ಡ್ರಾ ಪಂದ್ಯದಲ್ಲಿ ಆನಂದ್‌

7

ಡ್ರಾ ಪಂದ್ಯದಲ್ಲಿ ಆನಂದ್‌

Published:
Updated:
ಡ್ರಾ ಪಂದ್ಯದಲ್ಲಿ ಆನಂದ್‌

ಸ್ಟಾವೆಂಜರ್‌, ನಾರ್ವೆ (ಪಿಟಿಐ): ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವ ನಾಥನ್‌ ಆನಂದ್‌ ಅವರು ಅಲ್ಟಿ ಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿಯ ಎಂಟನೇ ಸುತ್ತಿನಲ್ಲಿ ಡ್ರಾ ಮಾಡಿ ಕೊಂಡಿದ್ದಾರೆ.

ಶುಕ್ರವಾರ ನಡೆದ ಹೋರಾಟದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ಅವರು ಅರ್ಮೇನಿಯಾದ ಆಟಗಾರ ಲೆವೊನ್‌ ಅರೋನಿಯನ್‌ ಜೊತೆ ಪಾಯಿಂಟ್‌ ಹಂಚಿಕೊಂಡರು. ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 3.5ಕ್ಕೆ ಹೆಚ್ಚಿಸಿಕೊಂಡಿರುವ ಭಾರತದ ಆಟಗಾರ ಪಾಯಿಂಟ್ಸ್‌ ಪಟ್ಟಿ ಯಲ್ಲಿ ಜಂಟಿ ಆರನೇ ಸ್ಥಾನದಲ್ಲಿದ್ದಾರೆ. ವಿಶ್ವ ಚಾಂಪಿಯನ್‌ ಹಾಗೂ ನಾರ್ವೆಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌, ಅಮೆರಿಕಾದ ಫ್ಯಾಬಿಯೊ ಕರುವಾನ ಮತ್ತು ಫ್ರಾನ್ಸ್‌ನ ಮ್ಯಾಕ್ಸಿಮ್‌ ವಚೈರ್‌ ಲಾಗ್ರೇವ್‌ ಅವರ ಖಾತೆಯಲ್ಲೂ ಇಷ್ಟೇ ಪಾಯಿಂಟ್ಸ್‌ ಇದೆ.

ಆನಂದ್‌ ವಿರುದ್ಧ ಡ್ರಾ ಮಾಡಿ ಕೊಂಡಿರುವ  ಅರೋನಿಯನ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ದ್ದಾರೆ. ಅವರು ಎಂಟು ಸುತ್ತುಗಳಿಂದ  5.5 ಪಾಯಿಂಟ್ಸ್‌ ಹೆಕ್ಕಿದ್ದಾರೆ. ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಅರೋನಿಯನ್‌ ಶುರುವಿ ನಿಂದಲೇ ರಕ್ಷ ಣಾತ್ಮಕ ಆಟಕ್ಕೆ ಅಣಿ ಯಾದರು. ಇನ್ನೊಂದೆಡೆ ಆನಂದ್‌ ಚುರುಕಿನ ಆಟದ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಆದರೆ ಅವರ ಯೋಜನೆ ಫಲಿಸಲಿಲ್ಲ. ಹೀಗಾಗಿ 32ನೇ ನಡೆಯಲ್ಲಿ ಉಭಯ ಆಟಗಾರರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಅಮೆರಿಕಾದ ಹಿಕಾರು ನಕಮುರಾ ಮತ್ತು ವೆಸ್ಲಿ ಸೊ ಅವರು ತಲಾ ಐದು ಪಾಯಿಂಟ್ಸ್‌ ಕಲೆಹಾಕಿದ್ದು, ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಹೊಂದಿದ್ದಾರೆ. ಇವರ ನಡುವಣ ಎಂಟನೇ ಸುತ್ತಿನ ಪಂದ್ಯ ಕೂಡ ಡ್ರಾ ಆಯಿತು.

ಕಾರ್ಲ್‌ಸನ್‌ಗೆ ಜಯ: ವಿಶ್ವ ಚಾಂಪಿ ಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಎಂಟನೇ ಸುತ್ತಿನಲ್ಲಿ ಗೆಲುವಿನ ತೋರಣ ಕಟ್ಟಿದರು. ಕಾರ್ಲ್‌ಸನ್‌ ಅವರು ರಷ್ಯಾದ ಸರ್ಜಿ ಕರ್ಜಾಕಿನ್‌ ಅವರನ್ನು ಪರಾಭವಗೊಳಿಸಿ ದರು. ಈ ಮೂಲಕ ಪೂರ್ಣ ಪಾಯಿಂಟ್‌ ಕಲೆಹಾಕಿದರು. ಇನ್ನೊಂದು ಪಂದ್ಯದಲ್ಲಿ ಮ್ಯಾಕ್ಸಿಮ್‌ ವಚೈರ್‌ ಲಾಗ್ರೇವ್‌ ಅವರು ರಷ್ಯಾದ ಆಟಗಾರ ವ್ಲಾದಿಮಿರ್‌ ಕ್ರಾಮ್ನಿಕ್‌ ಅವರನ್ನು ಸೋಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry