₹706ಕ್ಕೆ ಏರ್‌ ಇಂಡಿಯಾ ಟಿಕೆಟ್

7

₹706ಕ್ಕೆ ಏರ್‌ ಇಂಡಿಯಾ ಟಿಕೆಟ್

Published:
Updated:
₹706ಕ್ಕೆ ಏರ್‌ ಇಂಡಿಯಾ ಟಿಕೆಟ್

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ,  ಪ್ರಯಾಣಿಕರನ್ನು ಆಕರ್ಷಿಸಲು ‘ಸಾವನ್ ಎಕ್ಸ್‌ಪ್ರೆಸ್’ ಮುಂಗಾರು ರಿಯಾಯಿತಿ ಯೋಜನೆ ಘೋಷಿಸಿದೆ. ಕನಿಷ್ಠ ವಿಮಾನ ಪ್ರಯಾಣ ದರಗಳು ₹706ರಿಂದ ಆರಂಭವಾಗುತ್ತವೆ.

ಆಯ್ದ ಕೆಲವು ದೇಶಿಯ ಮಾರ್ಗಗಳಿಗೆ ಇದು ಅನ್ವಯವಾಗುತ್ತದೆ.  ಟಿಕೆಟ್ ಮಾರಾಟ ಜೂನ್ 21ರ ವರೆಗೆ ಇರುತ್ತದೆ. ಜುಲೈ 1ರಿಂದ ಸೆಪ್ಟೆಂಬರ್ 20ರ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಬಹುದು.

ಇತರ ವಿಮಾನಯಾನ ಕಂಪೆನಿಗಳು ಪೈಪೋಟಿಗೆ ಬಿದ್ದು, ವಿಮಾನ ಪ್ರಯಾಣ ದರ ಇಳಿಸುತ್ತಿರುವುದು ಏರ್‌ ಇಂಡಿಯಾದ ಈ ನಿರ್ಧಾರಕ್ಕೆ ಕಾರಣ. ಸ್ಪೈಸ್ ಜೆಟ್ ₹799, ಇಂಡಿಗೊ ₹899, ಗೊ ಏರ್ ₹899, ವಿಸ್ತಾರ ₹849ಕ್ಕೆ ಕನಿಷ್ಠ ವಿಮಾನ ಪ್ರಯಾಣ ದರ ಘೋಷಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry