ವಂಶವಾಹಿ ಸಮಸ್ಯೆ: ಮಗುವಿಗೆ ದಾಟದಂತೆ ತಡೆಯಬಹುದೇ?

7

ವಂಶವಾಹಿ ಸಮಸ್ಯೆ: ಮಗುವಿಗೆ ದಾಟದಂತೆ ತಡೆಯಬಹುದೇ?

Published:
Updated:
ವಂಶವಾಹಿ ಸಮಸ್ಯೆ: ಮಗುವಿಗೆ ದಾಟದಂತೆ ತಡೆಯಬಹುದೇ?

ನಮ್ಮ ಕುಟುಂಬದಲ್ಲಿ ಕಿಡ್ನಿ–ಸಮಸ್ಯೆ ವಂಶವಾಹಿಯಾಗಿ ಬಂದಿದೆ. ಹೀಗಿದ್ದಾಗ ನಾನು ಮಗುವನ್ನು ಪಡೆದರೆ ಮುಂದೆ ಆ ಸಮಸ್ಯೆ ಮಗುವಿಗೂ ಮುಂದುವರೆಯುತ್ತದಲ್ಲವೇ? ಆರೋಗ್ಯವಂತ ಮಗುವನ್ನು ಪಡೆಯಲು ಸಾಧ್ಯವಿಲ್ಲವೇ?

32 ವರ್ಷದ ವಿವಾಹಿತ ಪುರುಷನೊಬ್ಬ ತನಗೆ ಪಾಲಿಸಿಸ್ಟಿಕ್ ಕಿಡ್ನಿ ಸಮಸ್ಯೆ ಇರುವುದರಿಂದ ಮಗುವನ್ನು ಪಡೆಯಲು ಹಿಂಜರಿಯುತ್ತಿರುವುದಕ್ಕೆ  ಕೊಟ್ಟ ಕಾರಣ ಇದಾಗಿತ್ತು. ತನ್ನ ಮಗುವಿಗೂ ಮುಂದೆ ಇದೇ ಸಮಸ್ಯೆ ಎದುರಾಗಬಹುದು ಎಂಬುದು ಅವರ ಚಿಂತೆಗೆ ಕಾರಣವಾಗಿತ್ತು.

ಆಟೊಸೋಮಲ್ ಡಾಮಿನಂಟ್ ಪಾಲಿಸಿಸ್ಟಿಕ್ ಕಿಡ್ನಿ ಸಮಸ್ಯೆ (ಎಡಿಪಿಕೆಡಿ) ಆನುವಂಶಿಕ ಸಮಸ್ಯೆಗಳಲ್ಲಿ ಒಂದು; ಅದು ನೂರರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ.  ಮೂತ್ರಪಿಂಡದಲ್ಲಿ ಗುಳ್ಳೆಗಳಂತೆ ಆಗಿ ಅದು ಕಿಡ್ನಿಯ ವೈಫಲ್ಯಕ್ಕೆ ಎಡೆಮಾಡಿಕೊಡಬಹುದು. ಈ ಸಮಸ್ಯೆ ಇರುವಾಗ ದಂಪತಿ ಮಕ್ಕಳನ್ನು ಪಡೆಯದಿರುವ ಆಲೋಚನೆ ಮಾಡುವುದೇ ಹೆಚ್ಚು.

ಪಾಲಿಸಿಸ್ಟಿಕ್‌ ಕಿಡ್ನಿ–ಸಮಸ್ಯೆಯನ್ನು ದೂರವಿಡಲು ಸಾಧ್ಯವೇ?

ವಿಟ್ರೊ ಫರ್ಟಿಲೈಸೇಷನ್‌ (ಕೃತಕ ಗರ್ಭಧಾರಣೆ) ಪ್ರಕ್ರಿಯೆಯಲ್ಲಿ ಭ್ರೂಣದ ಆರಂಭದ ಅವಸ್ಥೆಯಲ್ಲೇ ಆನುವಂಶಿಕ ಸಮಸ್ಯೆಗಳನ್ನು ಗುರುತಿಸಲು ಪ್ರಿ–ಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್ (ಪಿಜಿಟಿ) ತಂತ್ರ ನೆರವಿಗೆ ಬರುತ್ತದೆ.

ತಂದೆ ಅಥವಾ ತಾಯಿ ಅಥವಾ ಇಬ್ಬರಿಗೂ ತಮಗೆ ಆನುವಂಶಿಕವಾಗಿ ಬಂದಿರುವ ಸಮಸ್ಯೆ ಕುರಿತು ಅರಿವಿದ್ದು, ಅದು ಭ್ರೂಣದಲ್ಲೂ ಮುಂದುವರೆಯುವುದೇ ಎಂಬುದನ್ನು ಪರೀಕ್ಷಿಸಲೆಂದೇ ಪ್ರಿ–ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನಸಿಸ್‌ ನಡೆಸಲಾಗುತ್ತದೆ.

ಅಂತಿಮವಾಗಿ, ಪ್ರಿ–ಇಂಪ್ಲಾಂಟೇಷನ್ ಜೆನೆಟಿಕ್ ಸ್ಕ್ರೀನಿಂಗ್ ಅನ್ನು ಅಸಹಜ ಕ್ರೋಮೋಸೋಮ್‌ಗಳ ಪತ್ತೆ ಹಚ್ಚುವಿಕೆಗೆ  ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಸಹಜ ಕ್ರೋಮೋಸೋಮ್‌ಗಳನ್ನು ತೆಗೆದುಹಾಕಿ, ಸಹಜವಾಗಿದ್ದನ್ನು ಮಾತ್ರ  ವರ್ಗಾಯಿಸಲಾಗುತ್ತದೆ.

ಈ ಮೊದಲು, ಮಗುವಿನ ಅಸಹಜತೆಯನ್ನು ಗರ್ಭಧಾರಣೆಯ ಮೊದಲ ಮೂರು ತಿಂಗಳಿನ ನಂತರ ಅಲ್ಟ್ರಾಸೌಂಡ್‌ ಮೂಲಕ ಪತ್ತೆ ಹಚ್ಚಲಾಗುತಿತ್ತು. ಮಗುವಿನ ಬೆಳವಣಿಗೆಯಲ್ಲಿ ಅಸಹಜತೆಗಳು ಕಂಡುಬಂದರೆ ಗರ್ಭಪಾತ ನಡೆಸಲಾಗುತ್ತಿತ್ತು. ಆದರೆ, ಈಗ ತಂತ್ರಜ್ಞಾನ ಮುಂದುವರೆದಿದೆ. ಐವಿಎಫ್‌ ತಂತ್ರಜ್ಞಾನದ ಸಹಾಯದಿಂದ ಗರ್ಭದಲ್ಲಿರುವಾಗಲೇ ಮಗುವಿನ ಅಸಹಜತೆಗಳನ್ನು ಪತ್ತೆ ಹಚ್ಚಬಹುದು.

ಆನುವಂಶಿಕ ಸಮಸ್ಯೆಯಿರುವ ಮಗುವನ್ನು ಪಡೆಯುವುದನ್ನು ತಡೆಯಲು ಪಿಜಿಡಿ ಹಾಗೂ ಪಿಜಿಎಸ್‌ ಪ್ರಸ್ತುತ ಲಭ್ಯವಿರುವ ಆಯ್ಕೆಗಳು. ಇದು ಆನುವಂಶಿಕ ಸಮಸ್ಯೆಯನ್ನು ತಡೆಯುವ ಆಕರ್ಷಕ ಮಾರ್ಗವೂ ಆಗಿದೆ. ದಂಪತಿಗೆ ಇರುವ ಸಮಸ್ಯೆಯು ಮಕ್ಕಳಲ್ಲಿ ಬರದಂತೆ ತಡೆಯುವುದು ಮಾತ್ರವಲ್ಲದೇ, ಗರ್ಭಧಾರಣೆಗೆ ಆರಿಸಿಕೊಂಡ ಭ್ರೂಣವು ಆರೋಗ್ಯಕರವಾಗಿದ್ದು, ಆರೋಗ್ಯಪೂರ್ಣ ಮಗುವಾಗಿ ಬೆಳೆಯಲು ಈ ಚಿಕಿತ್ಸೆ ಅನುಕೂಲ ಮಾಡಿಕೊಡುತ್ತದೆ.

ಪಿಜಿಡಿ ಪ್ರಿ–ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನಿಸಿಸ್ – ಯಾರಿಗೆ ಸೂಕ್ತ?

* ಗರ್ಭಪಾತ, ಮಾನಸಿಕ ಹಾಗೂ ದೈಹಿಕ ಸಮಸ್ಯೆಗೆ ಅನುವಾಗಿಸುವ ಕ್ರೋಮೋಸೋಮಿನ ವಿಭಜನೆ ಸಮಸ್ಯೆ ಇರುವವರು ಈ ಪ್ರಕ್ರಿಯೆಗೆ ಒಳಗಾಗಬಹುದು.

* ಕುಟುಂಬದಲ್ಲಿ ದೈಹಿಕ ಸಮಸ್ಯೆಯುಳ್ಳ ಇತಿಹಾಸವಿದ್ದರೆ...

1. ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆ 2. ಏಕಧಾತು (ಜೀನ್) ದೋಷ 3. ಕ್ರೋಮೋಸೋಮ್‌ನ ಸಮಸ್ಯೆ

ಲೈಂಗಿಕ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಯಾವುವು?

ಲೈಂಗಿಕತೆಗೆ ಸಂಬಂಧಿಸಿದ  ಕೆಲವು ಸಮಸ್ಯೆಗಳು ತಾಯಿಯಿಂದ ಮಗುವಿಗೆ ದಾಟಿ ಹೋಗಬಹುದು. (ಇದನ್ನು ಪತ್ತೆ ಹಚ್ಚಿ, ಸಮಸ್ಯೆಯನ್ನು ನಿವಾರಿಸಬಹುದು)

ಹಿಮೋಫಿಲಿಯಾ, ಫ್ರಗೈಲ್ ಎಕ್ಸ್ ಸಿಂಡ್ರೋಮ್, ನ್ಯೂರೋಮಾಸ್ಕ್ಯುಲರ್ ಡಿಸ್ಟ್ರೋಫಿ, ನರ ಹಾಗೂ ಬೆಳವಣಿಗೆ ಸಂಬಂಧಿ ಸಮಸ್ಯೆಯಾದ ರೆಟ್‌ ಸಿಂಡ್ರೋಮ್, ನರವ್ಯೂಹ, ಕೂದಲು, ಚರ್ಮ, ಉಗುರು, ಹಲ್ಲುಗಳಿಗೆ ಸಮಸ್ಯೆ ತರುವ – ಇನ್‌ಕಾಂಟಿನೆಂಷಿಯ ಪಿಗ್ಮೆಂಟಿ, ಸ್ಯೂಡೊ ಹೈಪರ್‌ಪ್ಯಾರಾಥೈರಾಯ್ಡಿಸಂ,  ವಿಟಮಿನ್ ಡಿ ನಿರೋಧಕ ಕವಚಗಳ ಸಮಸ್ಯೆಗಳು.

ಸಿಂಗಲ್ ಜೀನ್‌ ದೋಷಗಳು ಯಾವುವು

ಪ್ಯಾಂಕ್ರಿಯಾಟಿಕ್ ನಾಳಗಳಲ್ಲಿ ಅಡಚಣೆ ಉಂಟಾಗುವ, ಕರುಳಿನಲ್ಲಿ ತೊಂದರೆ ತರುವ ಹಾಗೂ ಉಸಿರಾಟದ ಸೋಂಕನ್ನೂ ತರುವ ಸಿಸ್ಟಿಕ್ ಫ್ರಿಬ್ರೋಸಿಸ್‌, ಮೆಟಬಾಲಿಕ್ ಸಮಸ್ಯೆ ಆಗಿರುವ ಟೇ–ಸಾಶ್ ಡಿಸೀಸ್, ಸಿಕಲ್ ಸೆಲ್ ಅನೀಮಿಯಾ, ಮೆದುಳಿನ ಸಮಸ್ಯೆಯಾದ ಹಂಟಿಂಗ್ಟನ್ ಸಮಸ್ಯೆಗಳು ಸಿಂಗಲ್ ಜೀನ್‌ ದೋಷಗಳು.

ಕ್ರೋಮೊಸೋಮಿನ ಸಮಸ್ಯೆಗಳು

ಕ್ರೋಮೊಸೋಮ್‌ಗಳಲ್ಲಿ ಹಲವು ತೊಂದರೆಗಳು ಆಗಬಹುದು.

* ಕ್ರೋಮೋಸೋಮ್‌ಗಳ ಬದಲಾವಣೆ.

* ವಿಲೋಮಗಳು

* ಕ್ರೋಮೋಸೋಮ್‌ಗಳು ನಾಶವಾಗುವುದು.

ಈ ಸಮಸ್ಯೆಗಳಿದ್ದ ದಂಪತಿಗೆ ಸರಿಯಾದ ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅಸಮತೋಲಿತ ಕ್ರೋಮೋಸೋಮಿನಿಂದಾಗಿ ಭ್ರೂಣ ಬೆಳವಣಿಗೆ ಸಮರ್ಪಕವಾಗದೇ ಗರ್ಭಪಾತವಾಗುವ ಸಂಭವವೇ ಹೆಚ್ಚು.

-ಮುಂದುವರೆಯುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry