ಕೊಚ್ಚಿ ಮೆಟ್ರೊ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

7

ಕೊಚ್ಚಿ ಮೆಟ್ರೊ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

Published:
Updated:
ಕೊಚ್ಚಿ ಮೆಟ್ರೊ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ತಿರುವನಂತಪುರ(ಕೊಚ್ಚಿ): ಕೇರಳದ ಕೊಚ್ಚಿ ನಗರದ ಮೆಟ್ರೊ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಚಾಲನೆ ನೀಡಿ, ಲೋಕಾರ್ಪಣೆಗೊಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ‘ಮೆಟ್ರೊ ಮ್ಯಾನ್‌’ ಖ್ಯಾತಿಯ ಇ. ಶ್ರೀಧರನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೇಂದ್ರ ಸಚಿವ ವೆಂಕಯ್ಯನಾಯ್ಡು, ಕೇರಳದ ಗವರ್ನರ್‌ ಪಿ. ಸದಾಶಿವಂ ಭಾಗವಹಿಸಿದ್ದರು.

ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಸೇರಿದಂತೆ ಎಲ್ಲ ಗಣ್ಯರು ಕೊಚ್ಚಿಯ ಪಾಲರಿವಟ್ಟಂನಿಂದ ಪಥಡಿಪಲಂ ವರೆಗೆ 13.2 ಕಿ.ಮೀ. ಉದ್ದದ ಮಾರ್ಗದಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು.

2012ರಲ್ಲಿ ಕೊಚ್ಚಿ ಮೆಟ್ರೊ ಕಾಮಗಾರಿ ಆರಂಭವಾಗಿತ್ತು. ಮೆಟ್ರೊ ಕಾಮಗಾರಿ ಹೊಣೆಯನ್ನು ದೆಹಲಿ ಮೆಟ್ರೊ ರೈಲು ನಿಗಮಕ್ಕೆ ವಹಿಸಲಾಗಿತ್ತು. ಹೀಗಾಗಿ ಕೊಚ್ಚಿ ಮೆಟ್ರೊ ನಿರ್ಮಾಣದ ಶ್ರೇಯ ಶ್ರೀಧರನ್ ಅವರಿಗೂ ಸಲ್ಲುತ್ತದೆ ಎಂದು ಮೂಲಗಳು ತಿಳಿಸಿದ್ದವು.

ವಿಶೇಷತೆ

* ಇದು ಕೇರಳದ ಮೊದಲ ಮೆಟ್ರೊ ರೈಲು ಮಾರ್ಗ

* ಪಲರಿವಟ್ಟಂ – ಪಥಾಡಿಪ್ಪಲಮ್‌ ನಡುವೆ ಸಂಪರ್ಕ

* 13.2 ಕಿ.ಮೀ ಉದ್ದ ಈ ಮಾರ್ಗದಲ್ಲಿ 13 ನಿಲ್ದಾಣಗಳಿವೆ

* ಈ ಮಾರ್ಗದಲ್ಲಿ ಬಸ್‌ ಸಂಚಾರಕ್ಕೆ ತಗಲುವ ಅವಧಿ 45 ನಿಮಿಷ, ಇದೀಗ ಮೆಟ್ರೊ ಸಂಚಾರಕ್ಕೆ ತಗಲುವ ಅವಧಿ ಕೇವಲ 23 ನಿಮಿಷ

* ಇದು ಸಂವಹನ ತಂತ್ರಜ್ಞಾನ ಅಳವಡಿಸಿಕೊಂಡಿರುವ ಮೊದಲ ಮೆಟ್ರೊ

* ಪ್ರತಿ ನಿಲ್ದಾಣದಲ್ಲಿ ಸೋಲಾರ್‌ ಅಳವಡಿಕೆ ಇದ್ದರಿಂದ ಶೇ. 35 ಎಷ್ಟು ವಿದ್ಯುತ್‌ ಉಳಿತಾಯ

* ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡುವ ಭರವಸೆ

* ಈ ಯೋಜನೆಯ ಒಟ್ಟು ಮೊತ್ತ ₹ 5180 ಕೋಟಿ

* ಪ್ರಯಾಣ ದರ ಕನಿಷ್ಠ ₹15 ಗರಿಷ್ಠ ₹ 30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry