‘ಕೃಷಿ ಉದ್ಯಮವಾಗಿ ಬೆಳೆಯಲಿ’

7

‘ಕೃಷಿ ಉದ್ಯಮವಾಗಿ ಬೆಳೆಯಲಿ’

Published:
Updated:
‘ಕೃಷಿ ಉದ್ಯಮವಾಗಿ ಬೆಳೆಯಲಿ’

ಕನಕಪುರ: ‘ಕಾರ್ಪೋರೇಟ್‌ ವಲಯ ಮತ್ತು ಬುದ್ದಿ ಜೀವಿಗಳು ಕೃಷಿ ಕ್ಷೇತ್ರದತ್ತ ಮುಖ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕೃಷಿ ಉದ್ಯಮವಾಗಿ ಬೆಳೆ ಯಲಿದೆ’ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು. ತಾಲ್ಲೂಕಿನ ಸಾತನೂರು ಹೋಬಳಿ ಅರೆಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತ ನಾಡಿದರು.

ವ್ಯವಸಾಯದಲ್ಲಿ ಏನು ಲಾಭವಿಲ್ಲವೆಂದು ಗ್ರಾಮೀಣ ಭಾಗದ ರೈತರು ತಮ್ಮ ಕೃಷಿ ಜಮೀನುಗಳನ್ನು ಪಾಳು ಬಿಟ್ಟು ನಗರಗಳತ್ತ ಮುಖ ಮಾಡುತ್ತಿದ್ದಾರೆ, ಆದರೆ ನಗರದಲ್ಲಿನ ಉದ್ಯೋಗಿಗಳು ಮತ್ತು ಬುದ್ದಿಜೀವಿಗಳು ರೈತರು ಕೇಳಿದಷ್ಟು ಬೆಲೆಕೊಟ್ಟು ಜಮೀನು ಖರೀದಿ ಮಾಡಿ ವ್ಯವಸಾಯಕ್ಕೆ ಮುಂದಾಗುತ್ತಿದ್ದಾರೆಎಂದರು

ಇದರ ಅರ್ಥ ಕೃಷಿಯಲ್ಲಿ ಲಾಭ ಇಲ್ಲ: ಸರಿಯಾದ ರೀತಿಯಲ್ಲಿ ಕ್ರಮ ಅನುಸರಿಸಿ ಕೃಷಿ ಮಾಡದಿರುವುದು ನಷ್ಟಕ್ಕೆ ಕಾರಣ ವಾಗಿದೆ, ಭೂಮಿಯಲ್ಲಿ ಇರುವಷ್ಟು ನೀರನ್ನು ತೆಗೆದು ಬರಿದು ಮಾಡುತ್ತಿದ್ದೀರಿ, ಯಾವುದಕ್ಕೆ ಬೆಲೆಯಿದೆ ಮತ್ತು ಸೂಕ್ತ ಮಾರುಕಟ್ಟೆ ನೋಡಿ ಕೊಂಡು ಕೃಷಿ ಮಾಡದಿರುವುದು ಕೃಷಿ ಯಲ್ಲಿ ವೈಫಲ್ಯವಾಗಲು ಕಾರಣವೆಂದು ತಿಳಿಸಿದರು.

ಹೆಚ್ಚುವರಿ ಹಾಲನ್ನು ಬೇರೆ ರಾಜ್ಯಗಳಿಗೆ ಕಳುಹಿಸಿ ಇತರೆ ಉತ್ಪನ್ನ ಮಾಡುತ್ತಿದ್ದರಿಂದ ಹೆಚ್ಚಿನ ಲಾಭ ಖರ್ಚಾಗುತ್ತಿತ್ತು. ತಾಲ್ಲೂಕಿನಲ್ಲೇ ಮೆಗಾಡೇರಿಯ ಘಟಕ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಧಾರಣೆ ಸಿಗಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯಎಸ್‌.ರವಿ ಮಾತನಾಡಿ, ಒಂದು ಗ್ರಾಮಕ್ಕೆ ಹಾಲಿನ ಡೇರಿ ಬಂದರೆ ಅದು ಕಾರ್ಖಾನೆ ಯಿದ್ದಂತೆ ಗ್ರಾಮದ ಜನತೆ ಉದ್ಯೋಗ ಮತ್ತು ಆರ್ಥಿಕ ಶಕ್ತಿಯನ್ನು ನೀಡಲಿದೆ ಎಂದರು.

ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಗೆ ಪ್ರಮುಖವಾಗಿ ನೀರು ಬೇಕಿದ್ದು ಸಂಸದರು ಮತ್ತು ಸಚಿವರು ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್‌ ಪೂರೈಕೆಗಾಗಿ ಇಬ್ಬರು ರೈತರಿಗೆ ಒಂದು ಟಾರ್ನ್ಸ್‌ ಫಾರ್ಮರ್‌ ಅಳವಡಿಸಿ ಕೊಟ್ಟಿದ್ದಾರೆ ಎಂದರು.

ಬಿ.ಎಂ.ಐ.ಸಿ. ಮಾಜಿ ಅಧ್ಯಕ್ಷ ಎಚ್‌.ಕೆ.ಶ್ರೀಕಂಠು, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಚ್‌.ಪಿ. ರಾಜಕುಮಾರ್‌, ಮಾಜಿ ನಿರ್ದೇಶಕ ನಟೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಕುರಬಳ್ಳಿ ಶಂಕರ್‌, ತಾಲ್ಲೂಕು ಪಂಚಾ ಯಿತಿ ಸದಸ್ಯ ಧನಂಜಯ, ನಗರಸಭೆ ಮಾಜಿ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೊಡ್ಡೀ ರೇಗೌಡ, ಮಾಜಿ ಅಧ್ಯಕ್ಷ ಬೆಟ್ಟೇಗೌಡ, ಉಪಾಧ್ಯಕ್ಷೆ ವೀಣಾ ನಾರಾಯಣ, ಹಾಲಿನ ಡೇರಿ ಅಧ್ಯಕ್ಷೆ ಭಾರತಿಸ್ವಾಮಿ, ಉಪಾಧ್ಯಕ್ಷೆ ರೂಪ ಪುಟ್ಟಸ್ವಾಮಿ ಕಾರ್ಯದರ್ಶಿ ಗೀತಾ ಮತ್ತಿತರರು ಉಪಸ್ಥಿತರಿದ್ದರು.

* * 

ಕನಕಪುರ ತಾಲ್ಲೂಕಿನಲ್ಲಿ  ರಾಜ್ಯದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ.  248 ಹಾಲಿನ ಡೇರಿಗಳು ನಡೆಯುತ್ತಿದ್ದು  ಇನ್ನೂ 50 ಡೇರಿಗಳು ಪ್ರಾರಂಭವಾಗಲಿವೆ

ಎಸ್‌. ರವಿ

ವಿಧಾನ ಪರಿಷತ್ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry