ಜುಂಬಾ, ಪಥ್ಯಾಹಾರ ಮತ್ತು ಶ್ರದ್ಧಾ

7

ಜುಂಬಾ, ಪಥ್ಯಾಹಾರ ಮತ್ತು ಶ್ರದ್ಧಾ

Published:
Updated:
ಜುಂಬಾ, ಪಥ್ಯಾಹಾರ ಮತ್ತು ಶ್ರದ್ಧಾ

ನಟಿ ಶ್ರದ್ಧಾ ಶ್ರೀನಾಥ್‌ ಗೊತ್ತಲ್ಲ? ಮೊದಲ ಚಿತ್ರದಲ್ಲೇ (ಯೂ ಟರ್ನ್‌) ತಮ್ಮ ನಟನಾ ಕೌಶಲವನ್ನು ಜಾಹೀರು ಮಾಡಿದ ಜಾಣೆ. ವಕೀಲಿ ವೃತ್ತಿಯನ್ನು ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರೂ ಕಮರ್ಷಿಯಲ್‌ ಚಿತ್ರಕ್ಕೇ ಗಂಟುಬಿದ್ದವರಲ್ಲ.

‘ಉರ್ವಿ’ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರೂ ಚಿತ್ರ ಗೆಲ್ಲಲಿಲ್ಲ. ಈಗ ‘ಅಪರೇಷನ್‌ ಅಲಮೇಲಮ್ಮ’ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಆರೋಗ್ಯ ಹಾಗೂ ಫಿಟ್‌ನೆಸ್‌ಗಾಗಿ ಶ್ರದ್ಧೆಯಿಂದ ಡಯಟ್‌ ಪಾಲಿಸುತ್ತಾರೆ. ಅದರಲ್ಲೂ ಒಂದು ವಿಶೇಷವಿದೆ. ತಿಂಗಳಲ್ಲಿ  ಮೂರು ವಾರ ಕಟ್ಟುನಿಟ್ಟಾಗಿ ಡಯಟ್‌ ಪಾಲಿಸಿದರೆ, ಒಂದು ವಾರ ತನಗೆ ಇಷ್ಟ ಬಂದಿದ್ದನ್ನೆಲ್ಲಾ ತಿನ್ನುತ್ತಾರಂತೆ!. ಹಾಲು ಹಾಕದ ಚಹಾ ಸೇವನೆಯೊಂದಿಗೆ ದಿನಚರಿ ಶುರು. ಮುಂದಿನ ಪಯಣ ಜೆ.ಪಿ ನಗರದ ಕಲ್ಟ್‌ ಜಿಮ್‌ಗೆ. ಟ್ರೆಡ್‌ಮಿಲ್‌, ಸೈಕ್ಲಿಂಗ್‌ ಹಾಗೂ ಇತರ ವ್ಯಾಯಾಮ. ಮಾಂಸಖಂಡಕ್ಕೆ ಶಕ್ತಿ ತುಂಬಿ, ಕೊಬ್ಬು ಕರಗಿಸುವ ವ್ಯಾಯಾಮಗಳಿಗೆ ಆದ್ಯತೆ. ಮಹಿಳೆಯರು ಹೀಗೆ ಜಿಮ್‌ನಲ್ಲಿ ಹೆಚ್ಚು ದೈಹಿಕ ಕಸರತ್ತು ನಡೆಸಿದರೆ ಪುರುಷರಂತೆ ಬೈಸೆಪ್ಸ್‌ ಬಂದುಬಿಡುತ್ತದೆ ಎಂಬೆಲ್ಲಾ ಆಕ್ಷೇಪಗಳನ್ನು ಅವರು ಅಲ್ಲಗಳೆಯುತ್ತಾರೆ.

‘ಅದು ತಪ್ಪು ಕಲ್ಪನೆ. ದೇಹ ಕಸರತ್ತಿನಿಂದ ಆರೋಗ್ಯ ವರ್ಧಿಸುತ್ತದೆ.  ದೇಹದ ಅಧಿಕ ಕೊಬ್ಬು ಕರಗುತ್ತದೆ ಅಷ್ಟೇ’ ಎಂಬುದು ಶ್ರದ್ಧಾ ಅನುಭವದ ಮಾತು. ಜುಂಬಾ ನೃತ್ಯ ಮತ್ತು ಯೋಗಾಭ್ಯಾಸಕ್ಕೂ ಆದ್ಯತೆ ನೀಡುತ್ತಾರೆ. ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡಿದರೆ, ಮತ್ತೆರಡು ದಿನ ಜುಂಬಾ ಹಾಗೂ ಯೋಗ. ‘ಇದರಿಂದ ಏಕಾತನತೆ ತಪ್ಪುತ್ತದೆ. ಮನಸ್ಸು, ದೇಹ ಎರಡೂ ಉಲ್ಲಸಿತವಾಗಿರುತ್ತದೆ’ ಎಂದು ವಿವರಿಸುತ್ತಾರೆ.

ಅಂತರ್ಜಾಲದಲ್ಲಿ ಹುಡುಕಿ ಪಥ್ಯಾಹಾರದ ಮಾರ್ಗಗಳನ್ನು ಪಾಲಿಸುವುದು ಶ್ರದ್ಧಾ ವೈಶಿಷ್ಟ್ಯ. ಪ್ರಸ್ತುತ, ಪ್ರೊಟೀನ್‌ ಜ್ಯೂಸ್‌ ಹಾಗೂ ಕೊಬ್ಬಿನ ಆಹಾರ ಸೇವಿಸುತ್ತಿದ್ದಾರೆ. ‘ಇಂಟಿಮಿಡೇಟ್‌ ಫಾಸ್ಟಿಂಗ್‌’  ಶ್ರದ್ಧಾ ಆದ್ಯತೆ. ಅಂದರೆ  ಪ್ರತಿ  ಎಂಟು ಗಂಟೆಗೊಮ್ಮೆ ಆಹಾರ ಸೇವಿಸುವುದು. ಇದರಂತೆ ಬೆಳಗ್ಗೆ 8ಕ್ಕೆ ಆಹಾರ ಸೇವಿಸಿದರೆ ಮತ್ತೆ ಸಂಜೆ 5ಕ್ಕೇ. ಮತ್ತೆ ಎಂಟು ಗಂಟೆ ಬಿಟ್ಟು ತಿಂಡಿ. ಇದರ ಮಧ್ಯೆ ಬರಿ ದ್ರವಾಹಾರ, ತರಕಾರಿ, ಹಣ್ಣುಗಳನ್ನು ನಿಯಮ ಪ್ರಕಾರ ಸೇವಿಸಬಹುದು. ಆದರೆ ಘನ ಪದಾರ್ಥ ಸೇವಿಸುವಂತಿಲ್ಲ. ತಾವಿಷ್ಟು ಫಿಟ್‌ ಆಗಿರುವುದು ಈ ಡಯಟ್‌ನಿಂದಲೇ ಅಂತಾರೆ ಶ್ರದ್ಧಾ.

**

ಜನನ: 29 ಸೆಪ್ಟೆಂಬರ್‌ 1990

ಇಷ್ಟದ ಆಹಾರ: ಚಿಕನ್‌ ಖಾದ್ಯ, ತರಕಾರಿ ನಟನೆ–ಕನ್ನಡ, ಮಲಯಾಳಂ ಹಾಗೂ ತಮಿಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry