‘ಲ್ಯಾಕ್ಮೆ’ ವೇದಿಕೆಗೆ ಬೆಂಗಳೂರು ಬೆಡಗಿಯರು!

7

‘ಲ್ಯಾಕ್ಮೆ’ ವೇದಿಕೆಗೆ ಬೆಂಗಳೂರು ಬೆಡಗಿಯರು!

Published:
Updated:
‘ಲ್ಯಾಕ್ಮೆ’ ವೇದಿಕೆಗೆ ಬೆಂಗಳೂರು ಬೆಡಗಿಯರು!

ಅಲ್ಲಿ ಎತ್ತ ನೋಡಿದರತ್ತ ತುಂಡುಡುಗೆ ತೊಟ್ಟ ನೀಳಕಾಲಿನ ಲಲನೆಯರು. ತುಟಿಗೆ ತೆಳುವಾದ ಬಣ್ಣ,  ಇಳಿಬಿಟ್ಟ ಕೂದಲು.  ಪದೇಪದೇ ಜೋರಾಗಿ ಉಸಿರು ಬಿಡುತ್ತಾ ಒತ್ತಡ ನಿವಾರಿಸಿಕೊಳ್ಳುವ ದೃಶ್ಯ.

ಆಯೋಜಕರು ಒಬ್ಬೊಬ್ಬರದೇ ಹೆಸರು, ಕ್ರಮಸಂಖ್ಯೆ ಹೇಳತೊಡಗಿದಂತೆ ಆತ್ಮವಿಶ್ವಾಸ ತುಂಬಿಕೊಂಡ ಲಲನೆಯರು, ಇಷ್ಟೆತ್ತರದ ಹಿಮ್ಮಡಿಯ ಚಪ್ಪಲಿಯಲ್ಲೂ  ಮಾರ್ಜಾಲ ನಡಿಗೆಗೆ ಸಮತೋಲನ ತಂದುಕೊಂಡು ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿದರು.

– ಈ ವರ್ಷದ ಲ್ಯಾಕ್ಮೆ ಚಳಿಗಾಲದ ಫ್ಯಾಷನ್  ಸಪ್ತಾಹಕ್ಕಾಗಿ ಹಯಾತ್ ಹೋಟೆಲ್‌ನಲ್ಲಿ ಟ್ರೆಸ್ಸಿಮೆ ಸಹಯೋಗದಲ್ಲಿ ನಡೆದ ರೂಪದರ್ಶಿಯರ ಆಯ್ಕೆ ಪ್ರಕ್ರಿಯೆಯ ನೋಟಗಳಿವು.

ನಗರದ ವಿವಿಧೆಡೆಯಿಂದ ಬಂದಿದ್ದ ಭವಿಷ್ಯದ ರೂಪದರ್ಶಿಯರು ತಮ್ಮ ಒನಪು ವಯ್ಯಾರದಿಂದ, ಬಾಗುತ್ತಾ ಬಳುಕುತ್ತಾ  ಸೌಂದರ್ಯವನ್ನು ಪ್ರದರ್ಶಿಸಿದರು. 64 ರೂಪದರ್ಶಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಓದಿನ ಜತೆಗೆ ಮಾಡೆಲಿಂಗ್ ಅನ್ನು ಹವ್ಯಾಸವಾಗಿ ಮಾಡಿಕೊಂಡವರು,  ವೃತ್ತಿಪರ ರೂಪದರ್ಶಿಯರೂ ಅಲ್ಲಿದ್ದರು.

ಫ್ಯಾಷನ್ ಕೊರಿಯೊಗ್ರಾಫರ್ ಅನು ಅಹುಜಾ, ಸೂಪರ್ ಮಾಡೆಲ್ ಸೋನಾಲಿಕಾ ಸಮಯ್, ಫ್ಯಾಷನ್ ಗುರು ಪ್ರಸಾದ್ ಬಿದಪ್ಪ, ಐಎಂಜಿ ರಿಲಯನ್ಸ್ ಫ್ಯಾಷನ್ ಹೆಡ್‌ ಜಸ್‌ಪ್ರೀತ್ ಚಂದೋಕ್, ಆರ್‌.ಜೆ. ನಿಕ್ಕಿ, ಅಂತರರಾಷ್ಟ್ರೀಯ ರೂಪದರ್ಶಿಗಳಾದ ವಿಕ್ಟೋರಿಯಾ ಡ ಸಿಲ್ವಾ, ಲೂಯಿಸ್ ದೊಮಿಂಗೊ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಮುಂದಿನ ಸುತ್ತಿಗೆ ಆಯ್ಕೆಯಾದ  ರೂಪದರ್ಶಿಯರು:

ಪವಿತ್ರಾ ಮಲೈಅಪ್ಪನ್, ಅದಿತಿ ಆನಂದ್, ಸೌಮ್ಯಾ ಎಸ್‌.,

ರಕ್ಷಾ ಬೆಳ್ಳಿಯಪ್ಪ, ದೇವಿಕಾ ಭಾನ್ಗುನಿ, ಇಶಾ ಗೋಹಿಲ್ ರೂಪದರ್ಶಿಗಳಾಗಿ  ಆಯ್ಕೆಯಾದರು.

**

ನಿರ್ದಿಷ್ಟ ಎತ್ತರ, ದೈಹಿಕವಾಗಿ ಫಿಟ್‌ ಆಗಿರುವ, ಆತ್ಮವಿಶ್ವಾಸ ಹೊಂದಿರುವ ವಿಭಿನ್ನ ಲುಕ್‌ ಇರುವ ಆರು ರೂಪದರ್ಶಿಯರನ್ನು  ಈ ಬಾರಿಯ ಲ್ಯಾಕ್ಮೆ ಫ್ಯಾಷನ್ ಸಪ್ತಾಹಕ್ಕೆ ಆಯ್ಕೆ ಮಾಡಲಾಗಿದೆ.

–ಅನು ಅಹುಜಾ,

ಫ್ಯಾಷನ್  ಕೊರಿಯೊಗ್ರಾಫರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry