ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಐಟಿಕೆ, ನಿಟ್ಟೆಯಲ್ಲಿ ಇನ್ನೊವೇಶನ್‌ ಹಬ್‌’

Last Updated 17 ಜೂನ್ 2017, 7:01 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಎನ್‌ಐಟಿಕೆ ಮತ್ತು ನಿಟ್ಟೆ ವಿಶ್ವವಿದ್ಯಾಲಯಗಳಲ್ಲಿ ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆ ಯಡಿ ಇನ್ನೊವೇಶನ್‌ ಹಬ್‌ ಆರಂಭಿ ಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ನಗರದ ಶಿವಬಾಗ್‌ನ ಪಾಲಿಕೆ ಕಟ್ಟಡದಲ್ಲಿ ಇನ್‌ಕ್ಯುಬೇಶನ್‌ ಸೆಂಟರ್‌ನ ಸ್ಥಳ ವೀಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಆಯೋ ಗದ ಸಹಯೋಗದಲ್ಲಿ ಇನ್ನೊವೇಶನ್‌ ಹಬ್‌ ಪ್ರಾರಂಭಿಸಲಾಗುತ್ತಿದೆ. ಈ ಭಾಗದ ಪ್ರಗತಿಗೆ ಇದು ಪೂರಕವಾಗ ಲಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಪ್ರತಿಭಾ ಪಲಾಯನ ತಡೆಯಲು ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದರ ಅಡಿಯಲ್ಲಿ ನಗರದ ಪಾಲಿಕೆ ಕಟ್ಟಡದಲ್ಲಿ ಇನ್‌ಕ್ಯುಬೇಶನ್‌ ಸೆಂಟರ್‌ ಆರಂಭಿಸಲಾಗುತ್ತಿದೆ. ಈ ಮೂಲಕ ಈ ಭಾಗದ ಪ್ರತಿಭೆಗಳಿಗೆ ಮೂಲಸೌಕರ್ಯಗಳೊಂದಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಸಹಯೋಗದಲ್ಲಿ ಇನ್‌ಕ್ಯುಬೇ ಶನ್‌ ಸೆಂಟರ್‌ ಆರಂಭವಾಗುತ್ತಿದ್ದು, ಇದಕ್ಕಾಗಿ ತಮ್ಮ ಅನುದಾನದಡಿ ₹1.18 ಕೋಟಿ ನೀಡಲಾಗುವುದು ಎಂದು ತಿಳಿಸಿದರು.

ಈ ಕೇಂದ್ರದಲ್ಲಿ ಹೊಸ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು. ಅವರ ಅಗತ್ಯಕ್ಕೆ ತಕ್ಕಂತೆ ಒಂದು ವಾರ, ಹದಿನೈದು ದಿನ, ಒಂದು ತಿಂಗಳು ಹೀಗೆ ಕಡಿಮೆ ಬಾಡಿಗೆ ದರದಲ್ಲಿ ಈ ಕೇಂದ್ರ ವನ್ನು ನೀಡಲಾಗುವುದು. ಇಲ್ಲಿನ ಪ್ರತಿಭೆ ಗಳು ಈ ಕೇಂದ್ರದ ಮೂಲಕ ತಮ್ಮ ಸಂಶೋಧನೆಗಳನ್ನು ಪೂರೈಸಬಹುದಾ ಗಿದ್ದು, ಇದರಿಂದ ಈ ಭಾಗದ ಸಮಸ್ಯೆ ಗಳ ನಿವಾರಣೆಗೂ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಕೈಗಾರಿಕೆಗಳೂ ತಮ್ಮ ಸಮಸ್ಯೆಗಳಿಗೆ ಈ ಕೇಂದ್ರದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಈ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಸಾಧ್ಯವಿದ್ದು, ಇಲ್ಲಿನ ಕೈಗಾರಿಕಾ ಅಭಿವೃದ್ಧಿಗೂ ನೆರವು ದೊರೆಯಲಿದೆ. ಒಟ್ಟಾರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಈ ಕೇಂದ್ರಕ್ಕೆ ಬರುವ ಸಂಶೋಧ ಕರಿಗೆ ಅಗತ್ಯ ನೆರವು ಒದಗಿಸಲು ನಾಸ್ಕಾಂ ಮುಂದೆ ಬಂದಿದ್ದು, ಅಲ್ಲಿನ ಸಂಪನ್ಮೂಲ ವ್ಯಕ್ತಿಗಳು ತಾಂತ್ರಿಕ ನೆರವು ಒದಗಿಸಲಿದ್ದಾರೆ ಎಂದರು.

ಬೇಡಿಕೆ ಇರಲಿಲ್ಲ: ಈ ಭಾಗದಲ್ಲಿ ಇನ್‌ಕ್ಯುಬೇಶನ್‌ ಸೆಂಟರ್‌ ಆರಂಭಿಸು ವಂತೆ ಯಾವುದೇ ಬೇಡಿಕೆ ಬಂದಿರಲಿಲ್ಲ. ಬೆಂಗಳೂರಿನಲ್ಲಿ ನೋಡಲ್‌ ಕೇಂದ್ರ ವಿದ್ದು, ಅಲ್ಲಿನ ದಟ್ಟಣೆಯನ್ನು ನಿವಾರಿಸು ವುದಕ್ಕಾಗಿ ಮಂಗಳೂರಿನಲ್ಲಿ ಇನ್‌ಕ್ಯು ಬೇಶನ್‌ ಸೆಂಟರ್‌ ಆರಂಭಿಸಲು ನಿರ್ಧರಿ ಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್‌, ಇನ್‌ಕ್ಯುಬೇಶನ್‌ ಸೆಂಟರ್‌ ಆರಂಭಿ ಸುವುದಕ್ಕೆ ₹1.18 ಕೋಟಿ ಅಂದಾಜಿಸ ಲಾಗಿದೆ. ಅನುದಾನ ದೊರೆತ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣವಾಗ ಲಿದ್ದು, ಲೋಕಾರ್ಪಣೆ ಆಗಲಿದೆ ಎಂದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಜೀವನ್ ಸಲ್ಡಾನ ಮಾತ ನಾಡಿ, ಸಂಸ್ಥೆಯು ಈ ಕಟ್ಟಡದಲ್ಲಿ ಸುಸ ಜ್ಜಿತ ಇನ್‌ಕ್ಯುಬೇಶನ್‌ ಸೆಂಟರ್‌ ನಿರ್ಮಾ ಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂ ಡಿದೆ. ಈಗಾಗಲೇ ಕೆಲವು ಜನರು ಇಲ್ಲಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್‌ ಕಟೀಲು, ಮೇಯರ್‌ ಕವಿತಾ ಸನಿಲ್‌, ಉಪಮೇಯರ್‌ ರಜನೀಶ್‌ ಕಾಪಿಕಾಡ್‌, ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್‌, ಮಾಜಿ ಶಾಸಕ ರಾದ ಯೋಗೀಶ್‌ ಭಟ್‌, ಮೋನಪ್ಪ ಭಂಡಾರಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗವೇಣಿ, ಸಬಿತಾ ಮಿಸ್ಕಿತ್‌, ಸದಸ್ಯರಾದ ರೂಪಾ ಡಿ. ಬಂಗೇರಾ, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ವೇದವ್ಯಾಸ ಕಾಮತ್‌ ಇದ್ದರು.

 * * 

ಇನ್‌ಕ್ಯುಬೇಶನ್‌ ಸೆಂಟರ್‌ ಆರಂಭಿಸಲು ₹1.18 ಕೋಟಿ ಅಂದಾಜಿಸಲಾಗಿದೆ. ಹೆಚ್ಚಿನ ಅನುದಾನ ಅಗತ್ಯಬಿದ್ದರೆ, ಬಿಡುಗಡೆ ಮಾಡಲಾಗುವುದು.
ನಿರ್ಮಲಾ ಸೀತಾರಾಮನ್‌
ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT