ದಾಂಪತ್ಯ ಜೀವನಕ್ಕೆ ಕಾಲಿಟ್ಟ 77 ಜೋಡಿ

7

ದಾಂಪತ್ಯ ಜೀವನಕ್ಕೆ ಕಾಲಿಟ್ಟ 77 ಜೋಡಿ

Published:
Updated:
ದಾಂಪತ್ಯ ಜೀವನಕ್ಕೆ ಕಾಲಿಟ್ಟ 77 ಜೋಡಿ

ಬೆಂಗಳೂರು: ಸಮಾನ ಮನಸ್ಕರ ಒಕ್ಕೂಟವು ನಗರದ ಕೆಂಗೇರಿಯಲ್ಲಿ ಆಯೋಜಿಸಿದ್ದ ‘21ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ವನ ಮಹೋತ್ಸವ’ದಲ್ಲಿ 77 ಜೋಡಿದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನೂತನ ದಂಪತಿಗಳಿಗೆ ಗಿಡಗಳನ್ನು ನೀಡಲಾಯಿತು. ಗಡಿಯಾರ, ಗೃಹೋಪಯೋಗಿ ವಸ್ತುಗಳನ್ನು ಕಾಣಿಕೆಯಾಗಿ ನೀಡಲಾಯಿತು.

ಬಳಿಕ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ‘ಯಶಸ್ವಿ ಸನ್ಯಾಸಿಗಿಂತ ಯಶಸ್ವಿ ಸಂಸಾರಿಯೇ ಲೇಸು. ನವ ದಂಪತಿಗಳು ಸಂತೋಷದಿಂದ ಜೀವನ ನಡೆಸಬೇಕು.  ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.

ಒಕ್ಕೂಟದ ಅಧ್ಯಕ್ಷ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ‘ಸಾಮೂಹಿಕ ವಿವಾಹದಲ್ಲಿ ಮದುವೆ ಆಗುತ್ತಿರುವ ಎಲ್ಲ ವಧು– ವರರ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇಲ್ಲಿ ಈವರೆಗೆ ಮದುವೆ ಆಗಿರುವ ಬಹುತೇಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry