ಕಾಶ್ಮೀರ: ಎನ್‌ಕೌಂಟರ್‌ ಸ್ಥಳದಿಂದ ಜುನೈದ್‌ ಮಟ್ಟೂ ಸೇರಿ ಮೂವರು ಉಗ್ರರ ಶವ ವಶಕ್ಕೆ

7

ಕಾಶ್ಮೀರ: ಎನ್‌ಕೌಂಟರ್‌ ಸ್ಥಳದಿಂದ ಜುನೈದ್‌ ಮಟ್ಟೂ ಸೇರಿ ಮೂವರು ಉಗ್ರರ ಶವ ವಶಕ್ಕೆ

Published:
Updated:
ಕಾಶ್ಮೀರ: ಎನ್‌ಕೌಂಟರ್‌ ಸ್ಥಳದಿಂದ ಜುನೈದ್‌ ಮಟ್ಟೂ ಸೇರಿ ಮೂವರು ಉಗ್ರರ ಶವ ವಶಕ್ಕೆ

ಶ್ರೀನಗರ: ಭದ್ರತಾ ಪಡೆ ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಿಷೇಧಿತ ಲಷ್ಕರ್‌–ಎ–ತಯಬಾ ಸಂಘಟನೆ ಕಮಾಂಡರ್‌ ಜುನೈದ್‌ ಮಟ್ಟೂ ಹಾಗೂ ಇತರ ಇಬ್ಬರು ಉಗ್ರರ ಶವಗಳನ್ನು ಭದ್ರತಾ ಪಡೆ ವಶಕ್ಕೆ ಪಡೆದಿದೆ.

ಅನಂತನಾಗ್ ಜಿಲ್ಲೆಯ ಬಿಜ್‌ಬೆಹರ ಸಮೀಪದ ಅರ್ವಾನಿ ಗ್ರಾಮದಲ್ಲಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಶುಕ್ರವಾರ ಮಧ್ಯಾಹ್ನ ನಡೆದ ಗುಂಡಿನ ಕಾಳಗದಲ್ಲಿ ಜುನೈದ್ ಮಟ್ಟೂ ಸೇರಿ ಮೂವರು ಉಗ್ರಗಾಮಿಗಳು ಹತ್ಯೆಯಾಗಿದ್ದರು.

24 ವರ್ಷ ವಯಸ್ಸಿನ ಜುನೈದ್‌ ಮಟ್ಟೂ ಅಲಿಯಾಸ್ ‘ಜನಾ’ ಎಂಬಾತನ ದೇಹದ ಜತೆ ಇತರ ಇಬ್ಬರು 18 ವರ್ಷ ವಯಸ್ಸಿನ ಆದಿಲ್ ಮುಷ್ತಾಕ್ ಮಿರ್ ಅಲಿಯಾಸ್ ‘ನನ’ ಮತ್ತು 20 ವರ್ಷದ ನಿಸಾರ್ ಅಹ್ಮದ್ ವಾನಿ ಎಂಬ ಉಗ್ರರ ಮೃತ ದೇಹಗಳನ್ನು ಗುರುತಿಸಲಾಗಿದೆ. ಎಲ್ಲ ಮೂವರು ನಿಷೇಧಿತ ಲಷ್ಕರ್‌–ಎ–ತಯಬಾ ಭಯೋತ್ಪಾದಕ ಸಂಘಟನೆಗೆ ಸೇರಿದವರು.

ಕುಲ್ಗಾಮ್‌ನ ಖಿದ್ವಾನಿ ಗ್ರಾಮದಿಂದ ಬಂದ 24 ವರ್ಷದ ಮಟ್ಟೂ 2015ರ ಜೂನ್‌ನಲ್ಲಿ ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದ. ಕಳೆದ ವರ್ಷ್ ಜೂನ್‌ನಲ್ಲಿ ಅನಂತನಾಗ್‌ನ ಬಸ್‌ನಿಲ್ದಾಣದಲ್ಲಿ ಹಗಲು ವೇಳೆಯಲ್ಲೇ ಇಬ್ಬರು ಪೊಲೀಸರನ್ನು ಗುಂಡಿಕ್ಕಿ ಕೊಂದಿದ್ದ. ಬಳಿಕ, ನಿಷೇಧಿತ ಲಷ್ಕರ್‌–ಎ–ತಯಬಾ ಗುಂಪಿನ ದಕ್ಷಿಣ ಕಾಶ್ಮೀರದ ಕಮಾಂಡರ್ ಆಗಿ ನೇಮಕಗೊಂಡಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry