ಸಿಸೋಡಿಯಾ ನಿವಾಸಕ್ಕೆ ಸಿಬಿಐ ಅಧಿಕಾರಿಗಳ ಭೇಟಿ

7

ಸಿಸೋಡಿಯಾ ನಿವಾಸಕ್ಕೆ ಸಿಬಿಐ ಅಧಿಕಾರಿಗಳ ಭೇಟಿ

Published:
Updated:
ಸಿಸೋಡಿಯಾ ನಿವಾಸಕ್ಕೆ ಸಿಬಿಐ ಅಧಿಕಾರಿಗಳ ಭೇಟಿ

ನವದೆಹಲಿ: ಆಮ್‌ ಆದ್ಮಿ ಸರ್ಕಾರದ ‘ಟಾಕ್‌ ಟು ಎಕೆ’ (ಟಾಕ್‌ ಟು ಅರವಿಂದ್‌ ಕೇಜ್ರಿವಾಲ್‌) ಸಾಮಾಜಿಕ ಜಾಲತಾಣಗಳ ಪ್ರಚಾರ ಆಂದೋಲನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ  ಶುಕ್ರವಾರ  ಸಿಬಿಐ ಅಧಿಕಾರಿಗಳ ತಂಡವು  ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಂದ  ಹೇಳಿಕೆ ಪಡೆದುಕೊಂಡಿತು.ದೆಹಲಿ ಜಾಗೃತ ದಳವು ನೀಡಿದ ದೂರಿನ ಮೇಲೆ ಸಿಬಿಐ ಅಧಿಕಾರಿಗಳು ಕಳೆದ ಜನವರಿಯಲ್ಲಿ ಎಫ್‌ಐಆರ್‌ ದಾಖಲಿಸಿತ್ತು.ಸಿಸೋಡಿಯಾ ಮನೆ ಮೇಲೆ ದಾಳಿ ನಡೆದಿದೆ ಎಂಬ ಊಹಾಪೋಹಳಿಗೆ ಸ್ಪಷ್ಟನೆ ನೀಡಿದ ಸಿಬಿಐ ಅಧಿಕಾರಿಗಳು, “ಯಾವುದೇ ಹುಡುಕಾಟ, ಅಥವಾ ದಾಳಿ ನಡೆಸಿಲ್ಲ. ಕೆಲ ಸ್ಪಷ್ಟನೆ ಪಡೆಯುವುದಕ್ಕಾಗಿ ಭೇಟಿ ನೀಡಿದ್ದೆವು’ ಎಂದು ತಿಳಿಸಿದ್ದಾರೆ.ಟಾಕ್‌ ಟು ಎಕೆ ಪ್ರಚಾರ ಆಂದೋಲನಕ್ಕೆ ಸಲಹೆಗಾರರನ್ನು ನೇಮಿಸಿ, ₹1.5 ಕೋಟಿ ಪಾವತಿಸಲಾಗಿತ್ತು. ಇದಕ್ಕೆ ಪ್ರಧಾನ ಕಾರ್ಯದರ್ಶಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry