ಜಿಎಸ್‌ಟಿ: ದಿನಬಳಕೆ ಸರಕು ಬಹುತೇಕ ಅಗ್ಗ

7

ಜಿಎಸ್‌ಟಿ: ದಿನಬಳಕೆ ಸರಕು ಬಹುತೇಕ ಅಗ್ಗ

Published:
Updated:
ಜಿಎಸ್‌ಟಿ: ದಿನಬಳಕೆ ಸರಕು ಬಹುತೇಕ ಅಗ್ಗ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ದಿನ ಬಳಕೆಯ ಬಹುತೇಕ ಸರಕುಗಳು  ಜುಲೈ 1ರಿಂದ ಅಗ್ಗವಾಗಲಿವೆ.

ಹಾಲಿನ ಪುಡಿ, ಮೊಸರು, ಮಜ್ಜಿಗೆ, ಬ್ರ್ಯಾಂಡ್‌ರಹಿತ ಜೇನು, ಚೀಸ್‌, ಮಸಾಲೆ ಪದಾರ್ಥಗಳು, ಅಡುಗೆ ಅನಿಲ (ಎಲ್‌ಪಿಜಿ), ನೋಟ್‌ಬುಕ್‌, ಇನ್ಸುಲಿನ್‌, ಅಗರಬತ್ತಿ    ಬೆಲೆಗಳು ಕಡಿಮೆಯಾಗಲಿವೆ.ಸದ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಹಲವು ಪರೋಕ್ಷ ತೆರಿಗೆಗಳಿಗೆ ಹೋಲಿಸಿದರೆ, ಜಿಎಸ್‌ಟಿ ದರಗಳು ಕಡಿಮೆ ಇರಲಿವೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.ಶೇಂಗಾ, ಸೂರ್ಯಕಾಂತಿ, ಕೊಬ್ಬರಿ ಹಾಗೂ ಸಾಸಿವೆ ಎಣ್ಣೆ , ಸಕ್ಕರೆ, ನೂಡಲ್ಸ್‌, ಹಣ್ಣು, ತರಕಾರಿ, ಕೆಚಪ್‌ ಮತ್ತು ಸಾಸ್‌ ಬೆಲೆ ಇಳಿಯಲಿದೆ.

ಸರ್ಕಾರ ಬಿಡುಗಡೆ ಮಾಡಿರುವ  ಸರಕುಗಳ ಬೆಲೆ ಅಗ್ಗವಾಗಲಿರುವ ಪಟ್ಟಿಯಲ್ಲಿ –  ಇನ್‌ಸ್ಟಂಟ್‌  ಫುಡ್‌ ಮಿಕ್ಸಸ್‌, ಖನಿಜಯುಕ್ತ ನೀರು, ಸಿಮೆಂಟ್‌,

ಕಲ್ಲಿದ್ದಲು, ಪಡಿತರ ವ್ಯವಸ್ಥೆ ಮೂಲಕ ವಿತರಿಸುವ ಸೀಮೆಎಣ್ಣೆ, ಟೂಥ್‌ ಪೌಡರ್, ಟೂಥ್‌ ಪೇಸ್ಟ್‌, ಕೇಶ ತೈಲ, ಎಕ್ಸ್‌ರೇ ಫಿಲ್ಮ್ಸ್‌, ರೇಷ್ಮೆ ಮತ್ತು ಉಣ್ಣೆ ವಸ್ತ್ರ, ಹತ್ತಿ  ಬಟ್ಟೆ, ₹ 500ವರೆಗಿನ ಪಾದರಕ್ಷೆ ಮತ್ತು ಹೆಲ್ಮೇಟ್‌ ಅಗ್ಗವಾಗಲಿವೆ. ಎಲ್‌ಪಿಜಿ ಒಲೆ, ಚಮಚಗಳೂ ಅಗ್ಗದ ಸರಕುಗಳ ಪಟ್ಟಿಯಲ್ಲಿ ಸೇರಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry