ಡಾರ್ಜಿಲಿಂಗ್‌ನಲ್ಲಿ ಜಿಜೆಎಂ ಬೆಂಬಲಿಗರು– ಪೊಲೀಸರ ಮಧ್ಯೆ ಘರ್ಷಣೆ

7

ಡಾರ್ಜಿಲಿಂಗ್‌ನಲ್ಲಿ ಜಿಜೆಎಂ ಬೆಂಬಲಿಗರು– ಪೊಲೀಸರ ಮಧ್ಯೆ ಘರ್ಷಣೆ

Published:
Updated:
ಡಾರ್ಜಿಲಿಂಗ್‌ನಲ್ಲಿ ಜಿಜೆಎಂ ಬೆಂಬಲಿಗರು– ಪೊಲೀಸರ ಮಧ್ಯೆ ಘರ್ಷಣೆ

ಡಾರ್ಜಿಲಿಂಗ್‌: ಗೂರ್ಖಾ ಜನಮುಕ್ತಿ ಮೋರ್ಚಾದ(ಜಿಜೆಎಂ) ಪ್ರತಿಭಟನಾಕಾರರು ಶನಿವಾರ ಪೊಲೀಸರ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ತೂರಿದ್ದು, ಪರಸ್ಪರ ಘರ್ಷಣೆ ನಡೆದಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ರಬ್ಬರ್‌ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿದ್ದಾರೆ.

ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ಮುಂದುವರಿದಿದ್ದು, ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿದ್ದರಿಂದ ಘರ್ಷಣೆ ನಡೆದಿದೆ.

ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿ, ಪ್ರತಿಭಟನೆ ಹಾಗೂ ಯಾವುದೇ ಬಗೆಯ ಮೆರವಣಿಗೆ ನಡೆಸಲು ಅನುಮತಿ ನೀಡಿರಲಿಲ್ಲ. ಈ ಮದ್ಯೆ ಜಿಜೆಎಂ ಬೆಂಬಲಿಗರು ನಿಷೇಧ ಹೇರಿಕೆಯನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಅವರು, ಪೊಲೀಸರತ್ತ ಕಲ್ಲು ಮತ್ತು ಬಾಟಲಿಗಳನ್ನು ತೂರಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ರಬ್ಬರ್‌ ಗುಂಡುಗಳನ್ನು ಹಾರಿಸಿ, ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry