ಜರ್ಮನಿಯಲ್ಲಿ ‘ಮುಕ್ತ ಮಸೀದಿ’

7

ಜರ್ಮನಿಯಲ್ಲಿ ‘ಮುಕ್ತ ಮಸೀದಿ’

Published:
Updated:
ಜರ್ಮನಿಯಲ್ಲಿ ‘ಮುಕ್ತ ಮಸೀದಿ’

ಬರ್ಲಿನ್‌ : ಪುರುಷರು, ಮಹಿಳೆಯರು, ಸುನ್ನಿ ಹಾಗೂ ಶಿಯಾ ಪಂಗಡದವರು ಮಾತ್ರವಲ್ಲದೆ, ವಿಭಿನ್ನ ಜೀವನಶೈಲಿ ರೂಢಿಸಿಕೊಂಡಿರುವ ಎಲ್ಲರಿಗೂ ಪ್ರಾರ್ಥನೆ ಮಾಡಲು ಯಾವುದೇ ರೀತಿಯ ಭೇದವಿಲ್ಲದೇ  ಅನುವು ಮಾಡಿಕೊಡುವ ‘ಮುಕ್ತ ಮಸೀದಿ’ ಯೊಂದು ಜರ್ಮನಿಯಲ್ಲಿ ಶುಕ್ರವಾರ ಆರಂಭವಾಗಿದೆ.

ಮುಕ್ತ ಚಿಂತನೆಯಲ್ಲಿ ನಂಬಿಕೆ ಇರುವ ಮುಸ್ಲಿಂ ಜನಾಂಗದವರಿಗಾಗಿ ಆರಂಭವಾಗಿರುವ ಮೊದಲ ಮುಕ್ತ ಮಸೀದಿ ಇದಾಗಿದೆ. ಧಾರ್ಮಿಕ ಸಂಘರ್ಷಗಳನ್ನು ಬದಿಗಿಟ್ಟು, ಇಸ್ಲಾಂ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯಲು ಸಾಮಾಜಿಕ ಕಾರ್ಯಕರ್ತೆ ಸೆರನ್‌ ಏಟ್ಸ್‌ ಎಂಬುವವರ ನೇತೃತ್ವದಲ್ಲಿ ಈ ಮಸೀದಿಯನ್ನು ಕಟ್ಟಲಾಗಿದೆ.

ಇಬ್ನ್‌ ರಷ್ದ್‌ ಗೋಥೆ ಮಸೀದಿ ಎಂದು ಇದಕ್ಕೆ ಹೆಸರಿಡಲಾಗಿದೆ. ಸ್ಪೇನ್‌ನ ತತ್ವಜ್ಞಾನಿ ಇಬ್ನ್‌ ರಷ್ದ್‌ ಮತ್ತು ಜರ್ಮನಿಯ ಲೇಖಕ ಜೊಹಾನ್‌ ವುಲ್ಫ್‌ಗ್ಯಾಂಗ್‌ ಗೋಥೆ ಅವರ ಹೆಸರುಗಳನ್ನು ಕೂಡಿಸಿ ಈ ಮಸೀದಿಗೆ ನಾಮಕರಣ ಮಾಡಲಾಗಿದೆ.

‘ನಮ್ಮೆಲ್ಲರ ಕನಸು ಇಂದು ನನಸಾಗಿದೆ’ ಎಂದು ಜರ್ಮನಿಯಲ್ಲಿ ಪ್ರಗತಿಪರ ಮುಸ್ಲಿಮರಿಗಾಗಿ ಇಂತಹ ಮಸೀದಿ ಕಟ್ಟಲು ಹಲವು ವರ್ಷ ಹೋರಾಡಿದ  ಏಟ್ಸ್‌  ಅಭಿಪ್ರಾಯಪಟ್ಟಿದ್ದಾರೆ. ‘ನನ್ನ ಧರ್ಮದ ಹೆಸರಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಮುಕ್ತ ಮತ್ತು ಉದಾರವಾದಿ ಚಿಂತನೆಯುಳ್ಳ ಮುಸ್ಲಿಮರು  ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಇಂತಹ ಮಸೀದಿಯ ಅವಶ್ಯಕತೆಯಿದೆ’ ಎಂದು ಏಟ್ಸ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry