ ಸರ್ಕಾರ ಕೂಡಾ ದೃಢೀಕರಿಸಿಲ್ಲ.

ಬಾಗ್ದಾದಿ ಹತ್ಯೆ ಬಗ್ಗೆ ಹಲವು ಬಾರಿ ಸುಳ್ಳು ಸುದ್ದಿಗಳೂ  ಹರಿದಾಡಿದ್ದವು. ಈ ಹಿಂದೆ ಬಾಗ್ದಾದಿ ವಿಷಪ್ರಾಶನದಿಂದ ಗಂಭೀರ ಸ್ಥಿತಿಯಲ್ಲಿರುವುದಾಗಿ ಸುದ್ದಿ ಹಬ್ಬಿತ್ತು. 2016ರಲ್ಲಿ ಬಾಗ್ದಾದಿಯನ್ನು ಅಮೆರಿಕ ಹತ್ಯೆ ಮಾಡಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಬಾಗ್ದಾದಿಯ ನೆಲೆ ಎಲ್ಲಿದೆ ಎಂಬುದರ ಬಗ್ಗೆ ಇಲ್ಲಿಯವರಗೆ ಯಾರಿಗೂ ಸ್ಪಷ್ಟ ಮಾಹಿತಿ ಲಭಿಸಿಲ್ಲ.

ಯಾರು ಈ ಬಾಗ್ದಾದಿ?

ನಿಜ ಹೆಸರು: ಇಬ್ರಾಹಿಂ ಅಲ್ ಸಮರಾಯಿ. 46ರ ಹರೆಯದ ಈತ 2013ರಲ್ಲಿ ಅಲ್ ಖೈದಾ ಸಂಘಟನೆಯಿಂದ ಹೊರ ನಡೆದಿದ್ದ. ಬಾಗ್ದಾದಿಯನ್ನು ಸೆರೆ ಹಿಡಿದರೆ 1 ಕೋಟಿ ಡಾಲರ್  ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry