ಲಂಕಾ ಪ್ರವಾಸಕ್ಕೆ ರೋಹಿತ್‌ ಶರ್ಮಾ ಆಯ್ಕೆ ಸಾಧ್ಯತೆ

7

ಲಂಕಾ ಪ್ರವಾಸಕ್ಕೆ ರೋಹಿತ್‌ ಶರ್ಮಾ ಆಯ್ಕೆ ಸಾಧ್ಯತೆ

Published:
Updated:
ಲಂಕಾ ಪ್ರವಾಸಕ್ಕೆ ರೋಹಿತ್‌ ಶರ್ಮಾ ಆಯ್ಕೆ ಸಾಧ್ಯತೆ

ಬರ್ಮಿಂಗ್‌ಹ್ಯಾಮ್‌ (ಪಿಟಿಐ): ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಗಳಿಸದೇ ಇರುವ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯುವ ಟೆಸ್ಟ್‌ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.

ಪಕ್ಕೆಲುಬು ನೋವಿನಿಂದ ಗುಣ ಮುಖರಾದ ನಂತರ ನಿರಂತರ ಕ್ರಿಕೆಟ್‌ ಆಡಿರುವ ರೋಹಿತ್‌ಗೆ ವೆಸ್ಟ್‌ಇಂಡೀಸ್‌ ಪ್ರವಾಸದ ವೇಳೆ ವಿಶ್ರಾಂತಿ ನೀಡಿರು ವುದಾಗಿ ಆಯ್ಕೆ ಸಮಿತಿ ತಿಳಿಸಿತ್ತು. ಆದರೆ ಬಿಸಿಸಿಐನ ಉನ್ನತ ಮೂಲಗಳ ಪ್ರಕಾರ ಅವರನ್ನು ಟೆಸ್ಟ್ ತಂಡಕ್ಕೆ ಕರೆಸಿಕೊಳ್ಳು ವುದಕ್ಕಾಗಿ ವೆಸ್ಟ್ ಇಂಡೀಸ್‌ ಪ್ರವಾಸ ದಿಂದ ಕೈಬಿಡಲಾಗಿದೆ. ಇದು ನಿಜವಾ ದರೆ, ಕರ್ನಾಟಕದ ಕರುಣ್‌ ನಾಯರ್‌ ತಂಡ ಸೇರಿಕೊಳ್ಳುವುದು ಕಷ್ಟ ಸಾಧ್ಯ.

‘ರೋಹಿತ್ ಶರ್ಮಾ ಅವರಂಥ ಆಟಗಾರರನ್ನು ಹೆಚ್ಚು ದಣಿಸುವುದು ಸರಿಯಲ್ಲ. ಮುಂದಿನ ತಿಂಗಳುಗಳಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಆಡಬೇಕಾಗಿರು ವುದರಿಂದ ಅವರಿಗೆ ವಿಶ್ರಾಂತಿ ನೀಡುವುದು ಅನಿವಾರ್ಯ ಆಗಿತ್ತು’ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry