ಬಾಂಗ್ಲಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ

7

ಬಾಂಗ್ಲಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ

Published:
Updated:
ಬಾಂಗ್ಲಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ

ಮೆಲ್ಬರ್ನ್:  ಬಾಂಗ್ಲಾ ದೇಶದಲ್ಲಿ ಆಗಸ್ಟ್ 27 ರಿಂದ ಬಾಂಗ್ಲಾ ತಂಡದ ವಿರುದ್ದ  ನಡೆಯಲಿರುವ  ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಮಿಷೆಲ್‌ ಸ್ಟ್ರಾಕ್ ಮತ್ತು ಭಾರತ ಪ್ರವಾಸದಲ್ಲಿನ ಕಳಪೆ ಪ್ರದರ್ಶನದಿಂದಾಗಿ ಟೀಕೆಗೆ ಗುರಿಯಾಗಿದ್ದ ಸ್ಟೀಫನ್‌ ಓಕಿಫೆ ಅವರು ತಂಡದೊಳಗೆ ಸ್ಥಾನ ಪಡೆದಿಲ್ಲ.

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲಿಯೂ ಉತ್ತಮ ಫಾರ್ಮ್‌ ನಲ್ಲಿರುವ  23 ವರ್ಷದ ಆಶ್ಟೊನ್ ಅಗರ್‌ ಸ್ಥಾನ ಪಡೆದಿದ್ದಾರೆ. 2015ರಲ್ಲಿ ನಡೆಯಬೇಕಿದ್ದ ಈ ಸರಣಿಯು ಭದ್ರತೆಯ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು.  ಆಗಸ್ಟ್ 27ರಿಂದ ಢಾಕಾ ಮೈದಾನದಲ್ಲಿ ನಡೆಯುವ ಪಂದ್ಯವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.  ಎರಡನೇ ಪಂದ್ಯವು ಸೆಪ್ಟೆಂಬರ್ 4ರಿಂದ ಚಿತ್ತಗಾಂಗ್ ನಲ್ಲಿ ನಡೆಯಲಿದೆ.

ತಂಡ ಇಂತಿದೆ: ಸ್ಟೀವನ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಮೆಟ್ ರೆನ್‌ಶೊ, ಉಸ್ಮಾನ್ ಖವಾಜ, ಪೀಟರ್ ಹ್ಯಾಂಡ್‌ಸ್ಕಾಂಬ್‌, ಗ್ಲೆನ್‌ ಮ್ಯಾಕ್ಸ್‌ವೆಲ್, ಹಿಲ್‌ಟನ್ ಕಾರ್ಟ್‌ರೈಟ್, ಮ್ಯಾಥ್ಯೂ ವೇಡ್, ಪಾಟ್ ಕಮ್ಮಿನ್ಸ್, ಜೇಮ್ಸ್ ಪಾಟಿನ್‌ಸನ್, ಜೋಷ್ ಆ್ಯಸಲ್‌ವುಡ್, ನಾಥನ್ ಲ್ಯೊನ್, ಆಸ್ಟೊನ್ ಅಗರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry