ಟ್ಯೂಬ್‌ಲೈಟ್‌ ‘ಬಾಹುಬಲಿ–2’ರ ದಾಖಲೆ ಮುರಿಯವುದೇ?

7

ಟ್ಯೂಬ್‌ಲೈಟ್‌ ‘ಬಾಹುಬಲಿ–2’ರ ದಾಖಲೆ ಮುರಿಯವುದೇ?

Published:
Updated:
ಟ್ಯೂಬ್‌ಲೈಟ್‌ ‘ಬಾಹುಬಲಿ–2’ರ ದಾಖಲೆ ಮುರಿಯವುದೇ?

ಮುಂಬೈ: ಎಸ್‌.ಎಸ್‌ ರಾಜ್‌ಮೌಳಿ ನಿರ್ದೇಶನದಲ್ಲಿ ಮೂಡಿಬಂದ ಬಾಹುಬಲಿ–2 ಚಿತ್ರ ವಿಶ್ವದಾದ್ಯಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಆದರೆ, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಈ ದಾಖಲೆಯನ್ನು ಮುರಿಯುವತ್ತ ಹೆಜ್ಜೆ ಹಾಕಲಿದೆ ಎಂದು ಸಿನಿಮಾ ಮಂದಿ ವಿಶ್ಲೇಷಿಸಿದ್ದಾರೆ.

ಏ.28ರಂದು ಬಿಡುಗಡೆಯಾಗಿದ್ದ ‘ಬಾಹುಬಲಿ–2’ ಚಿತ್ರ ವಿಶ್ವದಾದ್ಯಂತ ಒಟ್ಟು 9 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಕಬೀರ್‌ ಖಾನ್‌ ನಿರ್ದೇಶನದ 'ಟ್ಯೂಬ್‌ಲೈಟ್‌' ಚಿತ್ರ 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಭಾರತೀಯ ಸಿನಿಮಾ ಮಾರುಕಟ್ಟೆ ವಿಶ್ಲೇಷಕ ರಮೇಶ್‌ ಬಾಲ ಟ್ವೀಟ್‌ ಮಾಡಿದ್ದಾರೆ. 

'ಟ್ಯೂಬ್‌ಲೈಟ್‌' ಚಿತ್ರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಅಮೆರಿಕದಲ್ಲಿ 330, ಇಂಗ್ಲೆಂಡ್‌ನಲ್ಲಿ 205ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ರಮೇಶ್‌ ಬಾಲ ವಿವರಿಸಿದ್ದಾರೆ.

ಟ್ಯೂಬ್‌ಲೈಟ್‌ ಚಿತ್ರ ‘1962ರ ಭಾರತ–ಚೀನಾ ಯುದ್ಧದ ಕಥೆಯನ್ನು’ ಒಳಗೊಂಡಿದೆ. ಜತೆಗೆ ಜೂನ್‌ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry