‘ನಾನೊಬ್ಬ ಕಟ್ಟಾ ಮಾಂಸಾಹಾರಿ’

7

‘ನಾನೊಬ್ಬ ಕಟ್ಟಾ ಮಾಂಸಾಹಾರಿ’

Published:
Updated:
‘ನಾನೊಬ್ಬ ಕಟ್ಟಾ ಮಾಂಸಾಹಾರಿ’

ನವದೆಹಲಿ: ‘ನಾನೊಬ್ಬ ಕಟ್ಟಾ ಮಾಂಸಾಹಾರಿ. ನಾನು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನು ಯಾರೂ ಹೇಳಬೇಕಿಲ್ಲ’ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು   ಹೇಳಿದರು.

ಆಕಾಶವಾಣಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಾ, ‘ಗೋಹತ್ಯೆ ಕುರಿತಂತೆ ಕೆಲ ಮಾಧ್ಯಮಗಳು ಚರ್ಚೆಗಳನ್ನು ಆರಂಭಿಸಿವೆ. ಕೇಂದ್ರ ಸರ್ಕಾರ ಭಾರತವನ್ನು ಸಸ್ಯಹಾರಿ ರಾಷ್ಟ್ರವನ್ನಾಗಿ ಮಾರ್ಪಡಿಸಲು ಹೊರಡಿದೆಯೇ ಎಂಬುದರ ಬಗ್ಗೆಯೂ ಚರ್ಚೆ ನಡೆಸುತ್ತಿವೆ. ಗೋಹತ್ಯೆ ಕುರಿತಂತೆ ತಪ್ಪು ಮಾಹಿತಿಗಳನ್ನು ರವಾನಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಎನ್‌ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ ಅವರ ಮನೆ ಮೇಲೆ ಸಿಬಿಐ ನಡೆಸಿದ ದಾಳಿಗೆ  ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಾಧ್ಯಮದವರೆಂಬ ಕಾರಣಕ್ಕೆ ಯಾರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದರು.

ನಿಯಮಗಳನ್ನು ಎಲ್ಲರೂ ಪಾಲನೆ ಮಾಡಬೇಕು. 1975ರ ತುರ್ತು ಪರಿಸ್ಥಿತಿ ಸಮಯದಲ್ಲಷ್ಟೇ ಮಾಧ್ಯಮದವರ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ಅಟ್ಟಲಾಗಿತ್ತು. ಆದರೆ, ಸದ್ಯದ ಬೆಳವಣಿಗೆಯನ್ನು  ವಾಕ್ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಹೋಲಿಕೆ ಮಾಡುವಂತಿಲ್ಲ. ವಾಕ್ ಸ್ವಾತಂತ್ರ್ಯದ ಮೇಲೆ ಸರ್ಕಾರ ನಂಬಿಕೆಯಿಟ್ಟಿದೆ ಎಂದರು.

ಕಾಶ್ಮೀರದ ಶೈಕ್ಷಣಿಕ ಸಂಸ್ಥೆಗಳಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವ ಪ್ರಕರಣ ಕುರಿತಂತೆ ಮಾತನಾಡಿ, ಕೆಲ  ಶಕ್ತಿಗಳು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಇಂತಹ ಚಟುವಟಿಕೆಗಳಿಗೆ  ಆಸ್ಪದ ಕೊಡುವುದಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry