ಮತ್ತೆ ಅನುರಾಗದ ಬಲೆಯಲ್ಲಿ ಕಶ್ಯಪ್‌?

7

ಮತ್ತೆ ಅನುರಾಗದ ಬಲೆಯಲ್ಲಿ ಕಶ್ಯಪ್‌?

Published:
Updated:
ಮತ್ತೆ ಅನುರಾಗದ ಬಲೆಯಲ್ಲಿ ಕಶ್ಯಪ್‌?

ಪ್ರೀತಿ, ಪ್ರಣಯ ಮತ್ತು ಮದುವೆಯಷ್ಟೇ ವಿಚ್ಛೇದನಗಳ ಮೂಲಕವೂ ಸುದ್ದಿಯಾಗುತ್ತಲೇ ಇರುವ ನಿರ್ದೇಶಕ ಅನುರಾಗ್‌ ಕಶ್ಯಪ್‌ ಮತ್ತೊಬ್ಬ ಸುಂದರಿಯ ಅನುರಾಗದ ಬಲೆಯಲ್ಲಿದ್ದಾರೆಯೇ? ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನುರಾಗ್‌ ಈಚೆಗೆ ಅಪ್‌ಲೋಡ್‌ ಮಾಡಿಕೊಂಡಿರುವ ಶುಭ್ರಾ ಶೆಟ್ಟಿ ಎಂಬ ಯುವತಿ ಜತೆಗಿನ ಮಾದಕ ಚಿತ್ರಗಳನ್ನು ನೋಡಿದರೆ ಈ ಪ್ರಶ್ನೆಗೆ ಉತ್ತರ ಸಿಕ್ಕಿಬಿಡುತ್ತದೆ.

ಅವರಿಬ್ಬರ ಬೋಲ್ಡ್‌ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 44ರ ಅನುರಾಗ್‌ ತಮ್ಮ ಮಗಳ ವಯಸ್ಸಿನ ಶುಭ್ರಾ (ವಯಸ್ಸು 23) ಜತೆಗೆ ಲಿವ್‌ ಇನ್‌ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್‌ ಬಾಲಿವುಡ್‌ ಗಲ್ಲಿಯಲ್ಲಿ ಜೋರಾಗಿಯೇ ಕೇಳಿಬರುತ್ತಿದೆ.

ಪ್ರೀತಿ ಮತ್ತು ಮದುವೆಯನ್ನು ಅನುರಾಗ್‌ ಇದುವರೆಗೂ ಉಳಿಸಿಕೊಂಡಿಲ್ಲ. ಈ ಮೊದಲು ಆರತಿ ಬಜಾಜ್ ಅವರನ್ನು ಮದುವೆಯಾಗಿದ್ದರು. ಕಲ್ಕಿಯೊಂದಿಗಿನ ಸ್ನೇಹ, ಪ್ರೇಮಕ್ಕೆ ತಿರುಗುತ್ತಿದ್ದಂತೆ 2009ರಲ್ಲಿ ಆರತಿಗೆ ವಿಚ್ಛೇದನ ನೀಡಿ 2011ರಲ್ಲಿ ಕಲ್ಕಿಯನ್ನು ವರಿಸಿದ ಅನುರಾಗ್ ಅವರೊಂದಿಗೂ ಹೆಚ್ಚು ದಿನ ಬಾಳಲಿಲ್ಲ. ಮದುವೆಯಾದ ನಾಲ್ಕು ವರ್ಷಕ್ಕೆ ಕಲ್ಕಿಗೂ ವಿಚ್ಛೇದನ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry