ಹಾಲಿವುಡ್‌ನ ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ ನಿಧನ

7

ಹಾಲಿವುಡ್‌ನ ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ ನಿಧನ

Published:
Updated:
ಹಾಲಿವುಡ್‌ನ ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ ನಿಧನ

ಲಾಸ್‌ಏಂಜಲ್ಸ್‌: ‘ರಾಕಿ’ ಮತ್ತು ‘ದಿ ಕರಾಟೆ ಕಿಡ್’ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಜಾನ್‌ ಜಿ ಅವಿಲ್ಡ್‌ಸೆನ್ ಅವರು ಶುಕ್ರವಾರ ನಿಧನರಾಗಿದ್ದಾರೆ.

‘ತಂದೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶುಕ್ರವಾರ ಲಾಸ್‌ಏಂಜಲ್ಸ್‌ನಲ್ಲಿ ನಿಧನರಾಗಿದ್ದಾರೆ’ ಎಂದು ಜಾನ್‌ ಜಿ ಅವಿಲ್ಡ್‌ಸೆನ್ ಅವರ ಪುತ್ರ ಆಂಟನಿ ಅವಿಲ್ಡ್‌ಸೆನ್ ತಿಳಿಸಿದ್ದಾರೆ.

‘ಅವರೊಬ್ಬ ಅದ್ಭುತ ವ್ಯಕ್ತಿ. ಬಹುಮುಖ ಪ್ರತಿಭೆಯುಳ್ಳವರಾಗಿದ್ದು, ಜತೆಗೆ ಹೆಚ್ಚು ಮೊಂಡುತನದ ಸ್ವಭಾವದವರಾಗಿದ್ದರು. ಇದು ಅವರ ವಿನಾಶಕ್ಕೆ ಕಾರಣವಾಯಿತ್ತು’ ಎಂದು ಆಂಟನಿ ಹೇಳಿದ್ದಾರೆ.

81 ವರ್ಷದ ಜಾನ್‌ ಜಿ ಅವಿಲ್ಡ್‌ಸೆನ್ ಅವರ ನಿರ್ದೇಶನದಲ್ಲಿ ಮೂಡಿಬಂದ ‘ರಾಕಿ’(1977) ಚಿತ್ರ ಹೆಚ್ಚು ಜನಪ್ರಿಯತೆ ಗಳಿಸಿತ್ತು. ವರ್ಷದ ಉತ್ತಮ ಚಿತ್ರ ಹಾಗೂ ನಿರ್ದೇಶನ ಹಾಗೂ ಸಂಕಲನಕ್ಕೆ ಆಸ್ಕರ್‌ ಪ್ರಶಸ್ತಿ ಲಭಿಸಿದೆ.

₹ 10ಲಕ್ಷ ಬಜೆಟ್‌ನಲ್ಲಿ ತಯಾರದ ರಾಕಿ ಚಿತ್ರ ಕೇವಲ 28 ದಿನಗಳಲ್ಲಿ ಆ ಹಣವನ್ನು ಹಿಂಪಡೆಯಿತ್ತು. ಈ ಚಿತ್ರದ ಯಶಸ್ಸಿನ ನಂತರ ‘ರಾಕಿ’ 5 ಸರಣಿ ಚಿತ್ರಗಳು ತೆರೆಕಂಡವು.

‘ದಿ ಕರಾಟೆ ಕಿಡ್‌’ ಚಿತ್ರ 1989ರಲ್ಲಿ ಬಿಡುಗಡೆಯಾಗಿ ಹೆಚ್ಚು ಯಶಸ್ಸನ್ನು ಗಳಿಸಿತ್ತು.

ಜಾನ್‌ ಜಿ ಅವಿಲ್ಡ್‌ಸೆನ್ ಅವರಿಗೆ ಮೂವರು ಪುತ್ರರಾದ ಜೊನತನ್‌, ಅಶ್ಲೆ, ಆಂಟನಿ ಹಾಗೂ ಪುತ್ರಿ ಬ್ರಿಜೆಟ್ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry