ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಹಲ್ಲೆ ನಡೆಸಿ ಅಲ್ಲಾಹು, ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದರು!

7

ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಹಲ್ಲೆ ನಡೆಸಿ ಅಲ್ಲಾಹು, ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದರು!

Published:
Updated:
ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಹಲ್ಲೆ ನಡೆಸಿ ಅಲ್ಲಾಹು, ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದರು!

ನಾಗ್ಪುರ್: ಮಾನಸಿಕ ಅಸ್ವಸ್ಥ ಮಹಿಳೆ ನೋವಿನಿಂದ ಅಳುತ್ತಿದ್ದರೆ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಇಬ್ಬರು ಪುರುಷರು ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆ ದುಷ್ಕರ್ಮಿಗಳು ಆಕೆಗೆ ಹೊಡೆಯುತ್ತಾ ಅಲ್ಲಾಹು ಎಂದು ಹೇಳು ಎಂದು ಗದರಿದಾಗ, ಆಕೆ ಕ್ಷೀಣ ದನಿಯಲ್ಲಿ ಅಲ್ಲಾಹು ಅಂತಾಳೆ. ಜೈ ಶ್ರೀರಾಮ್ ಎಂದು ಹೇಳು ಎಂದು ಗದರಿದಾಗ ಆಕೆ ಜೈ ಶ್ರೀರಾಮ್ ಎನ್ನುತ್ತಾಳೆ. ಅಷ್ಟೊತ್ತಿಗೆ ಇನ್ನೊಂದು ಏಟು ಬೀಳುತ್ತದೆ, ಆಕೆ ಗಟ್ಟಿಯಾಗಿ ಅರಚುತ್ತಾಳೆ.

ರಾಜಸ್ತಾನದ ನಾಗ್ಪುರ ಜಿಲ್ಲೆಯಲ್ಲಿ ನಡೆದ ಈ ಅಮಾನವೀಯ ಘಟನೆಯ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದೆ.

ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಮಂಗಳವಾರ ಈ ರೀತಿಯ ದೌರ್ಜನ್ಯ ನಡೆದಿದ್ದು, ಸಾಮಾಜಿಕ ತಾಣದಲ್ಲಿ ಗುರುವಾರ ವಿಡಿಯೊ ಅಪ್‍ಲೋಡ್ ಆಗಿತ್ತು.

ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಪ್ರಕಾಶ್ ಮೇಘ್ವಾಲ್ ಮತ್ತು ಶ್ರಾವಣ್ ಮೇಘ್ವಾಲ್ ಎಂದು ಗುರುತು ಹಿಡಿದಿದ್ದು, ಇವರನ್ನು ಬಂಧಿಸಲಾಗಿದೆ.

ಈ ಘಟನೆಯ ವಿಡಿಯೊವನ್ನು ಸಾಮಾಜಿಕ ತಾಣದಲ್ಲಿ ಅಪ್‍ಲೋಡ್ ಮಾಡಿರುವ ವ್ಯಕ್ತಿಯನ್ನು ನಾವು ಹುಡುಕುತ್ತಿದ್ದೇವೆ ಎಂದು ಬಾಲಾಜಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಪುರಾನ್‍ಮಲ್ ಮೀನಾ ಹೇಳಿದ್ದಾರೆ.

ಹಲ್ಲೆಗೊಳಗಾಗಿರುವ ಮಹಿಳೆಯನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದೇವೆ. ಆಕೆಯ ಹೇಳಿಕೆಯನ್ನು ಆಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry