ಸಚಿನ್‌ ಅತ್ತೆಗೆ ಎಂಬಿಇ ಪ್ರಶಸ್ತಿ

7

ಸಚಿನ್‌ ಅತ್ತೆಗೆ ಎಂಬಿಇ ಪ್ರಶಸ್ತಿ

Published:
Updated:
ಸಚಿನ್‌ ಅತ್ತೆಗೆ ಎಂಬಿಇ ಪ್ರಶಸ್ತಿ

ಮುಂಬೈ: ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ಅತ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ  ಅನ್ನಾಬೆಲ್ ಮೆಹ್ತಾ ಅವರು ‘ಮೆಂಬರ್ ಆಫ್‌ ದಿ ಆರ್ಡರ್‌ ಆಫ್‌ ದಿ ಎಂಪಾಯರ್‌’ (ಎಂಬಿಇ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಅಪ್ನಾಲಯ ಸ್ವಯಂ ಸೇವಾ ಸಂಸ್ಥೆ’ಯ ಮೂಲಕ ಮುಂಬೈಯಲ್ಲಿರುವ ದುರ್ಬಲ ಸಮುದಾಯಗಳ ಜನರಿಗಾಗಿ   ಮಾಡಿದ  ಸೇವೆಯನ್ನು ಗುರುತಿಸಿ ಬ್ರಿಟಿಷ್‌ ಪ್ರಜೆ ಅನ್ನಾಬೆಲ್ ಅವರನ್ನು  ಪ್ರಶಸ್ತಿಗೆ ರಾಣಿ  ಆಯ್ಕೆ ಮಾಡಿದ್ದಾರೆ’ ಎಂದು ಬ್ರಿಟಿಷ್‌ ಹೈಕಮಿಷನ್‌ ಹೇಳಿದೆ.

‘ಈ ವರ್ಷದ ಕೊನೆಯಲ್ಲಿ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ಎಂದು ತಿಳಿಸಿದೆ. ನಾಲ್ಕನೇ ಕಿಂಗ್‌ ಜಾರ್ಜ್‌ 1917ರಲ್ಲಿ  ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

‘2013ರಿಂದ ಅಪ್ನಾಲಯದ ಅಧ್ಯಕ್ಷೆಯಾಗಿರುವ ಅನ್ನಾಬೆಲ್‌ ದುರ್ಬಲ ಸಮುದಾಯಗಳ ಜನರ ಏಳಿಗೆಗೆ ಮಹತ್ವದ ಸೇವೆ ಸಲ್ಲಿಸಿದ್ದಾರೆ’ ಎಂದು ಹೈಕಮಿಷನ್‌ ಹೇಳಿದೆ.

ಅನ್ನಾಬೆಲ್‌ ಅವರು 1940ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜನಿಸಿದ್ದರು. ಆನಂದ್‌ ಮೆಹ್ತಾ ಅವರನ್ನು ಮದುವೆಯಾದ ಬಳಿಕ 1966ರಿಂದ  ಭಾರತದಲ್ಲಿ ನೆಲೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry