‘ಕಿತಾಪತಿಗೆ ನಾನು ಫೇಮಸ್‌’

7

‘ಕಿತಾಪತಿಗೆ ನಾನು ಫೇಮಸ್‌’

Published:
Updated:
‘ಕಿತಾಪತಿಗೆ ನಾನು ಫೇಮಸ್‌’

* ಮನೆದೇವು ಧಾರಾವಾಹಿಯಲ್ಲಿ ಎಷ್ಟೊಂದು ಖತರ್‌ನಾಕ್‌ ಐಡಿಯಾ ಮಾಡುತ್ತೀರಪ್ಪಾ...

ಹ್ಹ ಹ್ಹ ಅದು ಧಾರಾವಾಹಿಗಷ್ಟೇ ಸೀಮಿತ. ಆ ರೀತಿಯ ಮನೆ ಕೆಡಿಸುವ ಯೋಚನೆ ನನಗೆ ಬರುವುದಿಲ್ಲ. ಅಷ್ಟೆಲ್ಲ ನನ್ನ ತಲೆ ಚುರುಕಾಗಿಲ್ಲ. ಬೇರೆಯವರು ತಲೆ ಓಡಿಸಿ ಹೆಣೆದ ಕಥೆಯನ್ನು ನಾನು ಕಾರ್ಯಗತ ಗೊಳಿಸುತ್ತಿದ್ದೇನಷ್ಟೆ. 

* ಕಾಲೇಜಿನಲ್ಲಿ ತುಂಬಾ ತಲೆಹರಟೆಯಾಗಿದ್ರಾ?

ನಮ್ಮ ಗುಂಪಿನೊಂದಿಗೆ ಸೇರಿ ತಲೆಹರಟೆ ಮಾಡುತ್ತಿದ್ದೆ. ಉಪನ್ಯಾಸಕರು ಬೈಯುತ್ತಿದ್ರೆ ನಿಂತು ನಗುತ್ತಿದ್ದೆವು. ಅವರ ಮುಂದೆನೇ ಕ್ಲಾಸಿಗೆ ಬಂಕ್‌ ಹಾಕಿ ಹೊರಗೆ ಹೋಗುತ್ತಿದ್ದೆವು. ಸಿಕ್ಕಾಪಟ್ಟೆ ಎಂಜಾಯ್‌ ಮಾಡಿದ್ದೇನೆ. ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿದ್ದೆ. ಆ ದಿನಗಳನ್ನು  ಮರೆಯಲು ಸಾಧ್ಯವೇ ಇಲ್ಲ.

* ನಟನೆ ನಂಟು ಬೆಳೆದಿದ್ದು ಹೇಗೆ?

ನಾನು ಓದಿದ್ದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿಪದವಿಯಲ್ಲಿದ್ದಾಗ ಸಾಂಸ್ಕೃತಿಕ ಚಟುವಟಿಕೆಯ ತಂಡ ಮಾಡಿಕೊಂಡಿದ್ದೆವು. ಆಗ ‘ಚಿಕ್ಕಮ್ಮ’ ಧಾರಾವಾಹಿಯಲ್ಲಿದ್ದವರೊಬ್ಬರು ನೀನೂ ನಟಿಸಬಹುದು ಎಂದು ಹೇಳಿದ್ರು. ನಾನು ಒಪ್ಪಿದೆ.

* ಹೆಚ್ಚಾಗಿ ವಿಲನ್‌ ಪಾತ್ರಗಳನ್ನೇ ಮಾಡಿದಿರಾ?

ಇಲ್ಲ. ಪ್ರಾರಂಭದಲ್ಲಿ ಪಾಸಿಟಿವ್‌ ಪಾತ್ರಗಳಲ್ಲಿ ನಟಿಸಿದ್ದೇನೆ. ವಾರಸ್ದಾರ ಮತ್ತು ಮನೆದೇವ್ರು ಧಾರಾವಾಹಿಗಳಲ್ಲಿ ಮಾತ್ರವೇ ಖಳನಾಯಕಿಯಾಗಿರುವುದು. ಇದೊಂದು ಹೊಸ ರೀತಿಯ ಪಾತ್ರ. ನಟನೆಯಲ್ಲಿ ವಿಭಿನ್ನತೆ ಇರಬೇಕು ಎಂಬ ಕಾರಣಕ್ಕೆ ಈ ಪಾತ್ರ ಒಪ್ಪಿಕೊಂಡೆ.

* ಕೆಲ ಕಾಲ ನಾಪತ್ತೆಯಾಗಿದ್ರಲ್ಲ?

ಓದ್ಬೇಕಲ್ಲ? ಅದಕ್ಕೇ ಎರಡು ವರ್ಷ ನಟನೆಯಿಂದ ದೂರ ಉಳಿದಿದ್ದೆ. ಸ್ನಾತಕೋತ್ತರ ಪದವಿ ನಂತರ ಉಪನ್ಯಾಸಕಿಯಾಗಿ ಕೆಲಸ ಮಾಡಿದೆ. ಆದರೆ ಬಣ್ಣದ ನಂಟು ಮತ್ತೆ ಈ ಕಡೆಯೇ ಎಳೆಯಿತು.

* ಬಾಲ್ಯದ ದಿನಗಳು ಹೇಗಿದ್ದವು?

ಆಗಂತೂ ತುಂಬಾ ತುಂಟಿಯಾಗಿದ್ದೆ. ಸಾಕಷ್ಟು ಕಿತಾಪತಿ ಮಾಡುತ್ತಿದ್ದೆ ಎಂದು ಮನೆಯವರು ಹೇಳುತ್ತಾರೆ. ಡಾನ್ಸ್‌ ಎಂದರೆ ತುಂಬಾ ಇಷ್ಟ.

ಆದರೆ ಓದುವ ಕಡೆ ಗಮನ ಕೊಡಬೇಕು ಎಂದು ಡಾನ್ಸ್‌ ಕ್ಲಾಸಿಗೆ ಹೋಗಲು  ಮನೆಯಲ್ಲಿ ಬಿಡುತ್ತಿರಲಿಲ್ಲ. ನಾನು ಹಟ ಮಾಡಿಯಾದರೂ ಕ್ಲಾಸಿಗೆ ಹೋಗುತ್ತಿದ್ದೆ.

* ಇಷ್ಟದ ತಿನಿಸು, ಬಣ್ಣ?

ಬದನೇಕಾಯಿ, ಹಾಗಲಕಾಯಿ ಬಿಟ್ಟು ಎಲ್ಲವನ್ನೂ ತಿನ್ನುತ್ತೇನೆ.  ಇಷ್ಟದ ಬಣ್ಣ ಕೆಂಪು.

* ಯಾವ ರೀತಿಯ ಪಾತ್ರ ಮಾಡುವಾಸೆ?

ಗೃಹಿಣಿ ಪಾತ್ರದ ಹೊರತಾಗಿ ಮಹಿಳೆ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸುವ ಪಾತ್ರ ಮಾಡುವಾಸೆಯಿದೆ.

* ಬಿಡುವಿನ ವೇಳೆ ಏನು ಮಾಡುತ್ತೀರಿ?

ನೃತ್ಯ, ಸಂಗೀತ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತೇನೆ.

* ಇಷ್ಟದ ವಸ್ತುಗಳು?

ಬಂಗಾರ ಮತ್ತು ಸೀರೆ

* ಯಾವುದಾದರೂ ವಸ್ತು ತ್ಯಾಗ ಮಾಡಿದ್ದೀರಾ?

ಯಾವ ವಸ್ತುಗಳ ಮೇಲೆಯೂ ಅತಿ ಎನ್ನುವಷ್ಟು ನಂಟು ಇಟ್ಟುಕೊಳ್ಳಬಾರದು ಎನ್ನುವುದು ನನ್ನ ಸಿದ್ಧಾಂತ. ಆಗ ಅವಶ್ಯಕತೆ ಇದ್ದವರಿಗೆ ಕೊಟ್ಟಾಗಲೂ ಬೇಸರ ಆಗುವುದಿಲ್ಲ. ಹಾಗಾಗಿ ಹಲವು ಬಾರಿ ನಾನು ಕೊಂಡ ವಸ್ತುಗಳನ್ನು ಇಷ್ಟಪಟ್ಟವರಿಗೆ ಕೊಟ್ಟಿರುವುದು ಇದೆ.

* ನಟಿಸಿರುವ ಧಾರಾವಾಹಿಗಳು...

ಚಿಕ್ಕಮ್ಮ, ಗಾಳಿಪಟ, ಪುಟ್ಟಗೌರಿ ಮದುವೆ, ಮನೆದೇವ್ರು, ವಾರಸ್ದಾರ.

* ತುಂಬಾ ಮಾತನಾಡುತ್ತೀರಿ ಅನಿಸುತ್ತೆ.

ಹೌದೌದು. ನಾನು ಸಿಕ್ಕಾಪಟ್ಟೆ ಮಾತನಾಡುತ್ತೇನೆ. ಇಷ್ಟವಾದರೆ ಇಷ್ಟ ಎಂದು ಇಲ್ಲವಾದರೆ ಇಲ್ಲ ಎಂದು  ನೇರವಾಗಿ ಹೇಳಿಬಿಡುತ್ತೇನೆ.v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry