ತಿವಾರಿ ಸಾವು:ಎಫ್‌ಐಆರ್‌ ದಾಖಲಿಸಿದ ಸಿಬಿಐ

7

ತಿವಾರಿ ಸಾವು:ಎಫ್‌ಐಆರ್‌ ದಾಖಲಿಸಿದ ಸಿಬಿಐ

Published:
Updated:
ತಿವಾರಿ ಸಾವು:ಎಫ್‌ಐಆರ್‌ ದಾಖಲಿಸಿದ ಸಿಬಿಐ

ಬೆಂಗಳೂರು:  ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಈ ಸಂಬಂಧ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ.

ಅನುರಾಗ್‌ ತಿವಾರಿ ಸಹೋದರ ಮಯಾಂಕ್‌ ತಿವಾರಿ ನೀಡಿದ್ದ ದೂರು ಆಧರಿಸಿ  ದೆಹಲಿ ಕಚೇರಿಯಲ್ಲಿ  ಎಫ್‌ಐಆರ್‌ ದಾಖಲಾಗಿದೆ.

ಮೇ 17ರಂದು ಅನುರಾಗ್‌ ತಿವಾರಿ  ಮೃತಪಟ್ಟಿದ್ದರು. ಸಾವಿನಲ್ಲಿ ಅನುಮಾನವಿದೆ ಎಂದು ಕುಟುಂಬದವರು ದೂರು ಕೊಟ್ಟಿದ್ದರು.

ಬಳಿಕ ಉತ್ತರ ಪ್ರದೇಶ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯಕ್ಕೆ ಪತ್ರ ಬರೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry